ಸದ್ಯ ಸಾಲು ಸಲಾಗಿ ಸಿನಿಮಾಗಳಲ್ಲಿ ಬ್ಯುಸಿಯಿರುವ ಶಿವಣ್ಣ ಅವರು ಇದೀಗ ಅವರ ಅಭಿಮಾನಿಗಳಿಗೆ ಸಿಹಿಸುದ್ದಿ ಸಿಕ್ಕಿದೆ. ಸದ್ಯ ‘ಭೈರತಿ ರಣಗಲ್’ (Bhairathi Rangal) ಚಿತ್ರೀಕರಣದಲ್ಲಿ ಶಿವಣ್ಣ ಬ್ಯುಸಿಯಾಗಿದ್ದು, ಜುಲೈ 12ರಂದು ಶಿವಣ್ಣ ಹುಟ್ಟುಹಬ್ಬದಂದು ಫ್ಯಾನ್ಸ್‌ಗೆ ಬಿಗ್ ಸರ್ಪ್ರೈಸ್ ನೀಡಲು ಚಿತ್ರತಂಡ ಸಜ್ಜಾಗಿದೆ.
ಶಿವನ ನಟನೆಯ ‘ಭೈರತಿ ರಣಗಲ್’ ಬಹುನಿರೀಕ್ಷಿತ ಸಿನಿಮಾ ಆಗಿದ್ದು, ಸಿನಿಮಾದ ಅಪ್‌ಡೇಟ್‌ಗಾಗಿ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಜುಲೈ 12 ರಂದು ಈ ಚಿತ್ರದ ಶೂಟಿಂಗ್ ಕಂಪ್ಲೀಟ್ ಆಗಲಿದೆ ಎಂಬ ಸುದ್ದಿ ಹರಿದಾಡುತ್ತಿದ್ದು, ಶಿವಣ್ಣ ಅವರ 62 ನೇ ವರ್ಷದ ಹುಟ್ಟುಹಬ್ಬ ಆಚರಣೆಗೆ ಚಿತ್ರತಂಡ ಭರ್ಜರಿ ಪ್ಲ್ಯಾನ್ ಮಾಡಿಕೊಳ್ಳುತಿದೆ.

ಹಾಗಾಗಿ ಜುಲೈ 12ರಂದು ಶಿವಣ್ಣ ಪಾತ್ರದ ಟೀಸರ್ ಬಿಡುಗಡೆ ಮಾಡುವ ಮೂಲಕ ಚಿತ್ರತಂಡ ವಿಶೇಷವಾಗಿ ಶುಭಕೋರಲಿದೆಯಂತೆ. ಚಿತ್ರದ ಅಪ್‌ಡೇಟ್‌ಗಾಗಿ ಕಾಯುತ್ತಿದ್ದ ಅಭಿಮಾನಿಗಳಿಗೆ ಶಿವಣ್ಣ ಖದರ್ ನೋಡಲು ಅವಕಾಶ ಸಿಗಲಿದೆ. ಈ ಮೂಲಕ ಫ್ಯಾನ್ಸ್‌ಗೆ ಸರ್ಪ್ರೈಸ್ ಸಿಗಲಿದೆ.
ಭೈರತಿ ರಣಗಲ್’ ಸಿನಿಮಾವನ್ನು ಗೀತಾಪಿಕ್ಚರ್ಸ್ ನಿರ್ಮಾಣವಾಗುತ್ತಿದ್ದು, ಶಿವರಾಜ್‌ಕುಮಾರ್‌ಗೆ ಜೋಡಿಯಾಗಿ ರುಕ್ಮಿಣಿ ವಸಂತ್(Rukmini Vasanth) ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಗೀತಾ ಶಿವರಾಜ್‌ಕುಮಾರ್ ಹುಟ್ಟುಹಬ್ಬಕ್ಕೆ ಚಿತ್ರತಂಡ ಸ್ಪೆಷಲ್ ಮೇಕಿಂಗ್ ವೀಡಿಯೋ ರಿಲೀಸ್ ಮಾಡಿ ಶುಭಕೋರಿದೆ. ಮಫ್ತಿಗಿಂತ ಬಹಳ ಅದ್ಧೂರಿಯಾಗಿ ಪ್ರೀಕ್ವೆಲ್ ಬರಲಿದೆ. ಮಾಫಿಯಾ ಡಾನ್ `ಭೈರತಿ ರಣಗಲ್’ ಹಿನ್ನೆಲೆ ಏನು ಎನ್ನುವುದನ್ನು ಈ ಚಿತ್ರದಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಿದ್ದಾರೆ.

ವಕೀಲನಾಗಿದ್ದ ಭೈರತಿ ರಣಗಲ್ ದೊಡ್ಡ ಡಾನ್ ಆಗಿ ಬದಲಾಗಿದ್ದು ಯಾಕೆ ಎನ್ನುವ ಪ್ರಶ್ನೆಗೆ ಚಿತ್ರಮಂದಿರದಲ್ಲೇ ಉತ್ತರ ಸಿಗಲಿದೆ. ನೂರಾರು ಜನ ಕಲಾವಿದರು, ತಂತ್ರಜ್ಞರು ಚಿತ್ರಕ್ಕಾಗಿ ಹಗಳಿರುಲು ಕೆಲಸ ಮಾಡುತ್ತಿದ್ದಾರೆ. ಇಲ್ಲೂ ಗಣಿ ಪ್ರದೇಶ, ಹೆಲಿಕ್ಯಾಪ್ಟರ್ ಶಾಟ್ಸ್ ಇದೆ. ಇನ್ನೂ ಪೊಲೀಸ್ ಠಾಣೆಯನ್ನೇ ರಣಗಲ್ ಸುಟ್ಟು ಬಿಡುವ ಸನ್ನಿವೇಶ ಕೂಡ ಚಿತ್ರದಲ್ಲಿರುವಂತೆ ಕಾಣುತ್ತಿದೆ. ಒಟ್ನಲ್ಲಿ ಈ ವಿಡಿಯೋ ನೋಡಿ ಫ್ಯಾನ್ಸ್ ಚಿಂದಿ ಆಗಿದೆ ಎಂದು ಹಾಡಿಹೊಗಳಿದ್ದಾರೆ.

ರಾಹುಲ್ ಬೋಸ್, ದೇವರಾಜ್, ಛಾಯಾ ಸಿಂಗ್, ಮಧು ಗುರುಸ್ವಾಮಿ, ವಸಿಷ್ಠ ಸಿಂಹ ಚಿತ್ರದ ಮುಖ್ಯ ಪಾತ್ರಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನವೀನ್ ಕುಮಾರ್ ಛಾಯಾಗ್ರಹಣ, ರವಿ ಬಸ್ರೂರು ಸಂಗೀತ ಚಿತ್ರಕ್ಕಿದೆ. ಅಂದಹಾಗೆ, ಆಗಸ್ಟ್ 15ರಂದು ಸಿನಿಮಾ ರಿಲೀಸ್ ಆಗಲಿದೆ.

