ನಟ ರಾಜ್ ತರುಣ್ (Raj Tarun) ಟಾಲಿವುಡ್‌ನ ಜನಪ್ರಿಯ ಯುವ ನಟ. ತಮ್ಮದೇ ಆದ ವಿಭಿನ್ನ ಶೈಲಿಯ ನಟನೆ ಮೂಲಕ ಸುಮಾರು 10 ವರ್ಷಗಳ ಕಾಲ ತೆಲುಗೂ ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದರು. ಜೊತೆಗೆ ಅವರದೇ ಅದಂತಹ ಅಭಿಮನಿ ವರ್ಗವನ್ನೂ ಸಹ ಹೊಂದಿದ್ದು, ಇದೀಗ ರಾಜ್ ತರುಣ್ ವಿರುದ್ಧ ಪ್ರೇಯಸಿಯೇ ದೂರು ನೀಡಿದ್ದಾಳೆ.
ನಟ ರಾಜ್ ತರುಣ್ ವಿರುದ್ಧ ಅವರ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಲಾವಣ್ಯ ಹೆಸರಿನ ಯುವತಿ ದೂರು ದಾಖಲಿಸಿದ್ದು, ಆಕೆಗೆ ನಟ ರಾಜ್ ತರುಣ್ ವಂಚನೆ ಮಾಡಿರುವುದಾಗಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ಲಾವಣ್ಯ ಹಾಗೂ ರಾಜ್ ತರುಣ್ ಕಳೆದ 2012 ರಿಂದಲೂ ಪ್ರೀತಿಯಲ್ಲಿದ್ದು, 2014 ರಿಂದಲೂ ಒಂದೇ ಮನೆಯಲ್ಲಿ ಲಿವಿನ್ ಟುಗೆದರ್ ರಿಲೇಷನ್ನಲ್ಲಿದ್ದಾರೆ. ಆದರೆ ಇತ್ತೀಚೆಗೆ ರಾಜ್, ಮುಂಬೈ ಮೂಲದ ಹೊಸ ನಾಯಕ ನಟಿಯೊಟ್ಟಿಗೆ ಆಪ್ತತೆ ಹೆಚ್ಚಿಸಿಕೊಂಡಿದ್ದು ತಮ್ಮ ಸಂಬಂಧಕ್ಕೆ ಗೌರವ ನೀಡುತ್ತಿಲ್ಲ ಎಂದು ಯುವತಿ ಲಾವಣ್ಯ ಆರೋಪಿಸಿದ್ದಾರೆ.
ಲಾವಣ್ಯ ಹೇಳುತ್ತಿರುವಂತೆ ಇದೀಗ ಮುಂಬೈ ಮೂಲದ ನಟಿ, ಲಾವಣ್ಯಗೆ ಬೆದರಿಕೆಗಳನ್ನು ಹಾಕಿದ್ದು, ರಾಜ್ ತರುಣ್ ಇಂದ ದೂರ ಇರುವಂತೆ ಒತ್ತಾಯಿಸಿದ್ದಾರೆ. ಲಾವಣ್ಯಗೆ ನಟಿಯಿಂದ, ಆಕೆಯ ಸಹೋದರನಿಂದ ಬೆದರಿಕೆಗಳು ಬಂದಿವೆಯಂತೆ. ಕೆಲ ತಿಂಗಳ ಹಿಂದೆ ಸಹ ಲಾವಣ್ಯ, ರಾಜ್ ಅನ್ನು ಮದುವೆಯಾಗಲು ನಿಶ್ಚಯಿಸಿದ್ದರಂತೆ. ಆ ಸಮಯದಲ್ಲಿ ಆ ನಟಿಗೆ ಕರೆ ಮಾಡಿ ರಾಜ್ ಇಂದ ದೂರ ಇರುವಂತೆ ಬೇಡಿಕೊಂಡಿದ್ದಾಗಿಯೂ ಲಾವಣ್ಯ ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ತಮ್ಮ ಹಾಗೂ ರಾಜ್ ತರುಣ್ರ ಕೆಲ ಆಪ್ತ ಚಿತ್ರಗಳನ್ನು ಸಹ ನಟಿ ಪೊಲೀಸರೊಟ್ಟಿಗೆ ಹಂಚಿಕೊಂಡಿದ್ದಾಳೆ.