ನವದೆಹಲಿ : ಧರ್ಮಸ್ಥಳದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಇದೇ ಮೊದಲ ಬಾರಿಗೆ ಧರ್ಮಸ್ಥಳ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಯವರು ಮೌನ ಮುರಿದಿದ್ದು, ರಾಜ್ಯ ಸರಕಾರದ ಎಸ್ಐಟಿ ತನಿಖೆಯನ್ನು ಸ್ವಾಗತಿಸಿದ್ದಾರೆ.
ಪಿಟಿಐ ಜೊತೆ ಮಾತನಾಡಿದ ಅವರು ಧರ್ಮಸ್ಥಳದ ಮೇಲಿರುವ ಎಲ್ಲಾ ಆರೋಪಗಳೆಲ್ಲಾ ಸುಳ್ಳು, ಹುಟ್ಟು ಹಾಕಿರುವವು ಎಂದು ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ. ನನಗೆ ಇದರಿಂದ ತುಂಬಾ ನೋವು ಉಂಟಾಗಿದೆ. ಯಾರಿಗೂ ನನ್ನ ಮೇಲೆ, ಕ್ಷೇತ್ರದ ಮೇಲೆ ಯಾವ ಅನುಮಾನಗಳಿಲ್ಲ. ಭಕ್ತರು ಕೂಡ ಇದನ್ನೆಲ್ಲಾ ನೋಡಿ ನೋವು ಅನುಭವಿಸಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನನಗೆ ಮೂವರು ಸೋದರರು, ಓರ್ವ ಸೋದರಿ ಇದ್ದಾರೆ. ನನ್ನ 2ನೇ ಸೋದರ ಬೆಂಗಳೂರಿನಲ್ಲಿದ್ದು, ಶಿಕ್ಷಣ ಸಂಸ್ಥೆ ನೋಡಿಕೊಳ್ತಾರೆ. ಮೂರನೇ ಸೋದರ ಇಲ್ಲೇ ಧರ್ಮಸ್ಥಳದಲ್ಲೇ ಇದ್ದು, ಆಡಳಿತಾತ್ಮಕ ವಿಷಯ ನೋಡಿಕೊಳ್ತಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ನಾನು ಧರ್ಮಸ್ಥಳದಲ್ಲಿ ಇಲ್ಲದೇ ಇದ್ದ ಸಂದರ್ಭದಲ್ಲಿ ನನ್ನ ಸೋದರ ಇಲ್ಲಿನ ಉಸ್ತುವಾರಿಯನ್ನೂ ವಹಿಸಿಕೊಳ್ತಾರೆ. ಪ್ರಮುಖವಾಗಿ ಅನ್ನ ಸಂತರ್ಪಣೆಯ ಬಗ್ಗೆ, ಸ್ವಚ್ಛತೆ, ಯಕ್ಷಗಾನ ಹೊಣೆಯನ್ನು ನಿಭಾಯಿಸುತ್ತಾರೆ. ಅವರ ಮೇಲೆ ಸಾಕಷ್ಟು ಜವಾಬ್ದಾರಿಗಳಿದ್ದು, ಎಲ್ಲಾ ನಿಭಾಯಿಸುತ್ತಾರೆ. ಇನ್ನಿಬ್ಬರು, ಸ್ವತಂತ್ರವಾಗಿದ್ದಾರೆ. ನನ್ನ ಸೋದರಿ ಧಾರವಾಡದಲ್ಲಿದ್ದಾರೆ.
ನನ್ನ ಬಾವ, ಧಾರವಾಡ ಮೆಡಿಕಲ್ ಕಾಲೇಜ್ ವಿವಿಯ ವೈಸ್ ಚಾನ್ಸಲರ್ ಆಗಿದ್ದಾರೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಹೇಳಿದ್ದಾರೆ. ನಾವು ಆರಂಭದಲ್ಲೇ ಎಸ್ಐಟಿಯನ್ನ ಸ್ವಾಗತ ಮಾಡಿದ್ದೇವೆ. ಈ ಜನರು ಸಾಕಷ್ಟು ಅನುಮಾನಗಳನ್ನ ಹುಟ್ಟುಹಾಕಿದ್ದಾರೆ . ಅನುಮಾನ, ಗೊಂದಲಗಳನ್ನ ಭಕ್ತರಲ್ಲಿ ಹುಟ್ಟುಹಾಕಿದ್ದಾರೆ.
ಸೂಕ್ತ ತನಿಖೆಯಿಂದ ಇದೆಲ್ಲವೂ ಬಗೆಹರಿದರೆ ಒಳ್ಳೆಯದು ಅಂತ ನಾನು ಭಾವಿಸಿದ್ದೇನೆ. ಸರ್ಕಾರ ತನಿಖಾ ತಂಡ ರಚಿಸಿ, ಇದಕ್ಕೆ ಪರಿಹಾರ ಕಂಡುಕೊಂಡ್ರೆ ಒಳ್ಳೆಯದೆಂಬ ಭಾವನೆ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಅವರು ಇದೇ ಮೊದಲ ಭಾರಿಗೆ ಈ ಎಲ್ಲ ವಿವಾದಗಳ ಬಗ್ಗೆ ಬಹಿರಂಗವಾಗಿ ಮಾಧ್ಯಮದ ಮೂಲಕ ಪ್ರತಿಕ್ರಿಯೆಯನ್ನು ನೀಡಿದ್ದಾರೆ.

