ಬೆಂಗಳೂರು: ವಿಷ ಸೇವಿಸಿ ಗಂಡ-ಹೆಂಡತಿ (Husband-Wife) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು (Bengaluru) ಹೊರವಲಯದ ಬನ್ನೇರುಘಟ್ಟ ಜನತಾ ಕಾಲೋನಿಯಲ್ಲಿ ನಡೆದಿದೆ.
ಪ್ರಭು (38), ಲಕ್ಕಮ್ಮ (30) ಮೃತ ದುರ್ದೈವಿಗಳು. ಗಂಡ ಪ್ರಭು ಡ್ರೈವರ್ ಕೆಲಸ ಮಾಡುತ್ತಿದ್ದು, ಲಕ್ಕಮ್ಮ ಗಾರ್ಮೆಂಟ್ಸ್ ಕೆಲಸ ಮಾಡುತ್ತಿದ್ದರು. ಗಂಡ-ಹೆಂಡತಿ ವಾಸವಿದ್ದ ಮನೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರಿಂದ ಸ್ಥಳೀಯರು ಹೋಗಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಇದನ್ನೂ ಓದಿ: ನಿತೀಶ್, ಯಾದವ್ ಒಂದೇ ವಿಮಾನದಲ್ಲಿ ಪ್ರಯಾಣ- ಜೆಡಿಯು ಸ್ಪಷ್ಟನೆ
ದಂಪತಿ ಮೃತಪಟ್ಟು ಮೂರರಿಂದ ನಾಲ್ಕು ದಿನ ಕಳೆದಿರಬಹುದು ಎಂದು ಊಹಿಸಲಾಗಿದೆ. ವಿಶ್ವನಾಥ್ ಎಂಬವರ ಮನೆಯಲ್ಲಿ ದಂಪತಿ ಬಾಡಿಗೆಗಿದ್ದರು. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇದನ್ನೂ ಓದಿ: ಮೂರನೇ ಬಾರಿಗೆ ಮೋದಿ ಪ್ರಧಾನಿ – ಜೂನ್ 8 ಸಂಜೆ ಪ್ರಮಾಣವಚನ
ಬನ್ನೇರುಘಟ್ಟ ಪೊಲೀಸ್ ಠಾಣಾ ವ್ಯಾಪ್ತಿಯ ಜನತಾ ಕಾಲೋನಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಉತ್ತರಾಖಂಡದಲ್ಲಿ ಚಾರಣಕ್ಕೆ ತೆರಳಿದ್ದ 9 ಮಂದಿ ಸಾವು- ಕರ್ನಾಟಕದಿಂದ ನಾಲ್ವರು

