ಬೆಂಗಳೂರು : ದರ್ಶನ್ & ಗ್ಯಾಂಗ್ ನಿಂದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಕಾಮಿಡಿ ಸ್ಟಾರ್ ಚಿಕ್ಕಣ್ಣಗೆ ಮತ್ತೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.
ಪ್ರಕರಣ ತನಿಖಾ ಹಂತದಲ್ಲಿ ಇರುವಾಗಲೇ ಭೇಟಿ ಸಾಕ್ಷಿಯಾಗಿರುವ ಚಿಕ್ಕಣ್ಣ ಆರೋಪಿ ದರ್ಶನ್ ಭೇಟಿ ಮಾಡಿದ್ದರು, ಇದರಿಂದ ಚಿಕ್ಕಣ್ಣನಿಗೆ ನೋಟಿಸ್ ನೀಡಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ಈ ಹಿಂದೆ ಹೇಳಿಕೆ ದಾಖಲಿಸಿ ದರ್ಶನ್ ನೋಡಲು ಜೈಲಿಗೆ ತೆರಳಿದ್ದ ಚಿಕ್ಕಣ್ಣ ಯಾವ ಉದ್ದೇಶಕ್ಕೆ ಭೇಟಿ ಮಾಡಿದ್ದರು..? ಆರೋಪಿ ಜೊತೆ ಏನೆಲ್ಲಾ ಮಾತನಾಡಿದರು..? ತನಿಖಾ ಹಂತದಲ್ಲೇ ಭೇಟಿ ಉದ್ದೇಶದ ಪ್ರಶ್ನೆ ಸಾಕ್ಷಿ ಮೇಲೆ ಆರೋಪಿ ಪ್ರಭಾವದ ಸಾಧ್ಯತೆ ಮತ್ತು ಸಾಕ್ಷ್ಯವನ್ನ ತಿರುಚುವ ಸಾಧ್ಯತೆ ಕೂಡ ಇರುವುದರಿಂದ ಮತ್ತೆ ವಿಚಾರಣೆಗೆ ಚಿಕ್ಕಣ್ಣಗೆ ನೋಟೀಸ್ ನೀಡುವ ಸಾಧ್ಯತೆ ಇದೆ.