ಬೆಂಗಳೂರು : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ಡೆವಿಲ್’ ಸಿನಿಮಾ ನಾಳೆ (ಡಿಸೆಂಬರ್ 11) ಭರ್ಜರಿಯಾಗಿ ತೆರೆ ಕಾಣಲಿದೆ. ಮಿಲನಾ ಪ್ರಕಾಶ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಡೆವಿಲ್’ ಸಿನಿಮಾ ಕನ್ನಡ ಭಾಷೆಯಲ್ಲಿ ಮಾತ್ರ ಬಿಡುಗಡೆಯಾಗುತ್ತಿದೆ. ದರ್ಶನ್ ಯಾವಾಗಲೂ ಪ್ಯಾನ್ ಇಂಡಿಯಾ ಬಿಡುಗಡೆಯನ್ನು ಗುರಿಯಾಗಿಸದವರಾಗಿದ್ದು, ತಮ್ಮ ನೆಚ್ಚಿನ ಪ್ರೇಕ್ಷಕರಿಗಾಗಿ ಕನ್ನಡದಲ್ಲೇ ಸಿನಿಮಾ ನೀಡುವ ಅಭ್ಯಾಸ ಮುಂದುವರಿಸಿರುವುದು ವಿಶೇಷ.
ಇದೀಗ ಸಿನಿಮಾ ನೂರಾರು ಸ್ಕ್ರೀನ್‌ಗಳಲ್ಲಿ ಅದ್ದೂರಿಯಾಗಿ ತೆರೆಗೆ ಬರಲು ಸಿದ್ಧವಾಗಿದ್ದು, ಬಿಡುಗಡೆಯ ಮುನ್ನ ಹೊರಬಿದ್ದ ಟ್ರೇಲರ್‌ಗೆ ಫ್ಯಾನ್ಸ್‌ಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಬಿಗ್ ಬಾಸ್ “ಗಿಲ್ಲಿ” ನಟ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರಕ್ಕೆ ಶುಭ ಕೋರಿದ ರಿಷಬ್ ಶೆಟ್ಟಿ :
ಬಿಡುಗಡೆಗೂ ಮುನ್ನವೇ ಚಿತ್ರಕ್ಕೆ ಶುಭಾಶಯಗಳ ಮಳೆ ಸುರಿಯುತ್ತಿದ್ದು, ಡಿವೈನ್ ಸ್ಟಾರ್ ರಿಷಭ್ ಶೆಟ್ಟಿಯವರೂ ದರ್ಶನ್ ಹಾಗೂ ತಂಡಕ್ಕೆ ಯಶಸ್ಸಿನ ಹಾರೈಕೆ ಮಾಡಿದ್ದಾರೆ.
ರಿಷಭ್ ಶೆಟ್ಟಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ‘ಡೆವಿಲ್’ ಚಿತ್ರದ ಪೋಸ್ಟರ್ ಹಂಚಿಕೊಂಡು, “ದರ್ಶನ್ ಸರ್ ಹಾಗೂ ಅವರ ಡೆವಿಲ್ ತಂಡಕ್ಕೆ ಶುಭವಾಗಲಿ. ಸಿನಿಮಾ ಬ್ಲಾಕ್ಬಸ್ಟರ್ ಕಾಣಲಿ, ದೊಡ್ಡ ಪರದೆಯಲ್ಲಿ ಅಬ್ಬರಿಸಲಿ” ಎಂದು ಹೇಳಿದ್ದಾರೆ. ಇವರ ಟ್ವೀಟ್‌ಗೆ ದರ್ಶನ್ ಅಭಿಮಾನಿಗಳು ಭಾರೀ ಪ್ರಮಾಣದಲ್ಲಿ ರೀ-ಟ್ವೀಟ್ ಮತ್ತು ಲೈಕ್ ಮಾಡುತ್ತಿದ್ದಾರೆ.
ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ಸಂಯೋಜನೆ ಮಾಡಿದ್ದು, ಅವರಿಗೆ ಕೂಡ ರಿಷಭ್ ಶುಭಾಶಯ ಕೋರಿದ್ದಾರೆ. ರಿಷಭ್–ಅಜನೀಶ್ ಜೋಡಿ ‘ಕಾಂತಾರ’ ಸಿನಿಮಾದಲ್ಲಿ ಒಟ್ಟಾಗಿ ಕೆಲಸ ಮಾಡಿದ್ದ ಕಾರಣ ಇವರಿಬ್ಬರ ನಡುವೆ ಉತ್ತಮ ಬಾಂಧವ್ಯವಿದೆ.

