ಹಾಸನ: ಒಂದೆಡೆ ರಾಜ್ಯ ಕಾಂಗ್ರೆಸ್ನಲ್ಲಿ ನಾಯಕತ್ವ ಬದಲಾವಣೆ ಚರ್ಚೆಗಳು ಮುನ್ನೆಲೆಗೆ ಬಂದಿದ್ದರೆ ಮತ್ತೊಂದೆಡೆ, ಮಂಗಳವಾರ ರಾತ್ರಿ ಡಿಸಿಎಂ ಡಿಕೆ ಶಿವಕುಮಾರ್ ಹಾಸನಾಂಬಾ ಕ್ಷೇತ್ರಕ್ಕೆ ಭೇಟಿ ನೀಡಿ ಹಾಸನಾಂಬೆಯ ದರ್ಶನ ಪಡೆದರು.
ಡಿ.ಕೆ.ಶಿವಕುಮಾರ್ ಪೂಜೆ ವೇಳೆ ಹಾಸನಾಂಬೆ ಬಲಗಡೆಯಿಂದ ಹೂವು ನೀಡಿದ್ದಾಳೆ. ಎರಡೆರಡು ಬಾರಿ ಹಾಸನಾಂಬೆ ದೇವಿಯ ಮೇಲಿಂದ ಬಲಗಡೆಯಿಂದ ಹೂವು ಬಿದ್ದಿರುವುದು ಈಗ ಚರ್ಚೆಗೆ ಗ್ರಾಸವಾಗಿದೆ. ಸಿಎಂ ಹುದ್ದೆಯ ರೇಸ್ನಲ್ಲಿರುವ ಡಿಕೆ ಶಿವಕುಮಾರ್ಗೆ ಹಾಸನಾಂಬೆ ಅಭಯ ನೀಡಿದಳೇ ಎಂಬ ಪ್ರಶ್ನೆ ಭಕ್ತರಲ್ಲಿ ಮೂಡಿದೆ.

