ಬೆಂಗಳೂರು: ದಿನೇ ದಿನೇ ರಾಜ್ಯದಲ್ಲಿ ಡೆಂಗ್ಯೂ (Dengue) ಪ್ರಕರಣಗಳೂ ಹೆಚ್ಚಾಗುತ್ತಿದ್ದು, ಮುಂಜಾಗ್ರತಾ ಕ್ರಮಗಳನ್ನು (Precauitonary Measures) ವಹಿಸುವಂತೆ ಸಾರ್ವಜನಿಕರಿಗೆ ಸೂಚನೆಗಳನ್ನು ನೀಡಲಾಗಿದೆ. ಹೌದು ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಏರಿಕೆಯಾಗುತ್ತಿದ್ದು, ಮುಂಜಾಗ್ರಾತಾ ಕ್ರಮಗಳ ತಾಯಾರಿ ಜೋರಾಗಿ ನಡೆಯುತ್ತಿದೆ.

ಹಾಗಿದ್ರೆ ಆರೋಗ್ಯ ಇಲಾಖೆಯಿಂದ ಯಾವೆಲ್ಲಾ ಕ್ರಮಗಳು?
ಸಾಮಾನ್ಯವಾಗಿ ಈಡಿಸ್ (Ades Epypti) ಸೊಳ್ಳೆಯಿಂದ ಡೆಂಗ್ಯೂ ಪ್ರಕರಣಗಳು ಹರಡುತ್ತವೆ. ಅದರಿಂದ ಈಡಿಸ್ ಸೊಳ್ಳೆಯ ಉತ್ಪತ್ತಿಯನ್ನು ತಡೆಗಟ್ಟಲು ಉತ್ಪತ್ತಿ ತಾಣ ನಾಶ ಚಟುವಟಿಕೆ ನಡೆಸುವುದು. ಆರೋಗ್ಯ ಸಿಬ್ಬಂದಿ ಹಾಗೂ ಆಶಾ ಕಾರ್ಯಕರ್ತೆಯರು ನಿಗದಿತ ಸಂಖ್ಯೆಯಲ್ಲಿ ಮನೆಗಳಿಗೆ ಭೇಟಿ ನೀಡಿ ಎಚ್ಚರಿಕೆಗಳನ್ನು ಮತ್ತು ಮುಂಜಾಗ್ರತಾ ಕ್ರಮಗಳನ್ನು ಹೆಗೆ ವಹಿಸಬೇಕು ಎಂಬುದನ್ನು ಹೇಳಲ್ಲಿದ್ದಾರೆ. ಇದನ್ನೂ ಓದಿ: ಸಾಲ ತೀರಿಸಲು ಮನೆ ಮಾಲಕಿಯನ್ನೇ ಹತ್ಯೆ ಮಾಡಿದ್ದ ಸುಂದರ್ ಅಂದರ್
ಜಿಲ್ಲಾಸ್ಪತ್ರೆಗಳಿಗೆ ದಾಖಲಾಗುವ ಖಚಿತ ಡೆಂಗಿ ಪ್ರಕರಣಗಳ ಮಾಹಿತಿಯನ್ನು ಪಡೆಯಲು ಸೂಚನೆ ನೀಡಿದ್ದು, ಶಂಕಿತ ಪ್ರಕರಣಗಳಿದ್ದಲ್ಲಿ ಮುಂದಿನ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಲಾಗಿದೆ. ನೀರು ಸಂಗ್ರಹವಾದ ಜಾಗವನ್ನು ಒಣಗಲು ವಾರದಲ್ಲಿ ಒಂದು ದಿನ ಮೀಸಲಿಡಬೇಕು. ಶಂಕಿತ ಡೆಂಗ್ಯೂ ಜ್ವರ ಪ್ರಕರಣಗಳ ಪರೀಕ್ಷೆಗಾಗಿ ಎಲ್ಲಾ ಟೆಸ್ಟಿಂಗ್ ಕಿಟ್‌ಗಳನ್ನು ಲಭ್ಯವಾಗಿಸಿ, ಡೆಂಗಿ ಪ್ರಕರಣಗಳ ಚಿಕಿತ್ಸೆ ಹಾಗೂ ನಿರ್ವಹಣೆಗೆ ಅಗತ್ಯ ಔಷಧಿಗಳು ಬಗ್ಗೆ ಗಮನಹರಿಸುವುದುದರ ಬಗ್ಗೆ ಹೆಚ್ಚಿನ ಗಮನ ಹರಿಸಬೆಕು. ಇದನ್ನೂ ಓದಿ: ಹೃದಯ ಕಾಯಿಲೆಯಿಂದ ರಾಖಿ ಸಾವಂತ್ ಆಸ್ಪತ್ರೆಗೆ ದಾಖಲು