ಬೆಂಗಳೂರು: ಮಳೆಗಾಲದ ಅಧಿವೇಶನ ಬಳಿಕ ಸಚಿವ ಸಂಪುಟಕ್ಕೆ ಸರ್ಜರಿ ಸಾಧ್ಯತೆ ಇದೆ.
ಕಾಂಗ್ರೆಸ್‌ನಲ್ಲಿ ಸಿಎಂ-ಡಿಸಿಎಂ ಗದ್ದುಗೆಗಾಗಿ ಗುದ್ದಾಟ ನಡೆಯುತ್ತಿದ್ದು, ಈ ಕುರಿತು ಡಿಸಿಎಂ ಡಿಕೆ. ಶಿವಕುಮಾರ್(DK̤. Shivakumar) ಹೈಕಮಾಂಡ್‌ಗೆ ಮನವಿ ಸಲ್ಲಿಸಿದ್ದಾರೆ.
ಸಚಿವರಾದ ಕೆ.ಎನ್.ರಾಜಣ್ಣ, ವೆಂಕಟೇಶ್ ,ಡಾ.ಜಿ.ಪರಮೇಶ್ವರ್,ಸತೀಶ್ ಜಾರಕಿಹೊಳಿ, ಎಚ್.ಸಿ ಮಹಾದೇವಪ್ಪ ಸೇರಿದಂತೆ 7 ಜನ ಸಚಿವರ ಕೈಬಿಡಲು ಒತ್ತಾಯಿಸಲಾಗಿದೆ. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ಯಾತ್ರಾರ್ಥಿಗಳಿಗೆ ಗುಡ್ ನ್ಯೂಸ್
ಇನ್ನೂ ಪರಮೇಶ್ವರ್,ಎಚ್ ಸಿ.ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಅವರಿಗೆ ಖಾತೆ ಬದಲಿಸಲು ಚಿಂತನೆ ಮಾಡಲಾಗುತಿದೆ.
ಅಲ್ಲದೇ ಟಿ.ಬಿ.ಜಯಚಂದ್ರ,ಎಂ.ಕೃಷ್ಣಪ್ಪ ಸೇರಿದಂತೆ ನಾಲ್ಕೈದು ಹಿರಿಯರಿಗೆ ಸಂಪುಟದಲ್ಲಿ ಆದ್ಯತೆ ನೀಡಿ ಎಂದು ಮನವಿ ನೀಡುವಂತೆ ಸೂಚಿಸಲಾಗಿದೆ. ಇದನ್ನೂ ಓದಿ: ಇಂದು ಲೋಕಸಭೆಯಲ್ಲಿ ಮಾತನಾಡಲಿರುವ ಪ್ರಧಾನಿ ಮೋದಿ

