ಕೋಲ್ಕತ್ತಾ: ಇತ್ತೀಚೆಗೆ ನಾಪತ್ತೆಯಾಗಿದ್ದ ಬಾಂಗ್ಲಾದೇಶದ (Bangladesh) ಸಂಸದ ಅನ್ವರುಲ್ ಅಜೀಂ ಅನಾರ್ (Anwarul Azim Anar) ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಸಿಐಡಿ (CID) ಅಧಿಕಾರಿಗಳು ನಡೆಸಿದ್ದ ತನಿಖೆಯ ವೇಳೆ ಕತ್ತು ಹಿಸುಕಿ, ಚರ್ಮ ಸುಲಿದು ಬಾಂಗ್ಲಾ ಸಂಸದನ ದೇಹವನ್ನು ಕತ್ತರಿಸಿ ಹಾಕಿದ್ದರು ಎಂಬ ಮಹತ್ವದ ಅಂಶ ಬಯಲಾಗಿದೆ.
ಕೋಲ್ಕತ್ತಾದ (Kolkata) ನ್ಯೂ ಟೌನ್ ಪ್ರದೇಶದಲ್ಲಿರುವ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಕತ್ತು ಹಿಸುಕಿ, ಚರ್ಮ ಸುಲಿದು ಕತ್ತರಿಸಿ ಹಾಕಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಸಂಬಂಧ ಮುಂಬೈನಲ್ಲಿ ನೆಲೆಸಿರುವ ಬಾಂಗ್ಲಾದೇಶದ ಅಕ್ರಮ ವಲಸಿಗ ಜಿಹಾದ್ ಹವಾಲ್ದಾರ್ ಎಂಬಾತನನ್ನು ಅಧಿಕಾರಿಗಳು ಬಂಧಿಸಿದ್ದಾರೆ. ಈತ ಸಂಸದರ ಭೀಕರ ಹತ್ಯೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾನೆ ಎಂದು ಆರೋಪಿಸಲಾಗಿದೆ. ಇದನ್ನೂ ಓದಿ: ಕಾಂಬೋಡಿಯಾದಲ್ಲಿ 60 ಮಂದಿ ಮೋಸದ ಉದ್ಯೋಗ ಜಾಲಕ್ಕೆ ; ಜಾಲಕ್ಕೆ ಸಿಲುಕಿದ್ದ ಭಾರತೀಯರ ರಕ್ಷಣೆ- ಸ್ವದೇಶಕ್ಕೆ ಮರಳಿದ ಮೊದಲ ಬ್ಯಾಚ್
ಕೋಲ್ಕತ್ತಾದ ನ್ಯೂಟೌನ್‌ನಲ್ಲಿರುವ ಫ್ಲಾಟ್‌ನಲ್ಲಿ ಕೊಲೆ ಮತ್ತು ಸಂಸದರ ದೇಹವನ್ನು ತುಂಡು ತುಂಡಾಗಿಸಿ ವಿಕೃತಿ ಮೆರೆದಿರುವ ಬಗ್ಗೆ ಜಿಹಾದ್ ಹವಾಲ್ದಾರ್ ಒಪ್ಪಿಕೊಂಡಿದ್ದಾನೆ ಎಂದು ಸಿಐಟಿ ಮೂಲಗಳ ಪ್ರಕಾರ ತಿಳಿದು ಬಂದಿದೆ. ಸದ್ಯ ಆರೋಪಿ ಕೃತ್ಯದ ಬಗ್ಗೆ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾನೆ. ಜೊತೆಗೆ ಕೊಲೆಯ ಹಿಂದಿನ ಮಾಸ್ಟರ್‌ಮೈಂಡ್ ಬಾಂಗ್ಲಾದೇಶ ಮೂಲದ ಯುಎಸ್ ಪ್ರಜೆ ಅಖ್ತರುಝಾಮಾನ್ ಎಂದು ಹವಾಲ್ದಾರ್ ಬಾಯ್ಬಿಟ್ಟಿದ್ದಾನೆ. ಅಖ್ತರುಜ್ಜಮಾನ್ ಆದೇಶದ ಮೇರೆಗೆ, ಹವಾಲ್ದಾರ್ ಇತರ ನಾಲ್ವರು ಬಾಂಗ್ಲಾದೇಶಿ ಪ್ರಜೆಗಳೊಂದಿಗೆ ಸೇರಿ ನ್ಯೂಟೌನ್ ಅಪಾರ್ಟ್‌ಮೆಂಟ್‌ನಲ್ಲಿ ಸಂಸದರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಹವಾಲ್ದಾರ್ ವಿವರಿಸಿದ್ದಾನೆ. ಇದನ್ನೂ ಓದಿ: ಮಗು ಸತ್ತಿದ್ದೆ ಎಂದು ಅಂತ್ಯಸಂಸ್ಕಾರಕ್ಕೆ ಸಿದ್ಧತೆ- ಅಂತ್ಯಸಂಸ್ಕಾರದ ವೇಳೆ ಕೆಮ್ಮಿದ ಕಂದಮ್ಮ
ಪ್ರಕರಣದ ತನಿಖೆ ನಡೆಸುತ್ತಿರುವ ರಾಜ್ಯ ಸಿಐಡಿ, ನ್ಯೂ ಟೌನ್ ಫ್ಲಾಟ್‌ನಲ್ಲಿ ರಕ್ತದ ಕಲೆಗಳನ್ನು ಪತ್ತೆಹಚ್ಚಿದೆ. ದೇಹದ ಭಾಗಗಳನ್ನು ಎಸೆಯಲು ಬಳಿರುವ ಹಲವಾರು ಪ್ಲಾಸ್ಟಿಕ್ ಚೀಲಗಳನ್ನು ಸಹ ವಶಪಡಿಸಿಕೊಂಡಿದೆ. ಪ್ರಾಥಮಿಕ ತನಿಖೆಯ ಪ್ರಕಾರ, ಸಂಸದರನ್ನು ಮೊದಲು ಕತ್ತು ಹಿಸುಕಿ ನಂತರ ಅವರ ದೇಹವನ್ನು ಹಲವಾರು ತುಂಡುಗಳಾಗಿ ಕತ್ತರಿಸಲಾಗಿದೆ. ಬಳಿಕ ಹತ್ಯೆ ಕುರಿತು ಯಾವುದೇ ಕುರುಹು ಕೂಡ ಸಿಗದಂತೆ ಕೋಲ್ಕತ್ತಾದ ವಿವಿಧ ಪ್ರದೇಶಗಳಲ್ಲಿ ವಿಲೇವಾರಿ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ನಾನು ಪಾಲಿಗ್ರಾಫ್ ಪರೀಕ್ಷೆಗೆ ಸಿದ್ಧ : ಸ್ವಾತಿ ಮಲಿವಾಲ್
ಮೇ 13 ರಂದು ಕೋಲ್ಕತ್ತಾದಲ್ಲಿ ನಾಪತ್ತೆಯಾಗಿದ್ದ ಅನಾರ್ ಹತ್ಯೆಗೀಡಾಗಿದ್ದು, ಮೂವರನ್ನು ಬಂಧಿಸಲಾಗಿದೆ ಎಂದು ಬಾಂಗ್ಲಾದೇಶ ಗೃಹ ಸಚಿವ ಅಸಾದುಝಮಾನ್ ಖಾನ್ ತಿಳಿಸಿದ್ದಾರೆ. ಸದ್ಯ ಜಿಹಾದ್ ಹವಾಲ್ದಾರ್ ನನ್ನು ಇಂದು ಬರಾಸತ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಹೋರಟ ಕಾರು ಪಲ್ಟಿ -ನಾಲ್ವರು ಸ್ಥಳದಲ್ಲೇ ಸಾವು!