ಬಿಗ್ಬಾಸ್ ಕನ್ನಡ ಸೀಸನ್ 11ರಲ್ಲಿ ಸ್ಪರ್ಧಿಯಾಗಿ ದೊಡ್ಮನೆಗೆ ಬಂದಿದ್ದ ಲಾಯರ್ ಜಗದೀಶ್ 93 ದಿನಗಳ ನಂತರ ಜೈಲಿನಿಂದ ರಿಲೀಸ್ ಆಗಿದ್ದಾರೆ.
ಕನ್ನಡ ಬಿಗ್ಬಾಸ್ ಖ್ಯಾತಿಯ ಲಾಯರ್ ಜಗದೀಶ್ ಹಾಗೂ ಯುವಕರ ಗಲಾಟೆ ಪ್ರಕರಣದಲ್ಲಿ ಜಗದೀಶ್ ಅವರು ಜನವರಿ 25ರಂದು ಅರೆಸ್ಟ್ ಆಗಿದ್ದರು. ಕೋಡಿಗೆಹಳ್ಳಿ ಪೊಲೀಸರು ವಕೀಲ ಜಗದೀಶ್ ಅವರನ್ನು ಬಂಧಿಸಿದ್ದರು.
ಜನವರಿ 24ರಂದು ಕೊಡಿಗೆಹಳ್ಳಿಯಲ್ಲಿ ರಾತ್ರಿ 9 ಗಂಟೆ ಸುಮಾರಿಗೆ ಜಗದೀಶ್ ಹಾಗೂ ಸ್ಥಳೀಯನ ನಡುವೆ ಅಣ್ಣಮ್ಮನನ್ನು ಕೂರಿಸಿದ ವಿಚಾರಕ್ಕೆ ಮತ್ತೆ ಗಲಾಟೆ ನಡೆದಿತ್ತು. ಈ ವೇಳೆ ಸ್ಥಳೀಯರು ಹಾಗೂ ವಕೀಲ ಜಗದೀಶ್ ಮಧ್ಯೆ ಮತ್ತೆ ಮಾತಿನ ಚಕಮಕಿ ನಡೆದಿತ್ತು. ಸ್ಥಳೀಯರು ಜಗದೀಶ್ ಸ್ಕಾರ್ಪಿಯೋ ಕಾರನ್ನು ಧ್ವಂಸಗೊಳಿಸಿದ್ರು. ಈ ವೇಳೆ ಜಗದೀಶ್ ಗನ್ ಮ್ಯಾನ್ ಗಾಳಿಯಲ್ಲಿ ಗುಂಡು ಹಾರಿಸಿ, ಜನರನ್ನು ಬೆದರಿಸುವ ಯತ್ನ ಮಾಡಿದ್ದರು ಎನ್ನಲಾಗಿತ್ತು.

