ಬೆಂಗಳೂರು : ರಾಜಾಜಿನಗರದ ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಎಸ್. ಸುರೇಶ್ ಕುಮಾರ್ ಅವರ ತಾಯಿ ಸುಶೀಲಮ್ಮ ನಿಧನರಾಗಿದ್ದಾರೆ. ಸುಶೀಲಮ್ಮ (92) ಅವರು ಸೆಪ್ಟೆಂಬರ್ 23, 2025ರಂದು ಬೆಳಿಗ್ಗೆ ವಯೋಸಹಜ ಕಾಯಿಲೆಯಿಂದ ನಿಧನರಾಗಿದ್ದಾರೆ.
ಈ ದುಃಖದ ಸುದ್ದಿಯನ್ನು ಸುರೇಶ್ ಕುಮಾರ್ ಅವರು ಸಾಮಾಜಿಕ ಜಾಲತಾಣದಲ್ಲಿ ಭಾವನಾತ್ಮಕವಾಗಿ ಹಂಚಿಕೊಂಡಿದ್ದಾರೆ. ತನ್ನ ತಾಯಿಯ ಭಾವಚಿತ್ರವನ್ನು ಹಂಚಿಕೊಂಡು ದುಖಃದ ಸಂದೇಶ ಬರೆದಿದ್ದಾರೆ.
“ನನ್ನನ್ನು ಹೊತ್ತು, ಹೆತ್ತು, ಸಾಕಿ, ತಿದ್ದಿ, ತೀಡಿ ಬೆಳೆಸಿದ ನನ್ನಮ್ಮ, ಎಲ್ಲರ ನೆಚ್ಚಿನ ಸುಶೀಲಮ್ಮ ಟೀಚರ್ ಇನ್ನಿಲ್ಲ. ಇಂದು ಬೆಳಗಿನ ಜಾವ ನನ್ನನ್ನು ಬಿಟ್ಟು ಹೊರಟುಬಿಟ್ಟರು” ಎಂದು ಬರೆದು, ತಮ್ಮ ತಾಯಿಯ ಜೀವನದ ಕೊಡುಗೆಯನ್ನು ಸುರೇಶ್ ಕುಮಾರ್ ಸ್ಮರಿಸಿದ್ದಾರೆ.
ಶಿಕ್ಷಕಿಯಾಗಿದ್ದ ಸುಶೀಲಮ್ಮ ಅವರು ನಿವೃತ್ತಿ ಬಳಿಕ ಬೆಂಗಳೂರಿನ ಲಕ್ಷ್ಮಿ ನಾರಾಯಣ ಕೋ ಆಪರೇಟಿವ್ ಬ್ಯಾಂಕ್ನ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಒಟ್ಟು 8 ಬಾರಿ ನಿರ್ದೇಶಕರಾಗಿ ಆಯ್ಕೆಯಾಗಿದ್ದರು.

