ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕುಲಗೂಡ ಗ್ರಾಮದಲ್ಲಿ ಅದ್ದೂರಿಯಾಗಿ ನಡೆದ ಭೀಮ್ ಜಯಂತಿ ಆಚರಿಸಲಾಯಿತು. ಭಾರತ ರತ್ನ, ಸಂವಿದಾನ ಶಿಲ್ಪಿ, ದಲಿತ ಸೂರ್ಯ ಜಗತ್ತಿನ ಜ್ಞಾನ ಸಂಕೇತ ಡಾ. ಭೀಮರಾವ ರಾಮಜಿ ಅಂಬೇಡ್ಕರ್ ರವರ 134 ನೆ ಜಯಂತಿ ನಿಮಿತ್ಯ “ದಲಿತೋತ್ಸವ” ಕಾರ್ಯಕ್ರಮದಲ್ಲಿ ಹಲವಾರು ಜನರು ಅಂಬೇಡ್ಕರ್ ವಿಚಾರ -ದಾರೆಗಳು ಕ್ರಾಂತಿಗೀತೆಗಳು ಮೊಳಗಿದವು
ಅಂಬೇಡ್ಕರ್ ಜಯಂತಿ ಗ್ರಾಮ ಹಬ್ಬ ಎಂಬಂತೆ ಊರಿನ ಪ್ರಮುಖ ಸ್ಥಳಗಳ ದಾರಿಯುದ್ಧಕ್ಕೂ ನಿಲಿಬಾವುಟಗಳು ಬ್ಯಾನರ್ ಹಾಗೂ ಕಟೌಟ್ಗಳು ರಾರಾಜಿಸುತಿದ್ದವು
ಗ್ರಾಮದ ನಾಯಕ ಸ್ಟೂಡೆಂಟ್ ಪೇಡರೇಷನ್ ಶಾಲಾ ಮೈದಾನದಲ್ಲಿ ಹಮ್ಮಿಕೊಂಡ ಸಮಾರಂಬದಲ್ಲಿ ಸಮಾಜದ ಜನರು ಮೂಢನಂಬಿಕೆಗಳಿಂದ ಹೊರಬಂದು ಶಿಕ್ಷಣ ಅಸ್ತ್ರ ಹಿಡಿದು ಸಂಘಟನೆ ಮುಖಾಂತರ ಹೋರಾಟದ ಹಾದಿ ಹಿಡಿಯುವದು ಅನಿವಾರ್ಯವಾಗಿದೆ.
ಮನುವಾದನ್ನು ನಾವು ಖಂಡಿಸಿ ಬುದ್ಧ ಬಸವ ಅಂಬೇಡ್ಕರ್ ತತ್ವಗಳನ್ನು ಅನುಸರಿಸಬೇಕು, ದುಶ್ಚಟಗಳಿಂದ ದೂರವಿದ್ದು ಸಂವಿದಾನದ ಉಳಿಗಿಗಾಗಿ ಇಂದು ಶ್ರಮಿಸಬೇಕಿದೆ ಎಂಬುದು ಬಹುತೇಕ ಭಾಷಣಕಾರರ ನಿಲುವಾಗಿತ್ತ ಕುಮಾರಿ ರಕ್ಷಿತಾ ಮೇತ್ರಿ ಭಾಷಣ ಸಬಿಕರ ಮೆಚ್ಚುಗೆಗೆ ಪಾತ್ರವಾಯಿತು
ಕಾರ್ಯಕ್ರಮದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ, ಸರ್ವೋತ್ತಮ ಜಾರಕಿಹೊಳಿ, ಎಂ. ಬಿ. ಪಾಟೀಲ್, ಪ್ರಕಾಶ್ ಕಾಳಶಟ್ಟಿ, ಗ್ರಾಮದ ಹಿರಿಯರು ಸಾವಿರಾರು ಸಂಖ್ಯೆಯ ಭೀಮ್ ಬಂದುಗಳು ಹಾಜರಿದ್ದರು
ವರದಿ : ಎಂ. ಕೆ. ಸಪ್ತಸಾಗರ

