ಮಂಗಳೂರು: ನೂರಾರು ಶವಗಳನ್ನು ಹೂತಿದ್ದೆ ಎಂದು ಶರಣಾಗಿ ರಾಜ್ಯ ಪೊಲೀಸರನ್ನು ದಿಕ್ಕು ತಪ್ಪಿಸಿದ್ದ ದೂರುದಾರನ್ನು ಧರ್ಮಸ್ಥಳ ಪ್ರಕರಣದಲ್ಲಿ ಎಸ್‌ಐಟಿ ಪೊಲೀಸರು ಈಗಾಗಲೇ ಅನಾಮಿಕನನ್ನು ಬಂಧನಕ್ಕೊಳಪಡಿದ್ದು, ವಿಚಾರಣೆಯ ವೇಳೆ ಸ್ಫೋಟಕ ಹೇಳಿಕೆಯೊಂದನ್ನು ನೀಡಿದ್ದಾರೆ.
ವಿಚಾರಣೆಯ ವೇಳೆ ಬಾಯ್ಬಿಟ್ಟ ಅನಾಮಿಕ ಸಿ ಎನ್ ಚಿನ್ನಯ್ಯ, ನಾನು ಪಾತ್ರಧಾರಿ ಮಾತ್ರ, ನನ್ನ ಹಿಂದೆ ಸೂತ್ರಧಾರಿಗಳು ಬೇರೆಯೇ ಇದ್ದಾರೆ. ನನ್ನನ್ನು ಕರೆತಂದು ಈ ರೀತಿ ಹೇಳುವಂತೆ ಹೇಳಿದ್ದಾರೆ, ಅದಕ್ಕಾಗಿ ಹೇಳಿದೆ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾನೆ.
ನನ್ನನ್ನು ಒಂದಿಷ್ಟು ಜನ ಹುಡುಕಿಕೊಂಡು ಬಂದು ಬುರುಡೆ ನೀಡಿ ಇದನ್ನು ಕೋರ್ಟ್ ಗೆ ಒಪ್ಪಿಸಿ ಈ ರೀತಿ ಹೇಳು ಎಂದು ಒತ್ತಾಯಿಸಿದರು.. ಅದರಂತೆ ನಾನು ಒಪ್ಪಿಸಿದೆ ಎಂದು ಮಾಸ್ಕ್ ಮ್ಯನ್ ಸಿ ಎನ್ ಚೆನ್ನಯ್ಯ ಬಾಯ್ಬಿಟ್ಟಿದ್ದಾನೆ.
ಸುಮಾರು 19ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮುಸುಕುಧಾರಿ ಸಿಎನ್ ಚೆನ್ನಯ್ಯ ನನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದಾರೆ. ಅದರಂತೆ ಇಂದು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಬಳಿಕ ನ್ಯಾಯಾಂಗ ಬಂಧನ ಕೋರಿ ಮತ್ತೆ ವಶಕ್ಕೆ ಪಡೆಯುವ ಸಾಧ್ಯತೆಗಳು ದಟ್ಟವಾಗಿದೆ.
ದೂರುದಾರನು ತಾನು ಪ್ರಭಾವಿಗಳ ಆದೇಶದ ಮೇರೆಗೆ ನೂರಾರು ಹೆಣ್ಣು ಮಕ್ಕಳ ಶವಗಳನ್ನು ಧರ್ಮಸ್ಥಳದಲ್ಲಿ ಹೂತಿದ್ದೆ ಎಂದು ಪೊಲೀಸ್ ಠಾಣೆಗೆ ಶರಣಾಗಿ ಹೇಳಿಕೆ ನೀಡಿದ್ದ. ಕೂಡಲೇ ಸರ್ಕಾರ ಈತನ ಹೇಳಿಕೆಯ ಬಗ್ಗೆ ತನಿಖೆಗೆ ಎಸ್‌ಐಟಿ ರಚಿಸಿ, ಎಸ್ಐಟಿ ತಂಡಕ್ಕೆ ಮೊಹಾಂತಿ ಅವರನ್ನು ಮುಖ್ಯಸ್ಥರನ್ನಾಗಿ ಮಾಡಿತ್ತು.
ದೂರುದಾರನು 17 ಸ್ಥಳಗಳಲ್ಲಿ ತಾನು ಹೆಣಗಳನ್ನು ಹೂತಿರುವುದಾಗಿ ನುಡಿದಿದ್ದ ಜಾಗಗಳಲಿ ಬುಲ್ಡೋಜರ್ ಬಳಸಿ ಉತ್ಖನನ ನಡೆಸಲಾಗಿತ್ತು. ಒಂದು ಗುಂಡಿಯಲ್ಲಿ ಮಾತ್ರ ಕೆಲವು ಮೂಳೆಗಳು ದೊರೆತಿತ್ತು. ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಕಳಿಸಲಾಗಿದೆ.
ದೂರುದಾರನು ನೀಡುತ್ತಿರುವ ಹೇಳಿಕೆಗಳಲ್ಲಿ ವೈರುಧ್ಯ ಕಂಡು ಬಂದಿರುವುದು ಹಾಗೂ ಆತ ಪದೇ ಪದೇ ತನ್ನ ಹೇಳಿಕೆಗಳನ್ನು ಬದಲಾಯಿಸುತ್ತಿರುವುದನ್ನು ಗಮನಿಸಿದ ಎಸ್‌ಐಟಿ ನಿನ್ನೆ ರಾತ್ರಿಯಿಂದ ಆತನ ವಿಚಾರಣೆಯನ್ನು ತೀವ್ರಗೊಳಿಸಿತ್ತು. ಇಂದು ಮುಂಜಾನೆ ಐದು ಗಂಟೆಯವರೆಗೆ ಆತನನ್ನು ಪ್ರಶ್ನಿಸಲಾಗಿತ್ತು. ಈ ವೇಳೆ ಆತ ತಾನು ಹಣಕ್ಕಾಗಿ ಈ ಕೃತ್ಯವೆಸೆಗಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ದೂರುದಾರನ ಪತ್ನಿ ಹಾಗೂ ಸೋದರರನ್ನು ವಿಚಾರಣೆಗೊಳಪಡಿಸಿದ್ದಾಗ ಇಬ್ಬರೂ ಸಹ ದೂರುದಾರನ ಮೇಲೆ ವಿವಿಧ ಆರೋಪಗಳನ್ನು ಮಾಡಿದ್ದರು. ಆತ ಹಣಕ್ಕಾಗಿ ಏನು ಬೇಕಾದರೂ ಮಾಡುವ ಮನುಷ್ಯನಾಗಿದ್ದು ಧರ್ಮಸ್ಥಳದ ಹೆಸರಿಗೆ ಕಳಂಕ ತರುವ ಸಲುವಾಗಿ ಈತ ಪಿತೂರಿ ನಡೆಸಿದ್ದಾನೆಂದು ಆರೋಪಿಸಿದ್ದರು. ಬಳಿಕ ಎಸ್‌ಐಟಿ ವಿವಿಧ ಆಯಾಮಗಳಲ್ಲಿ ತನಿಖೆ ನಡೆಸಿ, ಆತನ ಬ್ಯಾಂಕ್ ಖಾತೆಗಳನ್ನೂ ಸಹ ಪರಿಶೀಲನೆಗೊಳಪಡಿಸಲಾಗಿತ್ತು.
ಇದೇ ವೇಳೆ ದೂರುದಾರನೊಂದಿಗೆ ನಿಕಟ ಸಂಪರ್ಕ ಹೊಂದಿದ್ದ, ಆತನಿಗೆ ಹಣಕಾಸು ಸಹಾಯ ನೀಡಿದ್ದ ಹಲವರಿಗೆ ಈಗ ಬಂಧನ ಎದುರಾಗಿದೆ. ನಿನ್ನೆಯಷ್ಟೇ ಸುಜಾತಾ ಭಟ್ ಎಂಬ ವಯೋವೃದ್ಧೆ ಅನನ್ಯಾ ಭಟ್ ನಾಪತ್ತೆ ಕಥೆ ಸುಳ್ಳು. ಕೆಲವರ ಒತ್ತಾಯದ ಮೇರೆಗೆ ನಾನು ಸುಳ್ಳು ಹೇಳಿದ್ದೆ. ಈಗ ರಾಜ್ಯದ ಜನರು, ಧರ್ಮಸ್ಥಳದ ಕ್ಷಮೆ ಯಾಚಿಸುವುದಾಗಿ ಹೇಳಿದ್ದರು. ಇಂದು ಬೆಳಗ್ಗೆ ತಮ್ಮ ಹೇಳಿಕೆಯನ್ನು ಬದಲಿಸಿ ತಾನು ಒತ್ತಾಯಪೂರ್ವಕವಾಗಿ ಈ ರೀತಿ ಹೇಳಬೇಕಾಗಿ ಬಂದಿದೆ. ನನ್ನ ಮಗಳು ಇದ್ದಿದ್ದೂ ನಿಜ. ಆಕೆಯು ಸತ್ತಿದ್ದೂ ನಿಜ ಎಂದು ಮತ್ತೊಂದು ಹೇಳಿಕೆ ನೀಡಿ ಎಲ್ಲರನ್ನೂ ಗೊಂದಲಕ್ಕೆ ಕೆಡವಿದ್ದಾರೆ.

