ಬೆಂಗಳೂರಲ್ಲಿ 351 ಶಾಲಾ ವಾಹನ ಚಾಲಕರ ಮೇಲೆ ಕೇಸ್ ದಾಖಲು

ಬೆಂಗಳೂರು: ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುತ್ತಿದ್ದ 24 ಚಾಲಕರು ಮತ್ತು ಹೆಚ್ಚುವರಿ ಶಾಲಾಮಕ್ಕಳನ್ನು ಕರೆದುಕೊಂಡು ಹೋಗುತ್ತಿದ್ದ 327 ಚಾಲಕರ ವಿರುದ್ಧ ಕೇಸ್ ದಾಖಲಿಸಿ 65,400 ರೂ. ದಂಡ ವಿಧಿಸಿದ್ದಾರೆ. ಶುಕ್ರವಾರ ಬೆಳಗ್ಗೆ 7.30ರಿಂದ 9.30ರವರೆಗೆ ನಗರದೆಲ್ಲೆಡೆ ಸಂಚಾರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ 3,395 ವಾಹನಗಳ ತಪಾಸಣೆ ನಡೆಸಿದ್ದಾರೆ. ಸಂಚಾರ ನಿಯಮ ಉಲ್ಲಂಸಿದ ಶಾಲಾ ವಾಹನಗಳ 351 ಚಾಲಕರ ವಿರುದ್ಧ ಸಂಚಾರ ಪೊಲೀಸರು ಕೇಸ್ ದಾಖಲಿಸಿದ್ದಾರೆ. ಡ್ರಂಕ್ ಆ್ಯಂಡ್ ಡ್ರೈವ್ ದಂಡವನ್ನು ಕೋರ್ಟ್‌ನಲ್ಲಿ ಪಾವತಿಸುವಂತೆ ಸೂಚಿಸಿದ್ದಾರೆ. … Continue reading ಬೆಂಗಳೂರಲ್ಲಿ 351 ಶಾಲಾ ವಾಹನ ಚಾಲಕರ ಮೇಲೆ ಕೇಸ್ ದಾಖಲು