By using this site, you agree to the Privacy Policy and Terms of Use.
Accept
Sampoorna Vaani NewsSampoorna Vaani NewsSampoorna Vaani News
  • Home
  • Latest
  • ರಾಜ್ಯ
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
  • ಕ್ರೀಡೆ
    • ಕ್ರಿಕೆಟ್
    • ಇತರೆ
  • ಕೃಷಿ-Agriculture
  • ಆಹಾರ
    • ಸಸ್ಯಾಹಾರಿ
    • ಮಾಂಸಾಹಾರಿ
  • ಕ್ರೈಂ
  • Court
  • epaper
  • Web Stories
  • Videos
Reading: ‘ಡೆವಿಲ್’ಗೆ ವೀಸಾ ನಿರಾಕರಿಸಿದ ಸ್ವಿಟ್ಜರ್‌ಲ್ಯಾಂಡ್ ಬೆನ್ನಲ್ಲೇ ಥಾಯ್ಲೆಂಡ್​ಗೆ ಹೊರಟ ದರ್ಶನ್‌
Share
Font ResizerAa
Font ResizerAa
Sampoorna Vaani NewsSampoorna Vaani News
  • Home
  • Latest
  • ರಾಜ್ಯ
  • ರಾಜಕೀಯ
  • ದೇಶ
  • ವಿದೇಶ
  • ಆರೋಗ್ಯ
  • ಚುನಾವಣೆ
  • ವಾಣಿಜ್ಯ
  • ಜ್ಯೋತಿಷ್ಯ
  • ತಂತ್ರಜ್ಞಾನ
  • ಸಿನಿಮಾ
  • ಕ್ರೀಡೆ
  • ಕೃಷಿ-Agriculture
  • ಆಹಾರ
  • ಕ್ರೈಂ
  • Court
  • epaper
  • Web Stories
  • Videos
  • ಜಿಲ್ಲೆಗಳು
    • ಬೆಂಗಳೂರು-Bengaluru
    • ಬೆಂಗಳೂರು ಗ್ರಾಮಾಂತರ
    • ಬಳ್ಳಾರಿ-Ballary
    • ಬೆಳಗಾವಿ-Belagavi
    • ಬಾಗಲಕೋಟೆ
    • ಬೀದರ್​-Bidar
    • ಚಾಮರಾಜನಗರ-Chamarajanagara
    • ಚಿಕ್ಕಬಳ್ಳಾಪುರ-Chikkaballapura
    • ಚಿಕ್ಕಮಗಳೂರು-Chikkamagaluru
    • ಚಿತ್ರದುರ್ಗ-Chitradurga
    • ದಕ್ಷಿಣ ಕನ್ನಡ-Dakshina Kannada
    • ದಾವಣಗೆರೆ-Davanagere
    • ಧಾರವಾಡ-Dharwad
    • ಗದಗ-Gadag
    • ಹಾಸನ-Hassan
    • ಹಾವೇರಿ-Haveri
    • ಕಲಬುರಗಿ-Kalaburagi
    • ಕೊಡಗು-Kodagu
    • ಕೋಲಾರ-Kolara
    • ಕೊಪ್ಪಳ-Koppala
    • ಮಂಡ್ಯ-Mandya
    • ಮೈಸೂರು-Mysuru
    • ರಾಯಚೂರು
    • ರಾಮನಗರ-Ramanagara
    • ಶಿವಮೊಗ್ಗ-Shivamogga
    • ತುಮಕೂರು-Tumakuru
    • ಉಡುಪಿ-Udupi
    • ಉತ್ತರ ಕನ್ನಡ-Uttara Kannada
    • ವಿಜಯಪುರ-Vijayapura
    • ಯಾದಗಿರಿ
  • Entertainment
    • ಸ್ಯಾಂಡಲ್​ವುಡ್-Sandalwood
    • ಬಾಲಿವುಡ್​ – Bollywood
    • ಹಾಲಿವುಡ್-Hollywood
    • ಕಿರುತೆರೆ
    • ಚಿತ್ರ ವಿಮರ್ಶೆ-Movie Review
Have an existing account? Sign In
Follow US
© 2024 All Rights Reserved.
Sampoorna Vaani News > Blog > Entertainment > ಸ್ಯಾಂಡಲ್​ವುಡ್-Sandalwood > ‘ಡೆವಿಲ್’ಗೆ ವೀಸಾ ನಿರಾಕರಿಸಿದ ಸ್ವಿಟ್ಜರ್‌ಲ್ಯಾಂಡ್ ಬೆನ್ನಲ್ಲೇ ಥಾಯ್ಲೆಂಡ್​ಗೆ ಹೊರಟ ದರ್ಶನ್‌
EntertainmentLatestಸ್ಯಾಂಡಲ್​ವುಡ್-Sandalwood

‘ಡೆವಿಲ್’ಗೆ ವೀಸಾ ನಿರಾಕರಿಸಿದ ಸ್ವಿಟ್ಜರ್‌ಲ್ಯಾಂಡ್ ಬೆನ್ನಲ್ಲೇ ಥಾಯ್ಲೆಂಡ್​ಗೆ ಹೊರಟ ದರ್ಶನ್‌

Darshan leaves for Thailand after Switzerland denies visa

Published July 11, 2025
Share
2 Min Read
SHARE

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ನಟ ದರ್ಶನ್‌ ಅವರಿಗೆ ಯುರೋಪ್‌ನ ಸ್ವಿಟ್ಜರ್‌ಲ್ಯಾಂಡ್ ವೀಸಾ ನಿರಾಕರಿಸಲಾಗಿದೆ. ಇದರಿಂದ ʼಡೆವಿಲ್‌ʼ ಚಿತ್ರದ ಶೂಟಿಂಗ್‌ ತಮ್ಮ ಲಕ್ಕಿ ಸ್ಟಾಟ್‌ನಲ್ಲಿ ನಡೆಸಬೇಕು ಎನ್ನುವ ಅವರ ಕನಸು ಭಗ್ನಗೊಂಡಿದೆ.ಸ್ವಿಟ್ಜರ್‌ಲ್ಯಾಂಡ್‌ ವೀಸಾ ಕ್ಯಾನ್ಸಲ್‌ ಆದ ಬೆನ್ನಲ್ಲೇ ದರ್ಶನ್‌ ಥಾಯ್ಲೆಂಡ್‌ ಪರ್ಮಿಶನ್‌ಗೆ ಕೊರ್ಟ್ ಮೊರೆ ಹೋಗಿದ್ದು, ಜುಲೈ 11ರಿಂದ ತೆರಳಲು ಅನುಮತಿ ಸಿಕ್ಕಿದೆ. ಹೀಗಾಗಿ ದರ್ಶನ್‌ ಮುಂದಿನ ವಾರ ಥಾಯ್ಲೆಂಡ್‌ನ ಪುಕೆಟ್‌ಗೆ ಪ್ರಯಾಣ ಬೆಳೆಸಲಿದ್ದಾರೆ.

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ಆಗಿರುವ ದರ್ಶನ್, ವಿದೇಶ ಪ್ರಯಾಣಕ್ಕೆ ನ್ಯಾಯಾಲಯದ ಅನುಮತಿ ಪಡೆಯಬೇಕಾಗಿರುವುದು ನಿಯಮ. ಹೀಗಾಗಿ 64 ಸಿಸಿಎಚ್‌ ಕೋರ್ಟ್ ಅರ್ಜಿ ಸಲ್ಲಿಸಿ ಅನುಮತಿ ಪಡೆದಿದ್ದರು. ದರ್ಶನ್ ಯೂರೋಪ್ ದೇಶಗಳಿಗೆ ತೆರಳಲು ಜೂನ್ 1 ರಿಂದ 25ರ ವರೆಗೆ ಅನುಮತಿ ನೀಡಲಾಗಿತ್ತು. ಆದರೆ ವೀಸಾ ನಿರಾಕರಣೆ ಕಾರಣಕ್ಕೆ ಅದು ಸಾಧ್ಯವಾಗಲಿಲ್ಲ. ಈಗ ಥಾಯ್ಲೆಂಡ್​ಗೆ ತೆರಳಲು ಮತ್ತೆ ಅನುಮತಿಯನ್ನು ದರ್ಶನ್ ಪಡೆದುಕೊಂಡಿದ್ದಾರೆ.

‘ಡೆವಿಲ್’ ಸಿನಿಮಾದ ಹಾಡಿನ ಚಿತ್ರೀಕರಣಕ್ಕೆ ಯೂರೋಪ್ ದೇಶಗಳಿಗೆ ತೆರಳಲು ಚಿತ್ರತಂಡ ಯೋಜಿಸಿತ್ತು. ಆದರೆ ಇಸ್ರೇಲ್-ಇರಾನ್ ಯುದ್ಧದಿಂದಾಗಿ ಯೂರೂಪಿಯನ್ ದೇಶಗಳ ವೈಮಾನಿಕ ವ್ಯವಸ್ಥೆ ಹದಗೆಟ್ಟಿದೆ ಎನ್ನಲಾಗುತ್ತಿದೆ. ಇದೇ ಕಾರಣಕ್ಕೆ ಯೂರೋಪ್ ದೇಶಗಳಿಗೆ ವಿಶೇಷವಾಗಿ ಸ್ವಿಟ್ಜರ್ಲ್ಯಾಂಡ್​ಗೆ ಹೋಗುವ ಐಡಿಯಾ ಅನ್ನು ಚಿತ್ರತಂಡ ಕೈಬಿಟ್ಟಿತು ಎನ್ನಲಾಗಿದೆ. ಆದರೆ ಅಸಲಿ ಕಾರಣ ಬೇರೆಯೇ ಇದೆಯಂತೆ. ದರ್ಶನ್ ವಿರುದ್ಧ ಕೊಲೆ ಪ್ರಕರಣದ ವಿಚಾರಣೆ ಚಾಲ್ತಿಯಲ್ಲಿರುವ ಕಾರಣ, ದರ್ಶನ್ ಅವರಿಗೆ ಸ್ವಿಟ್ಜರ್ಲೆಂಡ್ ವೀಸಾ ನಿರಾಕರಿಸಲಾಗಿದೆ. ಹೀಗಾಗಿ ಚಿತ್ರತಂಡ ಬದಲಿ ಆಯ್ಕೆ ಮಾಡಿಕೊಂಡಿದೆ.

ಸ್ವಿಟ್ಜರ್​ಲ್ಯಾಂಡ್​ಗೆ ಹೋಗಿ ಚಿತ್ರೀಕರಣ ಮಾಡಬೇಕು ಎಂಬುದು ಚಿತ್ರತಂಡದ ಮೂಲ ಯೋಜನೆಯಾಗಿತ್ತು. ದರ್ಶನ್​ ಸಹ ಸ್ವಿಟ್ಜರ್ಲೆಂಡ್​ಗೆ ಹೋಗಲು ಉತ್ಸುಕರಾಗಿದ್ದರು. ಅವರ ಹಲವಾರು ಸಿನಿಮಾಗಳು ಸ್ವಿಟ್ಜರ್ಲೆಂಡ್​ನಲ್ಲಿ ಚಿತ್ರೀಕರಣಗೊಂಡಿವೆ. ಕಳೆದ ತಿಂಗಳೇ ನ್ಯಾಯಾಲಯಕ್ಕೆ ಅರ್ಜಿ ಹಾಕಿ ದರ್ಶನ್ ಅವರು ಯೂರೋಪ್ ದೇಶಗಳಿಗೆ ಹೋಗಲು ಅನುಮತಿ ಪಡೆದುಕೊಂಡಿದ್ದರು. ಆದರೆ ವೀಸಾ ಸಮಸ್ಯೆ ಎದುರಾದ ಕಾರಣ ಆ ಯೋಜನೆಯನ್ನು ಅನಿವಾರ್ಯವಾಗಿ ಚಿತ್ರತಂಡ ಕೈಬಿಟ್ಟಿದೆ.

ʼತಾರಕ್‌ʼ ಚಿತ್ರದ ಬಳಿಕ ಪ್ರಕಾಶ್‌ ಮತ್ತು ಕಾಂಬಿನೇಷನ್‌ನಲ್ಲಿ ʼಡೆವಿಲ್‌ʼ ಚಿತ್ರ ಮೂಡಿ ಬರುತ್ತಿದ್ದು, ಪ್ರೇಕ್ಷಕರಲ್ಲಿ ನಿರೀಕ್ಷೆ ಹುಟ್ಟು ಹಾಕಿದೆ. ಎಲ್ಲವೂ ಅಂದಿಕೊಂಡಂತೆ ಆಗಿದ್ದರೆ ಇಷ್ಟತ್ತಿಗಾಗಲೇ ಈ ಸಿನಿಮಾ ತೆರೆ ಕಾಣಬೇಕಿತ್ತು. ಆದರೆ ಕೊಲೆ ಆರೋಪದ ಮೇಲೆ ಜೈಲಿಗೆ ಹೋಗಿದ್ದರಿಂದ ಚಿತ್ರೀಕರಣ ವಿಳಂಬಗೊಂಡಿದೆ. ಅವರು ಜೈಲಿನಿಂದ ಹೊರ ಬಂದ ಹಿನ್ನೆಲೆಯಲ್ಲಿ ಇದೀಗ ಶೂಟಿಂಗ್‌ ಪುನರಾರಂಭಗೊಂಡಿದೆ. ಈ ವರ್ಷವೇ ಚಿತ್ರ ತೆರೆಗೆ ಬರುವ ಸಾಧ್ಯತೆ ಇದೆ. ಇತ್ತೀಚೆಗೆ ರಿಲೀಸ್‌ ಆದ ಸಿನಿಮಾದ ಪೋಸ್ಟರ್‌ ಗಮನ ಸೆಳೆದಿದೆ.

ಪ್ರಕಾಶ್‌ ವೀರ್‌ ನಿರ್ದೇಶನದ ʼಡೆವಿಲ್‌ʼ ಚಿತ್ರದ ಶೂಟಿಂಗ್‌ ಬಹುತೇಕ ಅಂತಿಮಗೊಂಡಿದೆ. ಹಾಡಿನ ಚಿತ್ರೀಕರಣವನ್ನು ದರ್ಶನ್‌ ಲಕ್ಕಿ ಸ್ಟಾಟ್‌ ಎಂದೇ ಕರೆಯಿಸಿಕೊಳ್ಳುವ ಸ್ವಿಟ್ಜರ್‌ಲ್ಯಾಂಡ್‌ನಲ್ಲಿ ನಡೆಸಲು ಚಿತ್ರತಂಡ ನಿರ್ಧರಿಸಿತ್ತು. ಆದರೆ ಇದೀಗ ಈ ಆಸೆಗೆ ತಣ್ಣೀರೆರಚಿದಂತಾಗಿದೆ.

You Might Also Like

ವಿದ್ಯಾರ್ಥಿನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ ಕೊರಿಯೋಗ್ರಾಫರ್ ಬಂಧನ

ಗಾಲಿ ಕುರ್ಚಿಯಲ್ಲಿ ರ್ಯಾಂಪ್ ಮೂಲಕ ವೇದಿಕೆಗೆ ಬಂದ ಎಚ್.ಡಿ.ದೇವೇಗೌಡರು

ಆಯುಧ ಪೂಜೆಗೆ ಒಂದು ಬಸ್ ಪೂಜೆಗೆ ಕೇವಲ ರೂ.150 ಮಾತ್ರ ನೀಡಿದ ಗ್ಯಾರಂಟಿ ಸರ್ಕಾರ

ಕೆಆರ್‌ಎಸ್ ಡ್ಯಾಂಗೆ ಟಿಪ್ಪು ಸುಲ್ತಾನ್ ಅಡಿಗಲ್ಲು ಹಾಕಿದ್ದು ನೂರಕ್ಕೆ ನೂರು ಸತ್ಯ : ಎಂ.ಲಕ್ಷ್ಮಣ್

ವಿಮಾನದ ಎಮರ್ಜೆನ್ಸಿ ಎಕ್ಸಿಟ್ ಡೋರ್ ತೆಗೆದ ವ್ಯಕ್ತಿ, ಆತಂಕಕ್ಕೊಳಗಾದ ಪ್ರಯಾಣಿಕರು

TAGGED:DarshanSwitzerlandThailandThe Devil
Share This Article
Facebook Copy Link Print
Previous Article ವಿಧಾನಪರಿಷತ್​ ಮಾಜಿ ಸಭಾಪತಿ ಎನ್‌.ತಿಪ್ಪಣ್ಣ ವಿಧಿವಶ
Next Article ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಮಾಜಿ ಡಿಸಿಎಂ ಈಶ್ವರಪ್ಪಗೆ ಬಿಗ್ ರಿಲೀಫ್
Leave a Comment Leave a Comment

Leave a Reply Cancel reply

Your email address will not be published. Required fields are marked *

Stay Connected

235.3kFollowersLike
69.1kFollowersFollow
11.6kFollowersPin
56.4kFollowersFollow
136kSubscribersSubscribe
4.4kFollowersFollow
Join Whatsapp
Ad image
Ad imageAd image

Latest News

ಮನರೇಗಾ ಮರುಸ್ಥಾಪಿಸುವ ಬಗ್ಗೆ ವಿಧಾನಸಭೆಯಲ್ಲಿ ಸರ್ಕಾರ ಮಹತ್ವದ ನಿರ್ಣಯ
ರಾಜ್ಯ-Karnataka
February 3, 2026
‘ಲ್ಯಾಂಡ್ ಲಾರ್ಡ್’ ಚಿತ್ರಕ್ಕೆ ರಾಜ್ಯ ಸರ್ಕಾರದಿಂದ ತೆರಿಗೆ ವಿನಾಯಿತಿ
ಸ್ಯಾಂಡಲ್​ವುಡ್-Sandalwood
February 3, 2026
ನಸೀರ್‌ಗೆ ಸಹಿಸಲಾಗದ ಸಂಕಟ: ಸಿ.ಟಿ ರವಿ ಖಡಕ್ ಕೌಂಟರ್..!
ರಾಜ್ಯ-Karnataka
February 3, 2026
‘ಸರಳ ಸುಬ್ಬರಾವ್‌’ ಸಿನಿಮಾ ಟ್ರೇಲರ್‌ ಲಾಂಚ್‌
ಸ್ಯಾಂಡಲ್​ವುಡ್-Sandalwood
February 3, 2026
https://sampoornavaaninews.in/wp-content/uploads/2024/10/WhatsApp-Video-2024-10-04-at-00.03.25_2025f30f.mp4
Follow US
Copyright © 2024 SampoornaVaaniNews. All Rights Reserved | Designed and Developed By Technoy Global Solutions
Welcome Back!

Sign in to your account

Username or Email Address
Password

Lost your password?

Not a member? Sign Up