ಬೆಂಗಳೂರು : ಕಿತ್ತೂರು ಉತ್ಸವದ ಜ್ಯೋತಿ ಬೆಳಗುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬೆಂಕಿ ತಾಗಿದೆ. ಇದನ್ನು ಕಂಡ ಗನ್ ಮ್ಯಾನ್ ಕೂಡಲೆ ಬೆಂಕಿ ನಂದಿಸಿದ್ದಾರೆ. ಸ್ವಲ್ಪದರಲ್ಲೇ ಭಾರೀ ಅನಾಹುತ ತಪ್ಪಿದೆ.
ವಿಧಾನಸೌಧದ ಮುಂಭಾಗ ನಡೆದ ಕಿತ್ತೂರು ಉತ್ಸವ ಕಾರ್ಯಕ್ರಮದಲ್ಲಿ ಘಟನೆ ನಡೆದಿದೆ. ಸಿಎಂ ಸಿದ್ದರಾಮಯ್ಯ ಅವರು ಕಿತ್ತೂರು ಉತ್ಸವಕ್ಕೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.
ಬಳಿಕ, ಕಿತ್ತೂರು ಉತ್ಸವದ ಠಥಕ್ಕೆ ಹಸಿರು ನಿಶಾನೆ ತೋರಿಸಿವ ವೇಳೆ ಪಕ್ಕದಲ್ಲೇ ಇದ್ದ ದೀಪದ ಬೆಂಕಿ ಸಿದ್ದರಾಮಯ್ಯ ಅವರ ಶಲ್ಯಗೆ ತಾಗಿದೆ. ಕೂಡಲೆ ಗನ್ ಮ್ಯಾನ್ ಬೆಂಕಿ ನಂದಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.
ವಿಜಯಜ್ಯೋತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಸಿಎಂ, ಅಕ್ಟೋಬರ್ 23, 24, 25 ರಂದು ಕಿತ್ತೂರು ಚೆನ್ನಮ್ಮನ ಉತ್ಸವ ನಡೆಯಲಿದೆ. ಅದರ ಅಂಗವಾಗಿ ವಿಜಯಜ್ಯೋತಿ ಯಾತ್ರೆ ನಡೆಯುತ್ತಿದೆ, ವಿಜಯಜ್ಯೋತಿ ಯಾತ್ರೆ ಇಂದಿನಿಂದ ಎಲ್ಲಾ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಕಿತ್ತೂರು ತಲುಪಲಿದೆ.