ಬೆಂಗಳೂರು : ಬೆಂಗಳೂರಲ್ಲಿ ಇತ್ತೀಚಿನ ದಿನಗಳಲ್ಲಿ ವಾಹನಗಳ ಕಳ್ಳತನ ಹೆಚ್ಚಾಗಿದ್ದು ಸರ್ಜಾಪುರದ ಸಂಪುರ ಗೇಟ್ ಬಳಿ ಮನೆ ಮುಂದೆ ನಿಲ್ಲಿಸಿದ ಬೈಕ್ ನನ್ನು ಮೂವರು ಖದೀಮರು ಕದ್ದೊಯ್ದಿದ್ದಾರೆ. ಮನೆ ಮುಂದೆ ನಿಲ್ಲಿಸಿದ ಬೈಕ್ ನ ಹ್ಯಾಂಡಲ್ ಲಾಕ್ ಮುರಿದು ಬಳಿಕ ಬೈಕ್ ನನ್ನು ತಳ್ಳಿಕೊಂಡು ಹೋದ ಹೋಗಿದ್ದಾರೆ ಕಳ್ಳರು.
ಖದೀಮರ ಕೈಚಳಕದ ದೃಶ್ಯಗಳು ಸಿಸಿಟಿವಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಸರ್ಜಾಪುರದ ಪೋಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ. ಬೈಕ್ ಕದ್ದ ಖದೀಮರಿಗೆ ಪೊಲೀಸರು ಬಲೆ ಬೀಸಿದ್ದಾರೆ.