ಕುಣಿಗಲ್ : ಕಳೆದ ವರ್ಷ ಆಗಸ್ಟ್ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯ ಆಗಸ್ಟ್ 24 ರಂದು, ಒಂದು ಐತಿಹಾಸಿಕ ತೀರ್ಪನ್ನು ಕೊಟ್ಟಿದ್ದು, ಒಳ ಮೀಸಲಾತಿಯನ್ನು ರಾಜ್ಯ ಸರ್ಕಾರಗಳೇ ಜಾರಿ ಮಾಡಬಹುದು, ಎಂದು ಐತಿಹಾಸಿಕ ತೀರ್ಪನ್ನು ಕೊಟ್ಟಿದ್ದಾರೆ ಎಂದು ಕುಣಿಗಲ್ ತಾಲೂಕು ದಲಿತ ಸೇನೆ ರಾಷ್ಟ್ರೀಯ ಸಂಘಟನೆ ಅಧ್ಯಕ್ಷರಾದ “ಡಿಸಿ ವರದರಾಜು”ರವರು ತಿಳಿಸಿದರು,,
ಕಳೆದ ಸುಮಾರು ವರ್ಷಗಳಿಂದ ನಾವು ಸತತವಾಗಿ ಒಳ ಮೀಸಲಾತಿ ಕುರಿತು ಚಳುವಳಿಯನ್ನು ಮಾಡಿಕೊಂಡು ಬಂದಿದ್ದೇವೆ, ಈಗಾಗಲೇ ಸದಾಶಿವ ಆಯೋಗ ಆಯ್ತು ನಾಗಮೋಹನ್ ದಾಸ್ ಆಯೋಗ ರಾಜ್ಯ ಸರ್ಕಾರಕ್ಕೆ ಒಂದು ಮಧ್ಯಂತರ ತೀರ್ಪನ್ನು ಕೊಟ್ಟಿದೆ ಎಂದರು, ನಮ್ಮ ಛಲವಾದಿ ಬಂಧುಗಳಿಗೆ ತಿಳಿಸುವುದೇನೆಂದರೆ ಈ ತಿಂಗಳ ಅಂದರೆ ಏಪ್ರಿಲ್ ತಿಂಗಳಿನಲ್ಲಿ ಜನಗಣತಿಯವರು ನಿಮ್ಮ ಮನೆ ಹತ್ತಿರ ಬಂದರೆ ಈಗಾಗಲೇ ನಮ್ಮ ಬಲಗೈ ಜನಾಂಗದ ಆದಿ ಕರ್ನಾಟಕ, ಮತ್ತು ಆದಿ ದ್ರಾವಿಡ , ಎಂದು ನಮೂದಾಗಿರುತ್ತದೆ , ಆದ್ದರಿಂದ ನಿಮ್ಮ ಉಪಜಾತಿಯಲ್ಲಿ ಛಲವಾದಿ ಎಂದು ಕಡ್ಡಾಯವಾಗಿ ಬಳಸಬೇಕು ಎಂದು ಕುಣಿಗಲ್ ತಾಲ್ಲೂಕು ದಲಿತ ಸೇನೆ ರಾಷ್ಟ್ರೀಯ ಸಂಘಟನೆ ಅಧ್ಯಕ್ಷರಾದ ಡಿಸಿ ವರದರಾಜು ರವರು ,ಮತ್ತು ಉಪಾಧ್ಯಕ್ಷರಾದ ,ಆರ್ಎನ್ ಹಟ್ಟಿ ರಂಗಯ್ಯನವರು ,ತಿಳಿಸಿದರು,,
ಇದೇ ಸಂದರ್ಭದಲ್ಲಿ ತಾಲೂಕು ದಲಿತ ಸೇನೆ ಅಧ್ಯಕ್ಷರಾದ ಡಿಸಿ ವರದರಾಜು, ಉಪಾಧ್ಯಕ್ಷರಾದ ಆರ್ ಎನ್ ಹಟ್ಟಿ ರಂಗಯ್ಯ, ಕಾರ್ಯದರ್ಶಿಯಾದ ರಂಗಸ್ವಾಮಿ ಆರ್, ಸಂಘಟನಾ ಕಾರ್ಯದರ್ಶಿ ಚಿಕ್ಕರಾಮಯ್ಯ, ಯಡವಾಣಿ ಶ್ರೀನಿವಾಸ್, ರಘು ಆರ್ ದಾಸನಪುರ ಹಾಗೂ ಉಪಸ್ಥಿತರಿದ್ದರು,,,
ವರದಿ : ನರಸಿಂಹರಾಜು