ಸದ್ಯ ಚುಟು ಚುಟು ಬೆಡಗಿಗೆ (Ashika Ranganath) ಟಾಲಿವುಡ್‌ನಲ್ಲೂ ಬೆಡಿಕೆ ಎಚ್ಚಾಗಿದ್ದು,ಇದೀಗ ಅವರಿಗೆ ಗೋಲ್ಡನ್ ಚಾನ್ಸ್ ಸಿಕ್ಕಿದೆ. ಕನ್ನಡತಿ ಅಶಿಕಾ ರಂಗನಾಥ್‌ಗೆ ಮೆಗಾಸ್ಟಾರ್ ಚಿರಂಜೀವಿ (Megastar Chiranjeevi) ಜೊತೆ ತೆರೆಹಂಚಿಕೊಳ್ಳುವ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಫ್ಯಾನ್ಸ್‌ಗೆ (Fans) ಸಿಹಿಸುದ್ದಿ ನೀಡಿದ್ದಾರೆ.
ಆಶಿಕಾ ರಂಗನಾಥ್ ಕನ್ನಡದ ಸಿನಿಮಾಗಳಲ್ಲಿ ಅಚ್ಚು ಕಟ್ಟಾಗಿ ನಟಿಸಿ ಜನಪ್ರಿಯತೆ ಪಡೆದುಕೊಂಡಿದ್ದಾರೆ. ಬಳಿಕ ಅವರು ಟಾಲಿವುಡ್‌ನಲ್ಲಿ ಎರಡು ಸಿನಿಮಾಗಳಲ್ಲಿ ನಡಿಸಿ ಟಾಲಿವುಡ್‌ಗೆ ಎಂಟ್ರಿ ಕೊಟ್ಟಿದ್ದರು. ಸದ್ಯ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ನಟನೆಯ ‘ವಿಶ್ವಂಭರ’ (Vishwambhara Film) ಸಿನಿಮಾದಲ್ಲಿ ಆಶಿಕಾ ಬಹಳ ಮಹತ್ವದ ಪಾತ್ರವೇ ಸಿಕ್ಕಿದೆಯಂತೆ. ವಸಿಷ್ಠ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಈ ಚಿತ್ರದಲ್ಲಿ ತ್ರಿಷಾ, ಮೀನಾಕ್ಷಿ ಚೌಧರಿ, ಬಣ್ಣ ಹಚ್ಚಿದ್ದಾರೆ. ಇವರ ಜೊತೆಗೆ ಪ್ರಮುಖ ಪಾತ್ರದಲ್ಲಿ ಅಶಿಕಾ ಕಾಣಿಸಿಕೊಳ್ತಿದ್ದಾರೆ. ಸದ್ಯ ಈ ಸುದ್ದಿ ಕೇಳಿ ಫ್ಯಾನ್ಸ್‌ಗೆ ಕೂತುಹಲ ಹೆಚ್ಚಾಗಿದೆ.
ಕಳೆದ ವರ್ಷ ನಂದಮೂರಿ ಕಲ್ಯಾಣ್ ನಟನೆಯ ‘ಆಮಿಗೋಸ್’ ಸಿನಿಮಾದಲ್ಲಿ ಹೀರೋಯಿನ್ ಆಗಿ ನಟಿಸಿದ್ದರು. ಆದರೆ ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಮಕಾಡೆ ಮಲಗಿತ್ತು. ನಂತರ ನಾಗಾರ್ಜುನ ಜೊತೆ ‘ನಾ ಸಾಮಿ ರಂಗ’ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರ ಸೂಪರ್ ಹಿಟ್ ಆಯ್ತು. ಈ ಬೆನ್ನಲ್ಲೇ ಮೆಗಾಸ್ಟಾರ್ ನಟಿಸುವ ಬಂಪರ್ ಅವಕಾಶ ನಟಿಗೆ ಸಿಕ್ಕಿದೆ.

ಸದ್ಯ ಕನ್ನಡ ನಟಿಮನಿಯರು ಟಾಲಿವುಡ್‌ನಲ್ಲು ಸಹ ಮಿಂಚುತ್ತಿದ್ದಾರೆ. ಸದ್ಯ ಅಶಿಕಾ ರಂಗನಾಥ್ ಅವರು ಸಹ ಖ್ಯಾತೆ ಪಡೆದುಕೊಳ್ಳುತ್ತಾರಾ ಎಂಬುದು ಕಾದು ನೋಡ ಬೇಕಿದೆ.

