ರಾಖಿ ಸಾವಂತ್ ಕೆಲ ದಿನಗಳ ಹಿಂದೆ ಅನಾರೋಗ್ಯದಿಂದ ಆಸ್ಪತ್ರಗೆ (Hospital) ದಾಖಲಾದ ಸುದ್ದಿ ಎಲ್ಲೆಡೆ ಸದ್ದು ಮಾಡಿತ್ತು. ರಾಖಿಯ (Raki sawanth) ಮಾಜಿ ಪತಿ ಆದಿಲ್ ರಾಖಿಗೆ ನ್ಯಾಯಾಲಯದ (Court) ನೊಟೀಸ್ ಬಂದಿದ್ದು, ಆಕೆ ಬಂಧನದಿಂದ ತಪ್ಪಿಸಿಕೊಳ್ಳಲು ಹೀಗೆ ಅನಾರೋಗ್ಯದ ನಾಟಕವಾಡುತ್ತಿದ್ದಾಳೆ ಎಂದಿದ್ದರು. ಇದೀಗ ನಿಜಾವಾಗಿಯೂ ರಾಖಿಗೆ ಆರೋಗ್ಯ ಸಮಸ್ಯೆ (Health Issue) ಇರುವುದು ಬೆಳಕಿಗೆ ಬಂದಿದೆ.
ಮೊದಲು ರಾಖಿ ಆಸ್ಪತ್ರೆಗೆ ದಾಖಲಾದಾಗ ಪ್ರಚಾರ ತಂತ್ರಕ್ಕಾಗಿ ರಾಖಿ ಅವರು ಅನಾರೋಗ್ಯದ ನಾಟಕ ಮಾಡುತ್ತಿದ್ದಾರೆ ಎಂಬ ಆರೋಪಗಳು ಸಹ ಕೇಳಿ ಬಂದಿತ್ತು. . ರಾಖಿಯ ಮಾಜಿ ಪತಿ ಆದಿಲ್, ರಾಖಿಗೆ ನ್ಯಾಯಾಲಯದ ನೊಟೀಸ್ ಬಂದಿದ್ದು, ಆಕೆ ಬಂಧನದಿಂದ ತಪ್ಪಿಸಿಕೊಳ್ಳಲು ಹೀಗೆ ಅನಾರೋಗ್ಯದ ನಾಟಕವಾಡುತ್ತಿದ್ದಾಳೆ ಎಂದಿದ್ದರು. ರಾಖಿಯ ಮತ್ತೊಬ್ಬ ಮಾಜಿ ಪತಿ ರಿತೇಶ್, ರಾಖಿಗೆ ಆರೋಗ್ಯ ಸಮಸ್ಯೆ ಎದುರಾಗಿದೆ ಎಲ್ಲರೂ ಆಕೆಗಾಗಿ ಪ್ರಾರ್ಥಿಸಿ ಎಂದಿದ್ದರು. ಈ ವಿಭಿನ್ನ ಹೇಳಿಕೆಗಳಿಂದ ರಾಖಿ ಅಭಿಮಾನಿಗಳು ಗೊಂದಲಕ್ಕೀಡಾಗಿದ್ದರು. ಇದೀಗ ಸ್ವತಃ ರಾಖಿ ಸಾವಂತ್ ಹಾಗೂ ಆಸ್ಪತ್ರೆ ಕಡೆಯಿಂದಲೂ ಅವರ ಅನಾರೋಗ್ಯದ ಬಗ್ಗೆ ಖಚಿತಪಡಿಸಲಾಗಿದೆ. ಇದನ್ನೂ ಓದಿ: ನಟಿ ಛಾಯಾಸಿಂಗ್ ತಾಯಿ ಮನೆಯಲ್ಲಿ ಕಳ್ಳತನ-ಮನೆ ಕೆಲಸದಾಕೆಯಿಂದ್ಲೇ ಕೃತ್ಯ

ಮೊದಲಿಗೆ ರಾಖಿ ಸಾವಂತ್ ಹೊಟ್ಟೆ ಹಾಗೂ ಎದೆ ನೋವಿನಿಂದಾಗಿ ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಅವರಿಗೆ ಗರ್ಭಕೋಶದಲ್ಲಿ 10 ಸಿಎಂನ ದೊಡ್ಡ ಟ್ಯುಮರ್ ಪತ್ತೆಯಾಗಿದೆ. ವೈದ್ಯರು ಅದು ಕ್ಯಾನ್ಸರ್ ಆಗಿರಬಹುದೆಂಬ ಅನುಮಾನ ವ್ಯಕ್ತಪಡಿಸಿದ್ದಾರೆ. ಸದ್ಯ ಪರೀಕ್ಷೆಗಳು ನಡೆಯುತ್ತಿವೆ. ಈ ಕುರಿತು ಮಾತನಾಡಿದ ರಾಖಿ ತಮ್ಮ ಗರ್ಭಕೋಶದಲ್ಲಿ ಟ್ಯೂಮರ್ ಆಗಿರುವುದಾಗಿ ಹೇಳಿಕೊಂಡಿದ್ದಾರೆ. ನಾನು ಆದಷ್ಟು ಬೇಗ ಹುಷಾರಾಗಿ ಬರುತ್ತೇನೆ ಎಂದು ವಡಿಯೋದಲ್ಲಿ ಹೇಳಿಕೊಂಡಿದ್ದಾರೆ. ಇದನ್ನೂ ಓದಿ: 11 ವರ್ಷಗಳ ದಾಂಪತ್ಯಕ್ಕೆ ಅಂತ್ಯ ಹಾಡಿದ ಹಾಡುಗಾರ ಜಿ.ವಿ ಪ್ರಕಾಶ್

ಸದ್ಯ ರಾಖಿ ಸಾವಂತ್ ದಾಖಲಾಗಿರುವ ಆಸ್ಪತ್ರೆ ಸಿಬ್ಬಂದಿ ರಾಖಿ ಗರ್ಭಕೋಶದಲ್ಲಿ 10 ಸೆಂ.ಮೀ ಉದ್ದದ ಟ್ಯೂಮರ್ ಇರುವುದನ್ನು ಖಚಿತಪಡಿಸಿದ್ದು, ಮೇ 18ರಂದು ಶಸ್ತ್ರಚಿಕಿತ್ಸೆ ನಡೆಸುವುದಾಗಿ ಹೇಳಿದ್ದಾರೆ. ಇದನ್ನೂ ಓದಿ: ಪವರ್‌ಸ್ಟಾರ್ ಬೆಂಬಲಿಸಿ ಬಳಿಕ ಯೂ ಟರ್ನ್ ಹೊಡೆದರಾ ಮೆಗಾಸ್ಟಾರ್
ರಾಖಿ ಸಾವಂತ್, ಬಾಲಿವುಡ್ನ ವಿವಾದಾತ್ಮಕ ನಟಿ. ಪ್ರಚಾರಕ್ಕಾಗಿ ಒಂದಲ್ಲ ಒಂದು ಸಾಹಸಗಳನ್ನು ರಾಖಿ ಸಾವಂತ್ ಮಾಡುತ್ತಲೇ ಇರುತ್ತಾರೆ. ಈ ಹಿಂದೆ ಮೈಸೂರಿನ ಆದಿಲ್ ಅನ್ನು ರಾಖಿ ಸಾವಂತ್ ವಿವಾಹವಾಗಿದ್ದರು. ಬಳಿಕ ಆದಿಲ್ ವಿರುದ್ಧ ಹಲವು ಆರೋಪಗಳನ್ನು ಮಾಡಿ ಆದಿಲ್ ವಿರುದ್ಧ ದೂರು ಸಹ ನೀಡಿದರು. ಅಂತೆಯೇ ಆದಿಲ್ ಬಂಧನವೂ ಆಗಿತ್ತು. ಬಳಿಕ ಆದಿಲ್, ರಾಖಿ ವಿರುದ್ಧ ಮರುದೂರು ಸಲ್ಲಿಸಿದ್ದು, ವಿಚಾರಣೆ ನಡೆಸಿದ ನ್ಯಾಯಾಲಯ ಒಂದು ವಾರದೊಳಗೆ ನ್ಯಾಯಾಲಯದ ಮುಂದೆ ಹಾಜರಾಗುವಂತೆ ರಾಖಿಗೆ ನೊಟೀಸ್ ಕಳಿಸಿತ್ತು. ಅಷ್ಟರಲ್ಲಾಗಲೆ ರಾಖಿ ಸಾವಂತ್ ಅನಾರೋಗ್ಯದಿಂದ ಆಸ್ಪತ್ರೆ ಸೇರಿಕೊಂಡಿದ್ದಾರೆ. ಇದನ್ನೂ ಓದಿ: ಸಂಗೀತ ನಿರ್ದೇಶಕ ಪ್ರವೀಣ್ ಕುಮಾರ್ ಅನಾರೋಗ್ಯದಿಂದ ನಿಧಾನ

