ಹಾವುಗಳು ಬೇಟೆಯನ್ನು ಬೆನ್ನಟ್ಟಿಕೊಂಡು ಸಾಗುತ್ತಾ ಕೆಲವೊಮ್ಮೆ ಬಾವಿ, ಕಾಲುವೆಗೆ ಬೀಳುವುದು ಸಾಮಾನ್ಯ. ಈ ಹೆಬ್ಬಾವು ಕೂಡಾ ಅದೇ ರೀತಿ ಆಹಾರವನ್ನು ಅರಸುತ್ತಾ ಹೋಗಿ ಕಾಲುವೆಗೆ ಬಿದ್ದಿತ್ತು.
ಕಾಲುವೆಗೆ ಬಿದ್ದಿದ್ದ ಬೃಹತ್ ಹೆಬ್ಬಾವನ್ನು ಬರಿಗೈಯಲ್ಲಿ ಹಿಡಿದು ರಕ್ಷಿಸಿದ ಯುವಕನ ವಿಡಿಯೋವೊಂದು ಈಗ ಸೋಶಿಯಲ್ ಮೀಡಿಯಾದಲ್ಲಿಸಕತ್ ವೈರಲ್ ಆಗುತ್ತಿದೆ. ಇನ್‌ಸ್ಟಾಗ್ರಾಂನಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಯುವಕ ಸಾಹಸ ಹಲವರನ್ನು ನಿಬ್ಬೆರಗಾಗಿಸಿದೆ.
ಜೊತೆಗೆ ಈ ವಿಡಿಯೋ ಪರ ವಿರೋಧದ ಚರ್ಚೆಯನ್ನೂ ಹುಟ್ಟು ಹಾಕಿದೆ… ಆ ಧೈರ್ಯ ಶಾಲಿ ಯುವಕ ಬೃಹತ್ ಗಾತ್ರದ ಹೆಬ್ಬಾವನ್ನು ಹೇಗೆ ಒಂದೇ ಕೈಯಲ್ಲಿ ಎತ್ತಿದ ಎಂಬ ವಿಡಿಯೋ ಇಲ್ಲಿದೆ ನೋಡಿ.

