ತುಮಕೂರು : ಕುಣಿಗಲ್ ತಾಲೂಕಿನ ಎಡೆಯೂರು ಹೋಬಳಿ ಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಸೇರಿದ ಬ್ಯಾಲದಕೆರೆ ಗ್ರಾಮದಲ್ಲಿ ರೇಣುಕಪ್ಪ (65) ಎಂಬುವವರ ಚೆಕ್ ಬಂದಿ ಯನ್ನು ಬೇರೆಯವರ ಮನೆಯ ಚೆಕ್ ಬಂದಿ ಹಾಕಿ ಖಾತೆ ಮಾಡಿದ್ದಾರೆ, ನನ್ನ ಮಾತಿಗೂ ಸಹ ಸ್ಪಂದಿಸದೆ ತಿಮ್ಮಪ್ಪ ಲಕ್ಷ್ಮಮ್ಮ ಎಂಬುವರಿಗೆ ಬಿಲ್ಕಲ್ ಕಿರಣ್ ಕುಮಾರ್ ಎಂಬುವರು ಸಪೋರ್ಟ್ ಆಗಿದ್ದಾರೆ,
ನನಗೆ ಬೆನ್ನೆಲುಬು ಯಾರು ಇಲ್ಲದ ಕಾರಣ ನಮ್ಮ ಮೇಲೆ ಅವರು ತುಂಬಾ ದೌರ್ಜನ್ಯ ಮಾಡುತ್ತಿದ್ದಾರೆ, ಅವರ ತಂದೆ ತಾಯಿ ಇಂತಹ ಪರಿಸ್ಥಿತಿ ಬಂದಿದ್ದರೆ ಏನು ಮಾಡುತ್ತಿದ್ದರು ಇವರಿಗೆ ಸ್ವಲ್ಪವೂ ಬಡವರ ಮೇಲೆ ಕರುಣೆಯೇ ಇಲ್ಲದಂತಾಗಿದೆ, ಹಣ ಕೊಟ್ಟವರ ಕೆಲಸವನ್ನು ಸರಾಗವಾಗಿ ಮಾಡುತ್ತಾರೆ,
ಹಣ ಕೊಡದಿದ್ದರೆ ನಾಳೆ ಬನ್ನಿ ನಾಡಿದ್ದು ಬನ್ನಿ ಎಂದು ಉಡಾಫೆ ಉತ್ತರವನ್ನು ನೀಡುತ್ತಾರೆ ನಾನು ನನ್ನ ಗ್ರಾಮದಿಂದ ಕೊಪ್ಪ ಪಂಚಾಯಿತಿಗೆ ಬರುವುದಕ್ಕೆ 5 ಕಿ.ಮೀ ಆಗುತ್ತದೆ, ಬಿಲ್ ಕಲೆಕ್ಟರ್ ಕಿರಣ್ ಕುಮಾರ್ ಎಂಬುವರ ಮೇಲೆ ಮೇಲಾಧಿಕಾರಿಗಳು ಎಚ್ಚೆತ್ತುಕೊಂಡು ಈತನ ಮೇಲೆ ನಿಗಾ ವಹಿಸಬೇಕು, ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ,,
ಈತ ಮಾಡಿದ ಎಡವಟ್ಟಿಗೆ ನಮ್ಮ ಮನೆಗೆ ಹೋಗಲು ರಸ್ತೆ ಇಲ್ಲದಂತಾಗಿದೆ, ನಮ್ಮ ಪಕ್ಕದ ಮನೆಯ ತಿಮ್ಮಪ್ಪ ಲಕ್ಷ್ಮಮ್ಮ ಎಂಬುವರು ನನಗೆ ನನ್ನ ಕುಟುಂಬಕ್ಕೆ ತುಂಬಾ ತೊಂದರೆ ಉಂಟು ಮಾಡುತ್ತಿದ್ದಾರೆ, ನಾವು ರಸ್ತೆಯ ಪಕ್ಕದಲ್ಲಿದ್ದು, ನಾವು ನಮ್ಮ ಮನೆಯ ಹಿಂದೆ ಹೋಗಲು ಅವರು ಸಂಪೂರ್ಣ ಬೇಲಿ ಹಾಕಿದ್ದಾರೆ, ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದೆ ನಂತರ ಪೊಲೀಸ್ ಇಲಾಖೆಯವರು ನಮ್ಮ ಗ್ರಾಮಕ್ಕೆ ಬಂದು ನಮಗೆ ಸಹಕರಿಸಿ ಸಹಾಯ ಮಾಡಿದರು, ಆದರೂ ಸಹ ಗ್ರಾಮದವರಿಗೆ ಹಾಗೂ ಪೊಲೀಸ್ ಇಲಾಖೆಗೆ ಕಿಂಚಿತ್ತು ಗೌರವ ಕೊಡದೆ ನಮ್ಮ ಮೇಲೆ ಪ್ರತಿನಿತ್ಯ ನಮ್ಮ ಮೇಲೆ ಗಲಾಟೆ ಮಾಡುತ್ತಾರೆ, ದೊಣ್ಣೆಯಿಂದ ಹಲ್ಲೆ ಮಾಡಲು ಮುಂದಾಗುತ್ತಾರೆ, ನನ್ನ ಹೆಂಡತಿ ಹಾಗೂ ತಾಯಿಯ ಬಗ್ಗೆ ತೀವ್ರ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ,ಆದ್ದರಿಂದ ಇಲ್ಲಿ ಆಗಿರುವ ಸಮಸ್ಯೆಗೆ ನೇರ ಕಾರಣ ಕೊಪ್ಪ ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ ಅವರೇ ಎಂದು ಬೇಸರ ವ್ಯಕ್ತಪಡಿಸಿದರು,,
ತಿಮ್ಮಪ್ಪ ಲಕ್ಷ್ಮಮ್ಮ ಎಂಬುವರು ನಮ್ಮ ಮನೆಯ ಹಿಂಭಾಗದಲ್ಲಿ ವಾಸಿಸುತ್ತಿದ್ದು ಅವರಿಗೆ ಓಡಾಡಲು ರಸ್ತೆಯನ್ನು ಸಹ ಬಿಟ್ಟಿದ್ದೇವೆ, ಆದರೂ ಸಹ ನಮ್ಮ ಮನೆಯ ಮುಂದೆ ಬಂದು ಬೇಲಿ ಹಾಕಿದ್ದಾರೆ,ಪ್ರತಿನಿತ್ಯ ನನಗೆ ನನ್ನ ಕುಟುಂಬಕ್ಕೆ ತುಂಬಾ ಅವಾಚ್ಯ ಶಬ್ದಗಳಿಂದ ಬೈಯುತ್ತಿದ್ದಾರೆ, ಇದು ನಮ್ಮ ಆಸ್ತಿ ನಮ್ಮ ಪಿತ್ರಾರ್ಜಿತ ಆಸ್ತಿ ನಮ್ಮ ಜಾಗದಲ್ಲಿ ನೀನು ಓಡಾಡಬೇಡ ಎಂದು ನಮಗೆ ಹಲ್ಲೆ ಮಾಡಲು ಮುಂದಾಗುತ್ತಾರೆ,
ಕೇಳಲು ಹೋದರೆ ಗ್ರಾಮ ಪಂಚಾಯಿತಿಯವರು ಯಾವ ರೀತಿ ದಾಖಲೆ ಮಾಡಿದ್ದಾರೋ ಅವರನ್ನು ಕೇಳಿಕೋ ಎಂದು ಮಾತನಾಡುತ್ತಿದ್ದಾರೆ,ಗ್ರಾಮ ಪಂಚಾಯಿತಿ ಬಿಲ್ ಕಲೆಕ್ಟರ್ “ಕಿರಣ್ ಕುಮಾರ್ “ಮಾಡಿದ ಎಡವಟ್ಟಿಗೆ ಪ್ರತಿನಿತ್ಯ ನಾವು ನೆಮ್ಮದಿಯನ್ನು ಕಳೆದುಕೊಂಡು ಜೀವನ ಮಾಡುವುದಕ್ಕೆ ತುಂಬಾ ಕಷ್ಟಕರವಾಗುತ್ತದೆ,, ನನ್ನ ಹತ್ತಿರ 16,000 ಹಣವನ್ನು ಬಿಲ್ ಕಲೆಕ್ಟರ್ ಆದ ಕಿರಣ್ ಕುಮಾರ್ ಎಂಬುವರು ನಿಮ್ಮ ಖಾತೆ ಕಂದಾಯ ಕಟ್ಟಬೇಕು, ಎಂದು ಹಣ ಪಡೆದಿದ್ದರು,
ನಂತರ ನಮ್ಮ ಚೆಕ್ ಬಂದಿ ಸರಿಪಡಿಸಲು ಹೋಗಿ ಬೇರೆಯವರ ಮನೆಯ ಚೆಕ್ -ಬಂದಿ ಯನ್ನು ದಾಖಲೆಯಲ್ಲಿ ತೋರಿಸಿದ್ದಾರೆ, ಇವರು ಚೆಕ್ ಬಂದಿಯನ್ನು ಅದಲು ಬದಲು ಮಾಡಿದ ಪರಿಣಾಮ ಅಕ್ಕ ಪಕ್ಕದ ಮನೆಯವರು ತಿಮ್ಮಪ್ಪ ಲಕ್ಷ್ಮಮ್ಮ ಎಂಬುವರು ನಮಗೆ ತೊಂದರೆ ಉಂಟು ಮಾಡಿ ಪ್ರತಿನಿತ್ಯ ನಾವುಗಳು ಗ್ರಾಮದಲ್ಲಿ ಹೊಡೆದಾಡಿಕೊಳ್ಳುವ ಪರಿಸ್ಥಿತಿ ಬಂದಿದೆ, ನಾವು ಓಡಾಡುವುದಕ್ಕೆ ನಮ್ಮ ಜಾಗದಲ್ಲಿ ರಸ್ತೆಯ ಮೇಲೆ ಕಲ್ಲು ಹಾಕಲು ಹೋದರೆ “ತಿಮ್ಮಪ್ಪ ಲಕ್ಷ್ಮಮ್ಮ” ಎಂಬುವರು ಕಲ್ಲು ಹಾಕಲು ಹೋದರೆ ನಮ್ಮ ಮೇಲೆ ಜಗಳ ಮಾಡಿ ರಸ್ತೆಯಲ್ಲಿ ಬಿದ್ದು ಒದ್ದಾಡುತ್ತಾರೆ, ನಮ್ಮ ಸಾವಿಗೆ ಏನೇ ಆದರೂ ನೀನೇ ಕಾರಣ ಎಂದು ಹೆದರಿಸುತ್ತಿದ್ದಾರೆ, ಆದ್ದರಿಂದ ನೊಂದಿರುವ ನನಗೆ ಮೇಲಾಧಿಕಾರಿಗಳು ಗಮನಕ್ಕೆ ತೆಗೆದುಕೊಂಡು ನ್ಯಾಯ ಕೊಡಿಸಿ ಓಡಾಡುವುದಕ್ಕೆ ಸೂಕ್ತ ರಸ್ತೆ ಕಲ್ಪಿಸಿ ಕೊಡಬೇಕೆಂದು ತಮ್ಮಲ್ಲಿ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಮಾತನಾಡಿದರು,,
ವರದಿ : ನರಸಿಂಹರಾಜು

