ನವದೆಹಲಿ/ ಲಕ್ನೋ: ರಾಮನವಮಿ (Ramanavami) ಪ್ರಯುತ್ತ ರಾಮಮಂದಿರದಲ್ಲಿ (RamMandir) ಅದ್ದೂರಿಯಾಗಿ ಆಚರಿಸಲು ಅಯೋಧ್ಯೆ ಸಜ್ಜಾಗಿದೆ. ಅದರಲ್ಲು ರಾಮಮಂದಿರ ನಿರ್ಮಾಣದ ಬಳಿಕ ಇದು ಮೊದಲನೇ ರಾಮನವಮಿ ಆಗಿದ್ದು ವಿಶೇಷವಾಗಿ ಆಚರಿಸಲಾಗುತ್ತಿದೆ.

ಇಂದು ಅಯೋಧ್ಯೆಯಲ್ಲಿ ಸುಮಾರು 10 ಲಕ್ಷಕ್ಕೂ ಹೆಚ್ಚು ಜನರು ಸೇರುವ ನಿರೀಕ್ಷೆ ಇದೆ. ವಿಶೇಷ ಪ್ರಸಾದ ವ್ಯವಸ್ಥೆಯೂ ಮಾಡಲಾಗಿದೆ. ಜನಸಂದಣೀಯ ನಿಯಂತ್ರಣಕ್ಕೆ ಎಲ್ಲಾ ವಿಶೇಷ ದರ್ಶನಗಳ ವ್ಯವಸ್ಥೆ ರದ್ದು ಮಾಡಿದೆ.
ರಾಮಮಂದಿರ ನಿರ್ಮಾಣವಾದ ಬಳಿಕ ಇದು ಮೋದಲನೇ ರಾಮನವಮಿ ಆಚರಿಸಲಾಗುತ್ತಿದ್ದು, ಇದಕ್ಕಾಗಿ ಸಾಕಷ್ಟು ತಯಾರಿ ಮಾಡಿಕೊಂಡಿದೆ. ಎಲ್ಲೆಡೆ ತಳೀರು ತೋರಣ ಕಂಗೊಳಿಸುತ್ತಿದ್ದು, ಮಂದಿರಕ್ಕೆ ವಿಶೇಷ ಅಲಂಕಾರ ಮಾಡಲಾಗಿದೆ. ಇಂದು ರಾಮನವಮಿ ಹಿನ್ನಲೆ ವಿಶೇಷ ಪೊಜೆ ಕೈಕಂಕರ್ಯಗಳನ್ನು ಮಾಡಲಾಗುತ್ತಿದೆ.

ಇಂದು ಬಾಲರಾಮನ ಹಣೆಗೆ ವಿಶೇಷ ಸೂರ್ಯರಶ್ಮಿ ತಿಲಕ
ಇನ್ನು ರಾಮನವಮಿ ದಿನದಂದು ಅಯೋಧ್ಯೆ ರಾಮಮಂದಿರ ಗರ್ಭಗುಡಿಯಲ್ಲಿರುವ ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬಿಳುತ್ತದೆ. ಇದು ಈ ಬಾರಿಯ ವಿಶೇಷವಾಗಿದೆ. ಇನ್ಮುಂದೆ ಪ್ರತಿ ವರ್ಷವು ರಾಮಮಂದಿರದ ಗರ್ಭಗುಡಿಯಲ್ಲಿರುವ ರಾಮಲಲ್ಲಾನ ಹಣೆ ಮೇಲೆ ತಿಲಕದಂತೆ ಸೂರ್ಯನ ಕಿರಣ ಬೀಳಲು ವ್ಯವಸ್ಥೆ ಮಾಡಲಾಗಿದೆ.