ಬೆಂಗಳೂರು : ಕನ್ನಡದ ಅತಿ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಕನ್ನಡ ಸೀಸನ್ 12’ ಭಾನುವಾರ ಭರ್ಜರಿ ಫಿನಾಲೆಯೊಂದಿಗೆ ಅಂತ್ಯಗೊಂಡಿದ್ದು, ಗಿಲ್ಲಿ ನಟರಾಜ್ (Gilli Nata) ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಫಿನಾಲೆಯಲ್ಲಿ ನಡೆದ ಭಾರೀ ಪೈಪೋಟಿಯಲ್ಲಿ ರಕ್ಷಿತಾ ಶೆಟ್ಟಿ ರನ್ನರ್ ಅಪ್, ಅಶ್ವಿನಿ ಗೌಡ ಎರಡನೇ ರನ್ನರ್ ಅಪ್ ಆಗಿದ್ದಾರೆ.
ಕೋಟ್ಯಂತರ ವೀಕ್ಷಕರ ಕುತೂಹಲಕ್ಕೆ ತೆರೆ ಬಿದ್ದಿದ್ದು, ವಿನ್ನರ್ ಗಿಲ್ಲಿಗೆ ಬಿಗ್ ಬಾಸ್ ಟ್ರೋಫಿ ಜೊತೆಗೆ 50 ಲಕ್ಷ ರೂ. ನಗದು ಬಹುಮಾನ ಲಭಿಸಿದೆ. ಜೊತೆಗೆ ಮಾರುತಿ ಸುಜುಕಿ ವಿಕ್ಟೋರಿಸ್ ಕಾರು ಉಡುಗೊರೆಯಾಗಿ ನೀಡಲಾಗಿದೆ.
ಈ ಬಾರಿ ಬಿಗ್ ಬಾಸ್ ಸೀಸನ್ 12 ಸಿಕ್ಕಾಪಟ್ಟೆ ಸದ್ದು ಮಾಡಿದ್ದು, ಹಿಂದಿನ ಎಲ್ಲಾ ಸೀಸನ್‌ಗಳಿಗಿಂತಲೂ ಹೆಚ್ಚು ಜನ ಬೆಂಬಲ ವ್ಯಕ್ತವಾಗಿದೆ. ಮೊದಲ ದಿನದಿಂದಲೂ ಸರಳತೆ, ನೈಜತೆ ಹಾಗೂ ಹಾಸ್ಯದ ಮೂಲಕ ಗಿಲ್ಲಿ ಪ್ರೇಕ್ಷಕರ ಮನ ಗೆದ್ದಿದ್ದರು. ಕುಟುಂಬ ಸಮೇತವಾಗಿ ಶೋ ವೀಕ್ಷಿಸಿದವರ ಸಂಖ್ಯೆಯೂ ಈ ಬಾರಿ ಗಣನೀಯವಾಗಿ ಹೆಚ್ಚಾಗಿದೆ.
‘ಬಿಗ್ ಬಾಸ್ ಕನ್ನಡ 12’ರಲ್ಲಿ ಒಟ್ಟು 24 ಸ್ಪರ್ಧಿಗಳಲ್ಲಿ ಗಿಲ್ಲಿ ನಟರಾಜ್ ಎಲ್ಲರನ್ನು ಹಿಂದಿಕ್ಕಿ ಜಯ ಸಾಧಿಸಿದ್ದಾರೆ. ನಟ ಸುದೀಪ್ ಅವರು ಗಿಲ್ಲಿಯ ಕೈ ಎತ್ತುವ ಮೂಲಕ ವಿನ್ನರ್ ಘೋಷಣೆ ಮಾಡಿದರು. ಈ ಸೀಸನ್‌ನಲ್ಲಿ ಗಿಲ್ಲಿ 40 ಕೋಟಿಗೂ ಅಧಿಕ ಮತಗಳನ್ನು ಪಡೆದು ಗೆಲುವು ಸಾಧಿಸಿರುವುದು ಹೊಸ ದಾಖಲೆಯಾಗಿದೆ.
ಫಿನಾಲೆಗೆ ಆರು ಮಂದಿ ಸ್ಪರ್ಧಿಗಳು ಪ್ರವೇಶಿಸಿದ್ದರು :
ಗಿಲ್ಲಿ ನಟರಾಜ್
ರಕ್ಷಿತಾ ಶೆಟ್ಟಿ
ಅಶ್ವಿನಿ ಗೌಡ
ಧನುಷ್
ಮ್ಯೂಟೆಂಟ್ ರಘು
ಕಾವ್ಯಾ ಶೈವ
ಮೊದಲು ಧನುಷ್, ನಂತರ ರಘು, ಮೂರನೇಯದಾಗಿ ಕಾವ್ಯಾ ಎಲಿಮಿನೇಟ್ ಆಗಿದರು. ಕೊನೆಗೂ ಗಿಲ್ಲಿ ವಿನ್ನರ್, ರಕ್ಷಿತಾ ರನ್ನರ್ ಅಪ್ ಆಗಿ ಆಯ್ಕೆಗೊಂಡರು.
ಬಹುಮಾನ ವಿವರ :
ವಿನ್ನರ್ – ಗಿಲ್ಲಿ ನಟರಾಜ್
₹50 ಲಕ್ಷ ನಗದು
ಮಾರುತಿ ಸುಜುಕಿ ವಿಕ್ಟೋರಿಸ್ ಕಾರು
ರನ್ನರ್ ಅಪ್ – ರಕ್ಷಿತಾ ಶೆಟ್ಟಿ
ಶ್ರೀಸಾಯಿ ಗೋಲ್ಡ್ ಪ್ಯಾಲೇಸ್ ವತಿಯಿಂದ ₹20 ಲಕ್ಷ
ಜ್ಯಾರ್ ಆಪ್ ಕಡೆಯಿಂದ ₹5 ಲಕ್ಷ
ಎರಡನೇ ರನ್ನರ್ ಅಪ್ – ಅಶ್ವಿನಿ ಗೌಡ
₹14 ಲಕ್ಷ ನಗದು
ನಾಲ್ಕನೇ ಸ್ಥಾನ – ಕಾವ್ಯಾ ಶೈವ
₹10 ಲಕ್ಷ ನಗದು

