ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕಿಡ್ನಾಪ್ ಹಾಗೂ ಕೊಲೆ (Renukaswamy Case) ಪ್ರಕರಣ ಸಂಬಂಧ ನಟ ದರ್ಶನ್ ಹಾಗೂ ಗ್ಯಾಂಗ್ ಪರಪ್ಪನ ಅಗ್ರಹಾರ ಜೈಲು (Jail) ಸೇರಿದೆ. ಆದರೆ ಜೈಲು ಸೇರಿದ ನಟನನ್ನು ಸೆಕ್ಯುರಿಟಿ ಸೆಲ್ನಲ್ಲಿ ಇಟ್ಟಿರುವುದು ಕುತೂಹಲ ಮೂಡಿದೆ.
ವಿಐಪಿ ಸೆಲ್ ಪಕ್ಕದ ಸೆಕ್ಯುರಿಟಿ ಸೆಲ್ ನಲ್ಲಿ ದರ್ಶನ್ (Challenging Star Darshan) ವಾಸವಾಗಿದ್ದಾರೆ. ಈ ಸೆಲ್ಗೆ ಇತರೆ ಯಾವುದೇ ಆರೋಪಿಗಳು ಅಥವಾ ಸಿಬ್ಬಂದಿಗೆ ಎಂಟ್ರಿ ಇಲ್ಲ. ಈ ಮೂಕ ನಟನನ್ನು ಸೆಕ್ಯುರಿಟಿ ಸೆಲ್ ನಲ್ಲಿಟ್ಟು ಸಿಬ್ಬಂದಿ ರಕ್ಷಣೆ ನೀಡುತ್ತಿದ್ದಾರೆ. ಇದನ್ನೂ ಓದಿ: 18ನೇ ಲೋಕಸಭೆಯ ಮೊದಲ ಅಧಿವೇಶನ ಇಂದಿನಿಂದ ಶುರು
ಇನ್ನು ಕೊಲೆ ಆರೋಪಿಗಳು ಒಟ್ಟಿಗೆ ಸೇರಿ ಸಾಕ್ಷ್ಯಗಳ ಮೇಲೆ ಪರಿಣಾಮ ಬೀರಬಹುದು. ರೇಣುಕಾಸ್ವಾಮಿ ಕೊಲೆ ಕೇಸ್ ಸಾಕಷ್ಟು ಸದ್ದು ಮಾಡಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಜೊತೆಗೆ ಇತರೆ ನಟರ ಅಭಿಮಾನಿಗLಊ ಸಹ ಜೈಲಿನಲ್ಲಿದ್ದು, ಅವರ ನಡುವೆ ಗಲಾಟೆಯಾಗುವ ಅವಕಾಶವಿದೆ ಎಂದು ದರ್ಶನ್ ಅವರನ್ನು ತುಮುಕೂರಿನ ಜೈಲಿಗೆ ಶಿಫ್ಟ್ ಮಾಡುವಂತೆ ಎಸ್ಪಿಪಿ ಮನವಿ ಮಾಡಿದ್ದಾರೆ. ಇದನ್ನೂ ಓದಿ: ರಷ್ಯಾದ ಚರ್ಚ್ಗಳ ಮೇಲೆ ಭಯೋತ್ಪಾದಕ ದಾಳಿ- 15 ಮಂದಿ ಪೊಲೀಸರು ದುರ್ಮರಣ
ಇಂದು ಅರ್ಜಿ ವಿಚಾರಣೆ: ತುಮಕೂರು ಜೈಲಿಗೆ ಶಿಫ್ಟ್ ಮಾಡುವ ಕುರಿತು ಸೋಮವಾರ ಅರ್ಜಿ ಸಲ್ಲಿಸುವಂತೆ ಕೋರ್ಟ್ ಸೂಚಿಸಿತ್ತು. ಹಾಗಾಗಿ ಇಂದು ಈ ಸಂಬಂಧ ವಾದ ಪ್ರತಿವಾದ ನಡೆಯಲಿದ್ದು, ದರ್ಶನ್ ತುಮಕೂರು ಜೈಲಿಗೆ ಶಿಫ್ಟ್ ಆಗ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಸೂರಜ್ ವಿರುದ್ಧ ದೂರು ನೀಡಿದ್ದ ದೂರುದಾರ ನಾಪತ್ತೆ!