ಬೆಂಗಳೂರು,ಅ:7; ಕರ್ನಾಟಕದಲ್ಲಿ ಕನ್ನಡಿಗನೇ ಸಾರ್ವಭೌಮ, ಇಲ್ಲಿ ವಾಸ ಮಾಡುವ ಪರಭಾಷೆಕರು ಇಲ್ಲಿನ ಭಾಷೆಯನ್ನು ಕಲಿತು ನಮ್ಮ ಸಂಸ್ಕೃತಿಯನ್ನು ಗೌರವಿಸಿ ಸುಹಾರ್ದಯುತ ಜೀವನ ನಡೆಸಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾರಾ ಗೋವಿಂದ್ ಕರೆ ನೀಡಿದರು
ನಗರದ ಪ್ರಸ್ ಕ್ಲಬ್ ನಲ್ಲಿ ಕರ್ನಾಟಕ ಕನ್ನಡ ತಮಿಳ್ ಫೆಡರೇಷನ್ ಆಯೋಜಿಸಿದ್ದ ಜಯ ಕನ್ನಡ ದಿನ ಕನ್ನಡ ಪರ ಸಂಘಟನೆಗಳ ಒಕ್ಕೂಟದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಇವರು, ಇಲ್ಲಿ ವಾಸ ಮಾಡುವ ಪರಭಾಷಿಕರು ಇಲ್ಲಿನ ಭಾಷಾ ಸಂಸ್ಕೃತಿಗೆ ಪರಿವರ್ತನೆಯಾಗಿ ಈ ನೆಲದ ಸಂಸ್ಕೃತಿಯನ್ನು ಬೆಳೆಸುವುದರ ಮೂಲಕ ಕನ್ನಡಿಗರಾಗಿ ವ್ಯವಹರಿಸಬೇಕಾಗುತ್ತದೆ ಆಗ ಮಾತ್ರ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯನ್ನು ಗೌರವಿಸುವಂತಾಗುತ್ತದೆ.
ಕರ್ನಾಟಕದಲ್ಲಿ ಕನ್ನಡ, ತಮಿಳುನಾಡಿನಲ್ಲಿ ತಮಿಳು, ಮಹಾರಾಷ್ಟ್ರದಲ್ಲಿ ಮರಾಠಿ, ಹೀಗೆ ಭಾಷಾವಾರು ಪ್ರಾಂತ್ಯಗಳ ವಿಂಗಡಣೆಯಾಗಿದೆ ಇದಕ್ಕೆ ಪ್ರತಿಯೊಬ್ಬರೂ ಗೌರವ ಸೂಚಿಸಬೇಕು. ಇನ್ನು ಮುಂದಾದರು ಕನ್ನಡದ ಬದ್ಧತೆಗೆ ಕಟುಬದ್ಧರಾಗಿರಬೇಕು ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕ ಕನ್ನಡ ತಮಿಳ್ ಫೆಡರೇಷನ್ ಸಂಸ್ಥಾಪಕ ಅಧ್ಯಕ್ಷ ಡಾ. ಮಣಿವಣ್ಣನ್, ವಿಶ್ವಕವಿ ಕುವೆಂಪುರವರ 30ನೇ ಪುಣ್ಯತಿಥಿ ಆದ ನಂಬರ್ 11ದ ರಂದು (1994) ಅವರು ಕನ್ನಡತಾಯಿಯ ಮಡಿಲ ಮಣ್ಣಿನಲ್ಲಿ ಮತ್ತೆ ಹುಟ್ಟಿ ಬರಲು ಬಿತ್ತನೆಯಾದಂತ ದಿನವನ್ನು “ವಿಶ್ವ ಕನ್ನಡ ದಿನ” (ಕನ್ನಡ ದಿವಸ್) ಅಂತ ಘೋಷಿಸಿ ಸರ್ಕಾರ ಸುತ್ತೋಲೆ ಹೊರಡಿಸಿಬೇಕು,ಹಾಗೂ ಭಾರತದ ಇತರೆ ರಾಜ್ಯ ಸರ್ಕಾರಗಳು ಇಂತಹ ಒಂದು ಅಧಿಕೃತ ನಿರ್ಣಯ ಕೈಗೊಲ್ಲಲು ಪ್ರೇರಣೆ ಯಾಗಬೇಕೆಂದು, ಕರ್ನಾಟಕ ಸರ್ಕಾರವು ಮಾನವೀಯತೆ ಹಾಗು ರಾಜ್ಯದ / ವಿಶ್ವ ಕನ್ನಡಿಗರ ಹಿತ ದೃಷ್ಟಿಯಿಂದ ನಮ್ಮ ಕನ್ನಡ ಭಾಷೆಯ ಪ್ರಾಮುಖ್ಯತೆಯನ್ನು ಪ್ರೇಮದಿಂದ ಎತ್ತಿ ಹಿಡಿಯುವ ಸಲುವಾಗಿ ಕೂಡಲೇ ಈ ಎರಡು ನಿರ್ಣಯಗಳನ್ನು ಕೈಗೊಳ್ಳಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು
ಪತ್ರಿಕಾಗೋಷ್ಠಿಯಲ್ಲಿ ಇತಿಹಾಸ ತಜ್ಞ ಡಾ. ತಲಕಾಡು ಚಿಕ್ಕರಂಗೇಗೌಡ, ಸಂಘ ಜನಶಕ್ತಿ ರಾಜ್ಯಧ್ಯಕ್ಷ ಸಿ ಕೆ ರಾಮೇಗೌಡ, ಮುಂತಾದರೂ ಉಪಸ್ಥಿತರಿದ್ದರು

