ಬೆಂಗಳೂರು: ರಾಜ್ಯದಲ್ಲಿ ಗ್ಯಾಸ್ ಸಿಲಿಂಡರ್ ಸಮಸ್ಯೆಯಿಂದ ಪ್ರತಿಯೊಂದು ಕುಟುಂಬ ಸಂಕಷ್ಟ ಅನುಭವಿಸುತ್ತಿದೆ ಎಂದು ಶಾಸಕ Pradeep Eshwar ಆರೋಪಿಸಿದ್ದಾರೆ. ಕೆಂಗಲ್ ಗೇಟ್ ಬಳಿ ಮಾತನಾಡಿದ ಅವರು, ಈ ಸಮಸ್ಯೆಗೆ ಕೇಂದ್ರ ಸರ್ಕಾರವೇ ಕಾರಣ ಎಂದು ಟೀಕಿಸಿದರು.
ರಾಜ್ಯದಲ್ಲಿ ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ಕುಟುಂಬಗಳು ಸಂಕಷ್ಟಕ್ಕೀಡಾಗಿದ್ದರೂ, ಬಿಜೆಪಿ ನಾಯಕರು ಇದ ಬಗ್ಗೆ ಮಾತನಾಡದೇ ಸಿನಿಮಾಗಳನ್ನು ನೋಡುವುದರಲ್ಲಿ ತೊಡಗಿದ್ದಾರೆ ಎಂದು ಅವರು ಆರೋಪಿಸಿದರು. ಇದೇ ವೇಳೆ The Kerala Story ಸಿನಿಮಾ ನೋಡಲು ಸಮಯ ಇರುವ ಬಿಜೆಪಿ ನಾಯಕರು ಕರ್ನಾಟಕದ ಜನರ ಸಮಸ್ಯೆಗಳನ್ನು ಕೇಳಲು ಮುಂದೆ ಬರುತ್ತಿಲ್ಲ ಎಂದು ಕಿಡಿಕಾರಿದರು.
ಎಫ್-ಸ್ಟೀನ್ ಫೈಲ್ ವಿವಾದದಲ್ಲಿಯೂ ಹಲವು ಅಂತರರಾಷ್ಟ್ರೀಯ ನಾಯಕರ ಹೆಸರುಗಳಿವೆ ಎಂದು ಹೇಳಲಾಗುತ್ತಿದೆ. ಇದರಲ್ಲಿ ಭಾರತದ ಪ್ರಧಾನಿ Narendra Modi, ಕೇಂದ್ರ ಪೆಟ್ರೋಲಿಯಂ ಸಚಿವ Hardeep Singh Puri ಹಾಗೂ ಅಮೆರಿಕದ ಮಾಜಿ ಅಧ್ಯಕ್ಷ Donald Trump ಅವರ ಹೆಸರುಗಳೂ ಉಲ್ಲೇಖವಾಗಿವೆ ಎಂದು ಹೇಳಿದರು. ಈ ಕುರಿತು ಸ್ವತಃ ಹರ್ದೀಪ್ ಸಿಂಗ್ ಪುರಿ ಅವರು ಹೇಳಿಕೆ ನೀಡಿದ್ದು, ಕೆಲವು ವಿಷಯಗಳು ನಿಜವೆಂದು ಒಪ್ಪಿಕೊಂಡಿದ್ದಾರೆ ಎಂದು ಅವರು ಆರೋಪಿಸಿದರು.
ಯುಎಸ್ ತನ್ನ ಆಂತರಿಕ ವಿವಾದಗಳನ್ನು ಮರೆಮಾಚಲು ಇರಾನ್ ಮೇಲೆ ದಾಳಿ ನಡೆಸಿದೆ ಎಂದು ಆರೋಪಿಸಿದ ಅವರು, ಈ ಬೆಳವಣಿಗೆಗಳಿಗೆ ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಕಾರಣ ಎನ್ನುವಂತೆ ಅಮೆರಿಕದ ಕೆಲವು ಮಾಧ್ಯಮಗಳು ವರದಿ ಮಾಡಿವೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್ ಭೇಟಿ ನೀಡಿದ ಬಳಿಕವೇ ಯುದ್ಧ ಪರಿಸ್ಥಿತಿ ಹೆಚ್ಚಾಗಿದೆ ಎಂದು ಆರೋಪಿಸಿದ ಅವರು, ಬಿಜೆಪಿ ನಾಯಕರು ಕೇರಳ ಸ್ಟೋರಿ ಬಗ್ಗೆ ಮಾತನಾಡುತ್ತಾರೆ, ಆದರೆ “ಕರ್ನಾಟಕ ಸ್ಟೋರಿ” ಕೇಳಲು ಯಾರು ಮುಂದೆ ಬರುತ್ತಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಅಂಧಭಕ್ತರು ಮತ್ತು ‘ವಾಟ್ಸಾಪ್ ಯುನಿವರ್ಸಿಟಿ’ಯ ಪ್ರಚಾರಕರೇ ಈ ವಿಚಾರಗಳ ಬಗ್ಗೆ ಯೋಚಿಸಬೇಕು ಎಂದು ಟೀಕಿಸಿದ ಅವರು, ಕರ್ನಾಟಕದ ಗೃಹಿಣಿಯರು ಕೇಂದ್ರ ಸರ್ಕಾರವನ್ನು ನಂಬಬಾರದು ಎಂದು ಕರೆ ನೀಡಿದರು.
ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ಮಾಡಿದರೆ ಅನೇಕ ಸಮಸ್ಯೆಗಳಿಗೆ ಫುಲ್ ಸ್ಟಾಪ್ ಬೀಳುತ್ತದೆ ಎಂದು ಹೇಳಿದರು.
ಇದೇ ವೇಳೆ ಬಿಜೆಪಿ ನಾಯಕ Basangouda Patil Yatnal ಅವರನ್ನು ಉಲ್ಲೇಖಿಸಿದ ಅವರು, “ಯತ್ನಾಳ್ ಅವರು Donald Trump ತರಾ ಮಾತನಾಡ್ತಾರೋ, ಅಥವಾ ಟ್ರಂಪ್ ಯತ್ನಾಳ್ ತರ ಮಾತನಾಡ್ತಾರೋ ನನಗೆ ಅರ್ಥವಾಗುತ್ತಿಲ್ಲ” ಎಂದು ವ್ಯಂಗ್ಯವಾಡಿದರು

