Bihar: ಒಂದೇ ಕುಟುಂಬದ ಐವರನ್ನು ಥಳಿಸಿ, ಜೀವಂತವಾಗಿ ಸುಟ್ಟುಹಾಕಿದ ಆಘಾತಕಾರಿ ಘಟನೆಯೊಂದು ಬಿಹಾರದಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಬಿಹಾರದ ಪುರ್ನಿಯಾ ಜಿಲ್ಲೆಯ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯ ಟೆಟ್ಗಾಮಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಭಾರೀ ಸಂಚಲನ ಸೃಷ್ಟಿಸಿದೆ. ಮಾಟಗಾತಿಯರೆಂದು ಆರೋಪಿಸಿ ಬಾಬುಲಾಲ್ ಒರಾನ್, ಸೀತಾ ದೇವಿ, ಮಂಜಿತ್ ಒರಾನ್, ರಾನಿಯಾ ದೇವಿ ಮತ್ತು ತಪಟೊ ಮೊಸ್ಮತ್ ಅವರನ್ನು ವಿಕೃತವಾಗಿ ಕೊಲೆ ಮಾಡಲಾಗಿದೆ.
ಘಟನೆಯ ಸುದ್ದಿ ಬೆಳಕಿಗೆ ಬರುತ್ತಿದ್ದಂತೆಯೇ ಎಲ್ಲಾ ಆರೋಪಿಗಳು ಗ್ರಾಮದಿಂದ ಕಾಲ್ಕಿತ್ತಿದ್ದರು. ಸದ್ಯ ಮೂವರನ್ನು ಬಂಧಿಸಲಾಗಿದೆ. ಇನ್ನು ಘಟನಾ ಸ್ಥಳದಲ್ಲಿ ಪೊಲೀಸರು ಬೀಡುಬಿಟ್ಟಿದ್ದು, ಶ್ವಾನ ದಳ ಮತ್ತು ಎಫ್‌ಎಲ್‌ಸಿ ತಂಡವು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದೆ. ಈ ಪ್ರಕರಣದಲ್ಲಿ ಸತ್ತವರನ್ನು ಜೀವಂತವಾಗಿ ಸುಡಲು ಜನರನ್ನು ಪ್ರಚೋದಿಸಿದ ಆರೋಪದ ಮೇಲೆ ನಕುಲ್ ಕುಮಾರ್ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ವಾಸ್ತವವಾಗಿ, ಅದೇ ಗ್ರಾಮದ ರಾಮದೇವ್ ಒರಾನ್ ಅವರ ಮಗ ಮೂರು ದಿನಗಳ ಹಿಂದೆ ಗ್ರಾಮದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಮಯದಲ್ಲಿ ಸಾವನ್ನಪ್ಪಿದ್ದಾನೆ. ಅಲ್ಲದೇ ಇನ್ನೊಂದು ಮಗುವಿನ ಆರೋಗ್ಯವೂ ಹದಗೆಡುತ್ತಿತ್ತು. ಈ ಸಾವಿಗೆ ಕುಟುಂಬದಲ್ಲಿ ಮಾಟಗಾತಿಯ ಉಪಸ್ಥಿತಿಯೇ ಕಾರಣ ಎಂದು ಗ್ರಾಮಸ್ಥರು ಹೇಳಿದ್ದಾರೆ. ಅಲ್ಲದೇ ಇದೇ ಆರೋಪದ ಮೇಲೆ ಒಂದೇ ಕುಟುಂಬದ ಐವರು ಸದಸ್ಯರನ್ನು ಅತ್ಯಂತ ಕ್ರೂರವಾಗಿ ಕೊಲೆ ಮಾಡಿದ್ದಾರೆ.
ಇನ್ನು ಕುಟುಂಬದಲ್ಲಿ ಬದುಕುಳಿದ ಸದಸ್ಯ ಲಲಿತ್ ಪ್ರತಿಕ್ರಿಯಿಸಿ, ಇಡೀ ಕುಟುಂಬವನ್ನು ಮಾಟಗಾತಿಯರು ಎಂಬ ಆರೋಪದ ಮೇಲೆ ಕ್ರೂರವಾಗಿ ಥಳಿಸಿ ನಂತರ ಜೀವಂತವಾಗಿ ಸುಟ್ಟುಹಾಕಲಾಯಿತು. ಬಳಿಕ ಅವರ ದೇಹವನ್ನು ನೀರಿಗೆ ಎಸೆಯಲಾಯಿತು. ಹೇಗೋ ನಾವು ನಮ್ಮ ಜೀವಗಳನ್ನು ಉಳಿಸಿಕೊಂಡು ಅಲ್ಲಿಂದ ತಪ್ಪಿಸಿಕೊಂಡೆವು ಎಂದು ಭಯದಿಂದಲೇ ತಿಳಿಸಿದ್ದಾರೆ.
- ತರಗತಿಯಲ್ಲೇ ಪ್ರಪೋಸ್ ಮಾಡಿದ ಪ್ರೊಫೆಸರ್‌ಗೆ ವಿದ್ಯಾರ್ಥಿನಿಯಿಂದ ಚಪ್ಪಲಿ ಏಟು
- ಭಾರೀ ಮೊತ್ತಕ್ಕೆ ಆರ್‌ಸಿಬಿ ಸೆಲೆ ಆದ ಬೆನ್ನಲ್ಲೇ ವಿಜಯ್ ಮಲ್ಯ ಭಾವನಾತ್ಮಕ ಪೋಸ್ಟ್
- ಭಾರತ ಸೇರಿ ಮಿತ್ರ ರಾಷ್ಟ್ರಗಳ ಹಡಗುಗಳಿಗೆ ಹಾರ್ಮುಜ್ ಜಲಸಂಧಿ ತೆರೆದ ಇರಾನ್
- ಮಂಡ್ಯ: ಕಸದಲ್ಲಿ ಸಿಕ್ಕ ಚಿನ್ನದ ಉಂಗುರ ಹಿಂದಿರುಗಿಸಿ ಪ್ರಾಮಾಣಿಕತೆ ಮೆರೆದ ಪೌರಕಾರ್ಮಿಕರು
- ”ನನ್ನನ್ನೇ ಸುಪ್ರೀಂ ಲೀಡರ್ ಮಾಡಲು ಮುಂದಾಗಿತ್ತು ಇರಾನ್, ನಾನು ಒಪ್ಪಲಿಲ್ಲ” : ಟ್ರಂಪ್

