ಢಾಕಾ : ಬಾಂಗ್ಲಾದೇಶದ ಪತ್ರಕರ್ತೆ ಸಾರಾ ರೆಹನುಮಾ ಅವರು ಶವವಾಗಿ ಕೆರೆಯಲ್ಲಿ ಪತ್ತೆಯಾಗಿದ್ದಾರೆ. ಸಾರಾಳ ಮೃತದೇಹ ಬುಧವಾರ ಢಾಕಾದ ಹತಿರ್ಜೀಲ್ ಕೆರೆಯಲ್ಲಿ ಪತ್ತೆಯಾಗಿದೆ.
ಬಂಗಾಳಿ ಭಾಷೆಯ ಉಪಗ್ರಹ ಮತ್ತು ಕೇಬಲ್ ಟೆಲಿವಿಷನ್ ಚಾನೆಲ್, ಬಾಂಗ್ಲಾದೇಶದ ಗಾಜಿ ಟಿವಿಯಲ್ಲಿ ನ್ಯೂಸ್ ರೂಂ ಸಂಪಾದಕರಾಗಿದ್ದ ಸಾರಾ ರಹನುಮಾ ಮೃತದೇಹವನ್ನು ಹೊರತೆಗೆದಿರುವುದಾಗಿ ಢಾಕಾ ಮೆಡಿಕಲ್ ಕಾಲೇಜು ಆಸ್ಪತ್ರೆ (ಡಿಎಂಸಿಎಚ್) ಪೊಲೀಸ್ ಹೊರಠಾಣೆ ಉಸ್ತುವಾರಿ ಇನ್ಸ್‌ಪೆಕ್ಟರ್ ಬಚ್ಚು ಮಿಯಾ ಖಚಿತಪಡಿಸಿದ್ದಾರೆ.
ಸಾವಿಗೂ ಮುನ್ನ ಸಾರಾ ಮಂಗಳವಾರ ರಾತ್ರಿ ಫೇಸ್‌ಬುಕ್‌ನಲ್ಲಿ ಸಂದೇಶವೊಂದನ್ನು ಪೋಸ್ಟ್ ಮಾಡಿದ್ದರು. 33 ವರ್ಷದ ಸಾರಾ ಸಾಯುವ ಮೊದಲು ಸಾರಾ ತನ್ನ ಫೇಸ್‍ಬುಕ್ ಪ್ರೊಫೈಲ್‍ನಲ್ಲಿ ಎರಡು ನಿಗೂಢ ಪೋಸ್ಟ್ ಮಾಡಿದ್ದರು.
ಮಂಗಳವಾರ ರಾತ್ರಿ 10:24ಕ್ಕೆ ಮಾಡಿದ ಮೊದಲ ಪೋಸ್ಟ್ ನಲ್ಲಿ ಸಾವಿಗೆ ಅನುಗುಣವಾದ ಜೀವನವನ್ನು ನಡೆಸುವುದಕ್ಕಿಂತ ಸಾಯುವುದು ಉತ್ತಮ’ ಎಂದು ಬರೆದಿದ್ದರು. ರಾತ್ರಿ 10:36ಕ್ಕೆ ಮಾಡಿದ್ದ ಎರಡನೇ ಪೋಸ್ಟ್ ನಲ್ಲಿ ಫಹೀಮ್ ಫೈಸಲ್ ಎಂಬವರನ್ನು ಕುರಿತು ನಿಮ್ಮಂತಹ ಸ್ನೇಹಿತನನ್ನು ಹೊಂದಲು ಸಂತೋಷವಾಗಿದೆ. ದೇವರು ನಿಮ್ಮನ್ನು ಯಾವಾಗಲೂ ಆಶೀರ್ವದಿಸುತ್ತಾನೆ. ನಾವು ಒಟ್ಟಿಗೆ ಸಾಕಷ್ಟು ಯೋಜನೆಗಳ ಕನಸು ಕಂಡಿದ್ದೆವು. ಕ್ಷಮಿಸಿ ನಮ್ಮ ಯೋಜನೆಗಳನ್ನು ಪೂರೈಸಲು ಆಗಲಿಲ್ಲ. ದೇವರು ನಿಮ್ಮನ್ನು ಆಶೀರ್ವದಿಸಲಿ’ ಎಂದು ಬರೆದಿದ್ದಾರೆ. ತಾವಿಬ್ಬರೂ ವಿಚ್ಛೇದನ ಪಡೆಯುವ ಬಗ್ಗೆ ಯೋಚಿಸಿದ್ದೆವು ಎಂದು ಸಾರಾ ಅವರ ಪತಿ ಹೇಳಿರುವುದಾಗಿ ವರದಿಯಾಗಿದೆ.

