ಇಂಫಾಲ: ಮಣಿಪುರದ (Manipur) ಬಿಷ್ಣುಪುರ್ ಜೆಲ್ಲೆಯಲ್ಲಿ ಶಂಕಿತ ಉಗ್ರರು (Terrorists) ನಡೆಸಿದ ಬಾಂಬ್ ದಾಳಿಯಲ್ಲಿ (Bomb Attack) ಇಬ್ಬರು ಸಿಆರ್‌ಪಿಎಫ್‌ಯೋಧರು (CRF) ಸಾವನ್ನಪ್ಪಿದ್ದು, ಮೂವರು ಗಾಯಗೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.
ಸಿಆರ್‌ಪಿಎಫ್ ಸಬ್ ಇನ್ಸ್ಪೆಕ್ಟರ್ ಮತ್ತು ಹೆಡ್‌ಕಾನ್ಸಿಟೇಬಲ್ ಅರುಪ್ ಸೈನಿ ಎಂದು ಗುರುತಿಸಲಾಗಿದೆ. ಇವರು ಕೇಂದ್ರಿಯ ಮೀಸಲು ಪೊಲೀಸ್ ಪಡೆ (CRPF) 128 ಬೆಟಾಲಿಯನ್‌ಗೆ ಸೇರಿದವರಾಗಿದ್ದಾರೆ. ಇದನ್ನೂ ಓದಿ: ಧಾರ್ಮಿಕ ಆಧಾರದಲ್ಲಿ ಮತ ಕೇಳಿದ ಆರೋಪ ಮೇರೆಗೆ ತೇಜಸ್ವಿ ಸೂರ್ಯ ವಿರುದ್ಧ ದೂರು
ಗಾಯಗೊಂಡವರನ್ನು ಇನ್ಸ್ಪೆಕ್ಟರ್ ಜಾದವ್ ದಾಸ್ ಮತ್ತು ಕಾನ್ಸ್ಟೇಬಲ್ ಅಫ್ತಾಬ್ ದಾಸ್ ಎಂದು ಗುರುತಿಸಲಾಗಿದೆ. ಮಧ್ಯರಾತ್ರಿ 12:30 ರ ಸುಮಾರಿಗೆ ಉಗ್ರರು ಗುಂಡಿನ ದಾಳಿ ಅರಂಭಿಸಿದ್ದು, 2:15 ರ ದಾಳಿ ಮುಂದುವರೆಯಿತು. ದಾಳಿಕೋರರನ್ನು ಪತ್ತೆಹಚ್ಚಲು ಕೊಂಬಿAಗ್ ಕಾರ್ಯಾಚರಣೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಉತ್ತರ ಪ್ರದೇಶಕ್ಕೆ ಕಳ್ಳಸಾಗಾಣಿಕೆಯಾಗುತ್ತಿದ್ದ 95 ಮಕ್ಕಳ ರಕ್ಷಣೆ

