ದಾವಣಗೆರೆ: ಬಾಲಕನೊಬ್ಬ ಸ್ಮೋಕ್ ಬಿಸ್ಕೆಟ್ (Smoke biscuits) ತಿಂದು ಅಸ್ವಸ್ಥನಾಗಿರುವ ಘಟನೆ ನಗರದ ಅರುಣ್ ಸರ್ಕಲ್ ಬಳಿ ನಡೆದಿದೆ.
ನಗರದ ಅರುಣ್ ಸರ್ಕಲ್ ಬಳಿ ಪ್ರತಿ ಬೇಸಿಗೆ ಕಾಲದಲ್ಲಿ ಮಕ್ಕಳ ಮನರಂಜನೆಗಾಗಿ ಖಾಸಗಿ ಕಂಪನಿಯಿದ ಎಕ್ಸಿಬಿಷನ್ (Exhibition) ನಡೆಯುತ್ತಿದೆ. ಈ ಎಕ್ಸಿಬಿಷನ್ನಲ್ಲಿ ಸ್ಮೋಕ್ ಬಿಸ್ಕೆಟ್ ದೊಡ್ಡವರಿಂದ ಚಿಕ್ಕ ಮಕ್ಕಳವರೆಗೂ ಗಮನ ಸೆಳೆದಿತ್ತು. ಒಂದು ಕಪ್ನಲ್ಲಿ 80 ರೂಪಾಯಿಗೆ ಬಿಸ್ಕೆಟ್ನ್ನು ಕೊಡಲಾಗುತ್ತೆ. ಇದನ್ನೂ ಓದಿ: ಜೈಲಿನಲ್ಲಿ ಹಣ ಬೇಡಿಕೆ ಇಟ್ಟ ಜೈಲರ್ ಸಸ್ಪೆಂಡ್
ಇದೇ ವೇಳೆ ಈ ಬಿಸ್ಕೆಟ್ ಅನ್ನು ಬಾಲಕನೊಬ್ಬ ಒಂದೇ ಸಲ ಬಾಯಿಗೆ ಹಾಕಿಕೊಂಡಿದ್ದಾನೆ. ಆದರೆ ಬಾಲಕನಿಗೆ ಬಿಸ್ಕೆಟ್ ಅನ್ನು ಉಗಿಯಲು ಆಗದೇ ಇ ಕಡೆ ನುಂಗಲು ಆಗದೇ ಅಸ್ವಸ್ಥವಾಗಿದ್ದಾನೆ. ಇದನ್ನೂ ಓದಿ: ಶಿಲ್ಪಾ ಶೆಟ್ಟಿ ದಂಪತಿಗೆ ಇಡಿ ಶಾಕ್ – 98 ಕೋಟಿ ಮೌಲ್ಯದ ಆಸ್ತಿ ವಶಕ್ಕೆ
ಅಸ್ಪಸ್ಥಗೊಂಡ ಮಗುವನ್ನು ಕೊಡಲೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಮಗು ಪ್ರಾಣಪಾಯದಿಂದ ಪಾರಾಗಿದೆ.ಘಟನೆಯಿಂದಾಗಿ ಆಕ್ರೋಶಗೊಂಡ ಪೋಷಕರು ಎಕಸಿಬಿಷನ್ನಲ್ಲಿ ಹಾಕಲಾಗಿದ್ದ ಸ್ಟಾಲ್ನ್ನು ಕಿತ್ತುಬಿಸಾಕಿದ್ದಾರೆ. ಇದನ್ನೂ ಓದಿ: ಕೇಸರಿ ಕಿಚ್ಚು, ತೆರೇಸಾ ಶಾಲೆ ವಿರುದ್ಧ ದಂಗೆ ಎದ್ದ ಹಿಂದೂ ಸಂಘಟನೆ