ಉತ್ತರ ಕನ್ನಡ: ದೇವಸ್ಥಾನದಲ್ಲಿ (Temple) ತೀರ್ಥ ನೀಡುವ ವಿಚಾರಕ್ಕಾಗಿ ಆರ್ಚಕರ ನಡುವೆ ಗಲಾಟೆ ನಡೆದಿರುವ ಘಟನೆ ಜಿಲ್ಲೆಯ ಗೋಕರ್ಣ (Gokarna) ಮಹಾಬಲೇಶ್ವರ (Mahabaleshwar) ದೇವಸ್ಥಾನದ ನಂದಿ (Nandi) ಮಂಟಪದಲ್ಲಿ ನಡೆದಿದೆ.
ಈ ಹಿನ್ನೆಲೆ ಏಳು ದಿನದವರೆಗೆ ಯಥಾ ಸ್ಥಿತಿ ಮುಂದುವರೆಸುವಂತೆ ಕುಮಟಾ ಸಹಾಯಕ ಆಯುಕ್ತೆ ಕಲ್ಯಾಣಿ ಕಾಂಬ್ಳೆ ಅವರು ಸೂಚನೆ ನೀಡಿದ್ದಾರೆ. ಅದರಂತೆ ಎಸಿ ಸೂಚನೆ ಹಿನ್ನೆಲೆ ಜಂಬೆ ಮನೆತನದ ಅರ್ಚಕರು ನಂದಿ ಮಂಟಪದಲ್ಲಿ ತೀರ್ಥ ನೀಡುವ ಕಾಯಕ ಮುಂದುವರೆಸಿದ್ದಾರೆ.ಇದನ್ನೂ ಓದಿ: ಪ್ರಜ್ವಲ್ ರೇವಣ್ಣ ವಾಪಸ್ ಬರೋದಕ್ಕೆ ಟೈಮ್ ಫಿಕ್ಸ್ -ಎರಡು ಬಾರಿ ಟಿಕೆಟ್ ಬುಕ್ ಮಾಡಿ ಕ್ಯಾನ್ಸಲ್ ಮಾಡಿರುವ ಸಂಸದ

ಎರಡು ಮನೆತನದ ಅರ್ಚಕರ ಮಧ್ಯೆ ಗಲಾಟೆ
ಇನ್ನು ಸಹಾಯಕ ಆಯುಕ್ತರ ಮಧ್ಯಸ್ಥಿಕೆಯಲ್ಲಿ ದೇವಸ್ಥಾನದ ಗರ್ಭಗುಡಿಯಲ್ಲಿ ಪ್ರತಿಭಟನೆಗಿಳಿದಿದ್ದ ಗೋಪಿ ಮನೆತನದ ಅರ್ಚಕರು ಸಧ್ಯ ಪ್ರತಿಭಟನೆಯನ್ನು ಹಿಂದಕ್ಕೆ ಪಡೆದಿದ್ದಾರೆ. ದೇವಸ್ಥಾನದ ನಂದಿ ಮಂಟಪದಲ್ಲಿ ತೀರ್ಥ ನೀಡುವ ವಿಚಾರವಾಗಿ ಜಂಬೆ ಮನೆತನ ಹಾಗೂ ಗೋಪಿ ಮನೆತನದ ನಡುವೆ ಇಂದು(ಮೇ.09) ವಿವಾದ ಏರ್ಪಟ್ಟಿತ್ತು. ನಿಗದಿಯಂತೆ ಜಂಬೆ ಮನೆತನ ಗೋಪಿ ಮನೆತಕ್ಕೆ ತೀರ್ಥ ನೀಡುವ ಕಾಯಕ ವಹಿಸುವಂತೆ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿಯಲ್ಲಿ ಗೋಪಿ ಮನೆತನದ ಅರ್ಚಕರು ಪ್ರತಿಭಟನೆಗಿಳಿದಿದ್ದರು.ಇದನ್ನೂ ಓದಿ: ಪಾಕಿಸ್ತಾನದ ಬಂದರಿನಲ್ಲಿ ಉಗ್ರ ದಾಳಿ, ಮಲಗಿದ್ದ ಕಾರ್ಮಿಕರ ಗುಂಡಿಕ್ಕಿ ಹತ್ಯೆ
ಈ ಹಿಂದೆ ಕೂಡ ನಂದಿ ಮಂಟಪದಲ್ಲಿ ತೀರ್ಥ ನೀಡುವ ಹಾಗೂ ಆರತಿ ತಟ್ಟೆಯ ಕಾಸಿನ ಹಕ್ಕಿಗಾಗಿ ಅರ್ಚಕರು ಕೋರ್ಟ್? ಮೆಟ್ಟಿಲೇರಿದ್ದರು. ಇದರ ಬೆನ್ನಲ್ಲೇ ಇದೀಗ ತೀರ್ಥ ನೀಡುವ ವಿಚಾರಕ್ಕಾಗಿ ಎರಡು ಮನೆತನದ ನಡುವೆ ಗಲಾಟೆ ಶುರುವಾಗಿದೆ. ಈ ಹಿನ್ನಲೆ ಎಚ್ಚೆತ್ತ ಎಸಿ ಅವರು ಕೂಡಲೇ ಮಧ್ಯಸ್ಥಿಕೆ ವಹಿಸಿ ಭಕ್ತರಿಗೆ ದೇವರ ದರ್ಶನಕ್ಕೆ, ಪೂಜೆಗೆ ಅಡ್ಡಿಯಾಗಿದ್ದಂತೆ ಸಮಸ್ಯೆಯನ್ನು ನಿವಾರಣೆ ಮಾಡಿದ್ದಾರೆ. ಇದನ್ನೂ ಓದಿ:ಭೀಕರ ಬರಗಾಲಕ್ಕೆ ಒಣಗಿದ 400 ಎಕರೆ ಕೆರೆ, ಸಾವಿರಾರು ಮೀನುಗಳ ಮಾರಣಹೋಮ

