ಚೀನಾ : ಹೊಸ ಆವಿಷ್ಕಾರಗಳ ಮೂಲಕ ಜಗತ್ತಿನ ಗಮನ ಸೆಳೆಯೋ ಡ್ರ್ಯಾಗನ್ ರಾಷ್ಟ್ರ ಚೀನಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಚೀನಾ ತನ್ನ ಮಿಲಿಟರಿ ಶಕ್ತಿಯನ್ನು ಬಳಪಡಿಸುವ ಉದ್ದೇಶದಿಂದ ಸೊಳ್ಳೆ ಗಾತ್ರದ ಡ್ರೋನ್ ಕ್ಯಾಮೆರಾ ನಿರ್ಮಿಸಿ ಎಲ್ಲರ ಹುಬ್ಬೇರಿಸಿದೆ.
ಚೀನಾದ NUDT ಇದನ್ನು ನಿರ್ಮಿಸಿದ್ದು, ಭದ್ರತಾ ಪಡೆಗಳ ಶಕ್ತಿಯನ್ನು ಹೆಚ್ಚಿಸಲು ಈ ಡ್ರೋನ್ ಗಳನ್ನು ಬಳಸಲಾಗುತ್ತದೆ.ಸೌತ್ ಚೀನಾದ ಮಾರ್ನಿಂಗ್ ಪೋಸ್ಟ್ ವರದಿ ಪ್ರಕಾರ, ವಿದ್ಯಾರ್ಥಿ ಒಬ್ಬ ತನ್ನ ಕೈಯಲ್ಲಿ ಡ್ರೋನ್ ಹಿಡಿದಿದ್ದು, ಫೋಟೋಗಳು ಎಲ್ಲೆಡೆ ವೈರಲ್ ಆಗಿದೆ.
ಶತ್ರುಗಳ ಸೂಕ್ಷ್ಮ ಮಾಹಿತಿ ಹಾಗೂ ಯುದ್ಧ ಭೂಮಿಯಲ್ಲಿ ವಿರೋಧಿಗಳ ತಂತ್ರಗಾರಿಕೆ ಬೇಧಿಸಲು ಈ ರೀತಿಯ ಡ್ರೋನ್ ಸಾಕಷ್ಟು ಸಹಕಾರಿ ಆಗುತ್ತದೆ.

