ಕಂಚಿನಕಂಠ ಪ್ರಯೋಗಶೀಲ ಹಾಡುಗಾರರಾಗಿದ್ದ ಯಕ್ಷಗಾನ ಭಾಗವಾತ ಸುಬ್ರಹ್ಮಣ್ಯ ಧಾರೇಶ್ವರ(67) ( Yakshagana Bhagavath, Subramanya Dhareshwara) ಅವರು ಅನಾರೋಗ್ಯದಿಂದ ನಿಧನರಾಗಿದ್ದಾರೆ. ಇಂದು ಸಂಜೆ ಜೆಲ್ಲೆಯ ಕುಂದಾಪುರ (kundapura) ತಾಲೂಖಕಿನ ನಾಗನೂರಿನ ಸ್ವಗೃಹದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.
ಇವರು ಮೂತಃ ಉತ್ತರ ಕನ್ನಡ ಜೆಲ್ಲೆಯ ಗೋಕರ್ಣದಲ್ಲಿ ಜನಿಸಿದ್ದರು. ಇವರು ಮೇಳದ ಎಲಿಕ್ಟ್ರಿಷಿಯನ್ ಆಗಿ ಸೇರಿ ಬಳಿಕ ಭಾಗವತರಾದರು. ಅಲ್ಪಕಾಲದ ಅಸೌಖ್ಯದಿಂದ ಬೆಂಗಳೂರಿನ ತಮ್ಮ ಮಗನ ಮನೆಯಲ್ಲಿ ನಿಧನ ಹೊಂದಿದ್ದಾರೆ.
ಯಕ್ಷಗಾನ ಭಾಗವಾತ ಸುಬ್ರಹ್ಮಣ್ಯ ಅವರು ಸುಮಾರು 46 ವರ್ಷಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ಸುಬ್ರಹ್ಮಣ್ಯ ಧಾರೇಶ್ವರ , ಕೋಟ ಅಮೃತೇಶ್ವರಿ ಹಿರೇಮಹಾಲಿಂಗೇಶ್ವರ ಮೇಳ, ಶಿರಸಿ ಮೇಳ, ಪೆರ್ಡೂರು ಮೇಳದಲ್ಲಿ ಭಾಗವತರಾಗಿ ಸೇವೆ ಸಲಿಸಿದ್ದಾರೆ.

ಪೌರಾಣಿಕ ಯಕ್ಷಗಾನ ಭಾಗವತರಾಗಿದ್ದ ದಿವಂಗತ ನಾರ್ಣಪ್ಪ ಉಪ್ಪೂರ ವರ ಶಿಷ್ಯರಾಗಿದ್ದ ಧಾರೇಶ್ವರ ಅವರು ತಮ್ಮ 21 ನೆ ವಯಸ್ಸಿನಲ್ಲಿ ವೃತ್ತಿಪರ ಗಾಯಕರಾಗಿ ಯಕ್ಷಗಾನ ರಂಗಭೂಮಿಗೆ ಪ್ರವೆಶಿಸಿದರು. ಉತ್ತರ ಕನ್ನಡದ ಗೋಕರ್ಣದ ಬಳಿಯ ಧಾರೇಶ್ವರದಲ್ಲಿ ಅವರ ತಂದೆ ಲಕ್ಷಿö್ಮನಾರಾಯಣ ಭಟ್ ಅವರು ಹವ್ಯಾಸಿ ಯಕ್ಷಗಾನ ಕಲಾವಿದರಾಗೊಇದ್ದರು. ಹಾಗಾಗಿ ಮಗನಿಗೆ ಚಿಕ್ಕವಯಸ್ಸಿನಲ್ಲೆ ಯಕ್ಷಗಾನದ ಅಭಿರುಚಿ ಬೆಳೆಯಿತು.
ಗಾನ ಮಾಂತ್ರಿಕ, ಕರಾವಳಿ ಭಾಗದ ಸುಪ್ರಸಿದ್ಧ ಯಕ್ಷಗಾನ ಭಾಗವತರಾದ ಸುಬ್ರಹ್ಮಣ್ಯ ಧಾರೇಶ್ವರರ ನಿಧನದ ಸುದ್ದಿ ನೋವುಂಟು ಮಾಡಿದೆ. ಸುದೀರ್ಘ 45 ವರ್ಷಗಳ ಕಾಲ ತಮ್ಮ ಕಂಠಸಿರಿಯ ಮೂಲಕ ಕಲಾರಸಿಕರನ್ನು ರಂಜಿಸಿದ್ದ ಧಾರೇಶ್ವರರು ಪ್ರಯೋಗಶೀಲ ಭಾಗವತಿಕೆಗೆ ಹೆಸರುವಾಸಿಯಾದವರು.
ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ, ಅಭಿಮಾನಿಗಳಿಗೆ ನೋವು ಭರಿಸುವ ಶಕ್ತಿ ಕರುಣಿಸಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಅವರು ಸಂತಾಪ ವ್ಯಕ್ತಪಡಿಸಿದ್ದಾರೆ.

