ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ಗೆಲುವಿಗಾಗಿ ಅಭಿಮಾನಿಗಳು ಪಣ ತೊಟ್ಟು ನಿಂತಿದ್ದಾರೆ. ರಾಜ್ಯಾದ್ಯಂತ ಥಿಯೇಟರ್‌ಗಳ ಮುಂದೆ ದರ್ಶನ್ ಅಭಿಮಾನಿಗಳು ಸ್ವತಃ ಮುಂಚೂಣಿಯಲ್ಲಿ ನಿಂತು ಸಂಭ್ರಮಾಚರಣೆ ನಡೆಸುತ್ತಿರುವುದು ಕಂಡುಬಂದಿದೆ. ಕೇಕ್ ಕತ್ತರಿಸುವುದು, ಪಟಾಕಿ ಸಿಡಿಸುವುದು, ಪೋಸ್ಟರ್‌ಗಳಿಗೆ ಹಾಲು ಅಭಿಷೇಕ ಮಾಡುವ ಮೂಲಕ ಅಭಿಮಾನಿಗಳು ತಮ್ಮ ಉತ್ಸಾಹ ವ್ಯಕ್ತಪಡಿಸುತ್ತಿದ್ದಾರೆ.
ಚಿತ್ರತಂಡ ನೀಡಿರುವ ಅಂಕಿ-ಅಂಶಗಳ ಪ್ರಕಾರ, ಬಿಡುಗಡೆಗೊಂಡ ಮೊದಲ ದಿನವೇ ‘ಡೆವಿಲ್’ ಸಿನಿಮಾ ಸುಮಾರು ₹13.8 ಕೋಟಿ ರೂ.ಗಳ ಕಲೆಕ್ಷನ್ ದಾಖಲಿಸಿದೆ. ಆದರೆ, ಎರಡನೇ ದಿನ ಸಿನಿಮಾ ಕಲೆಕ್ಷನ್‌ನಲ್ಲಿ ಸ್ವಲ್ಪ ಕುಸಿತ ಕಂಡಿದೆ. ಎರಡನೇ ದಿನ ವೀಕ್‌ಡೇ ಆಗಿದ್ದರಿಂದ ಜನರು ಥಿಯೇಟರ್‌ಗಳ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮುಖ ಮಾಡಿಲ್ಲ ಎನ್ನಲಾಗುತ್ತಿದೆ.
ಆದರೂ, ವೀಕೆಂಡ್‌ನಲ್ಲಿ ‘ಡೆವಿಲ್’ ಸಿನಿಮಾ ಭರ್ಜರಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ವಿತರಕರು ಹಾಗೂ ಚಿತ್ರವಲಯದ ಮೂಲಗಳು ಅಂದಾಜು ಮಾಡಿವೆ. ದರ್ಶನ್ ಅವರ ಅಭಿಮಾನಿ ಬಳಗದ ಭಾರೀ ಬೆಂಬಲದ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಬಾಕ್ಸ್‌ಆಫೀಸ್‌ನಲ್ಲಿ ಸಿನಿಮಾ ಮತ್ತಷ್ಟು ಸಾಧನೆ ಮಾಡುವ ನಿರೀಕ್ಷೆ ವ್ಯಕ್ತವಾಗಿದೆ.

