ತಿರುಪತಿ ಲಡ್ಡುನಲ್ಲಿ ತಂಬಾಕಿನ ತುಂಡುಗಳು ಪತ್ತೆ, ಮಹಿಳೆ ಆರೋಪ

ಹೈದರಾಬಾದ್: ತಿರುಪತಿ ಲಡ್ಡು ಪ್ರಸಾದದಲ್ಲಿ ತೆಲಂಗಾಣದ ಮಹಿಳಾ ಭಕ್ತೆಯೊಬ್ಬರು ತನಗೆ ನೀಡಲಾದ ಲಡ್ಡು ಪ್ರಸಾದದಲ್ಲಿ ತಂಬಾಕು ತುಂಡುಗಳು ಪತ್ತೆಯಾಗಿರುವುದಾಗಿ ಆರೋಪಿಸಿದ್ದಾರೆ. ಲಡ್ಡು ಪ್ರಸಾದದಲ್ಲಿ ದನದ ಕೊಬ್ಬಿನ ಅಂಶ ಪತ್ತೆಯಾಗಿರುವ ವಿಚಾರ ಮಾಸುವ ಮುನ್ನವೇ ತೆಲಂಗಾಣದ ಖಮ್ಮಂ ಜಿಲ್ಲೆಯ ಭಕ್ತೆಯೊಬ್ಬರು ಪವಿತ್ರ ತಿರುಪತಿ ಲಡ್ಡು ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಮನೆಗೆ ತಂದ ಪ್ರಸಾದದಲ್ಲಿ ಕಾಗದದಲ್ಲಿ ಸುತ್ತಿದ ತಂಬಾಕು ತುಂಡುಗಳು ಪತ್ತೆಯಾಗಿವೆ ಎಂದು ಆರೋಪಿಸಿದ್ದಾರೆ. ಗೊಲ್ಲಗುಡೆಂ ಪ್ರದೇಶದ ಕಾರ್ತಿಕೇಯ ಟೌನ್‌ಶಿಪ್‌ನ ನಿವಾಸಿಯಾಗಿರುವ ದೊಂತು ಪದ್ಮಾವತಿ ಅವರು ಸೆಪ್ಟೆಂಬರ್ 19 … Continue reading ತಿರುಪತಿ ಲಡ್ಡುನಲ್ಲಿ ತಂಬಾಕಿನ ತುಂಡುಗಳು ಪತ್ತೆ, ಮಹಿಳೆ ಆರೋಪ