ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರ
ಆಂಜನೇಯ ಉತ್ಸವದಲ್ಲಿ ಗಮನ ಸೆಳೆದ ಗರಿ ಗರಿ ನೋಟಿನ ಪಲ್ಲಕ್ಕಿ
ಆಂಜನೇಯ ಸ್ವಾಮಿ ಪಲ್ಲಕ್ಕಿಗೆ 15.69 ಲಕ್ಷ ರೂ. ಹಣ ಸಂಗ್ರಹ
ಎಲ್ಲರ ಗಮನ ಸೆಳೆದ ಗರಿ ಗರಿ ನೋಟಿನ ಪಲ್ಲಕ್ಕಿ ಉತ್ಸವ
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಕೊಕ್ಕನೂರ ಆಂಜನೇಯ ಸ್ವಾಮಿ ಪುಣ್ಯಕ್ಷೇತ್ರದ ಐತಿಹಾಸಿಕ ಕೊಕ್ಕನೂರ ಆಂಜನೇಯ ಉತ್ಸವ ವೈಭವದಿಂದ ನೆರೆವೇರಿದ್ದು . ಗರಿ ಗರಿ ನೋಟಿನ ಪಲ್ಲಕ್ಕಿ ಉತ್ಸವ ಗಮನ ಸೆಳೆಯಿತು. ಸಾವಿರಾರು ಭಕ್ತರು ಪಲ್ಲಕ್ಕಿಗೆ ನೋಟು ನೀಡಿ ಹರಕೆ ಸಮರ್ಪಣೆ ಮಾಡಿದರು.
ಆಂಜನೇಯಸ್ವಾಮಿ, ಕೊಮಾರನಹಳ್ಳಿ ಬೀರದೇವರು, ದುರ್ಗಾಂಭಾ, ಮಾತಂಗ್ಯೆಮ್ಮ ದೇವಿಯ ಪಲ್ಲಕ್ಕಿಗಳು ಗ್ರಾಮದ ಪ್ರತಿಯೊಂದು ಮನೆಗೆ ತೆರಳಿದವು. ಹರಕೆ ಹೊತ್ತ ಭಕ್ತರು ಹತ್ತು, ಇಪ್ಪತ್ತು, ಐವತ್ತು, ನೂರು, ಇನ್ನೂರು ಹಾಗೂ ಐದು ನೂರು ಮುಖ ಬೆಲೆಯ ನೋಟುಗಳ ಹಾರ ಹಾಕಿ ಭಕ್ತ ಸಮರ್ಪಣೆ ಮಾಡಿದರು. ಆಂಜನೇಯ ಸ್ವಾಮಿ ಪಲ್ಲಕ್ಕಿಗೆ 14.80 ಲಕ್ಷ ರೂ. ಸೇರಿ ಒಟ್ಟು 15.69 ಲಕ್ಷ ರೂ. ಹಣ ಸಂಗ್ರಹವಾಗಿದೆ.