ಸಿಎಸ್ಕೆ ತಂಡದ ಮಾಜಿ ನಾಯಕ ಧೋನಿ ಅನೇಕ ಜನರ ಆರಾಧ್ಯ ದೈವ. ಇದರಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲ. ಕ್ರಿಕೆಟಿಗರು ಕೂಡ ಇದ್ದಾರೆ. ಇವರನ್ನೇ ತನ್ನ ಐಡ್ಯಲ್ ಆಗಿ ತೆಗೆದುಕೊಂಡು ಬೆಳೆದವರಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಚಿಕ್ಕವನಾಗಿದ್ದಾಗ ಧೋನಿ ಜೊತೆ ಒಂದು ಫೋಟೋಕ್ಕೋಸ್ಕರ ಪರಿತಪಿಸುತ್ತಿದ್ದ ಪರಾಗ್ ಇಂದು ಧೋನಿ ಇರುವ ತಂಡವನ್ನೇ ಸೋಲಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ 2025 ರಲ್ಲಿ ಸತತ ಎರಡು ಸೋಲುಗಳ ನಂತರ ರಿಯಾನ್ ಪರಾಗ್ ನಾಯಕತ್ವದ ರಾಜಸ್ಥಾನ್ ರಾಯಲ್ಸ್ ತಂಡವು ಮೊದಲ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು. ರಾಜಸ್ಥಾನ್ ತಂಡವು ಋತುವಿನ 11 ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಕೇವಲ 6 ರನ್ಗಳಿಂದ ಸೋಲಿಸಿತು.
ಈ ಪಂದ್ಯ ಕೊನೆಯ ಓವರ್ನವರೆಗೂ ರೋಚಕತೆ ಸೃಷ್ಟಿಸಿತು. ಕೊನೆಯ ಓವರ್ನಲ್ಲಿ ಸಿಎಸ್ಕೆ ಗೆಲುವಿಗೆ 20 ರನ್ಗಳು ಬೇಕಾಗಿದ್ದವು. ಮಹೇಂದ್ರ ಸಿಂಗ್ ಧೋನಿ ಮತ್ತು ರವೀಂದ್ರ ಜಡೇಜಾ ಕ್ರೀಸ್ನಲ್ಲಿದ್ದರು, ಆದರೆ ನಾಯಕ ರಿಯಾನ್ ಪರಾಗ್ ರಾಜಸ್ಥಾನ ಪರ ಮಾಸ್ಟರ್ ಸ್ಟ್ರೋಕ್ ಆಡಿದರು, ಇದರಲ್ಲಿ ಸಿಎಸ್ಕೆ ತಂಡದ ಮಾಹಿ ಮ್ಯಾಜಿಕ್ ಕೂಡ ವಿಫಲವಾಯಿತು.
ಸಿಎಸ್ಕೆ ತಂಡದ ಮಾಜಿ ನಾಯಕ ಧೋನಿ ಅನೇಕ ಜನರ ಆರಾಧ್ಯ ದೈವ. ಇದರಲ್ಲಿ ಕೇವಲ ಅಭಿಮಾನಿಗಳು ಮಾತ್ರವಲ್ಲ. ಕ್ರಿಕೆಟಿಗರು ಕೂಡ ಇದ್ದಾರೆ. ಇವರನ್ನೇ ತನ್ನ ಐಡ್ಯಲ್ ಆಗಿ ತೆಗೆದುಕೊಂಡು ಬೆಳೆದವರಲ್ಲಿ ರಿಯಾನ್ ಪರಾಗ್ ಕೂಡ ಒಬ್ಬರು. ಚಿಕ್ಕವನಾಗಿದ್ದಾಗ ಧೋನಿ ಜೊತೆ ಒಂದು ಫೋಟೋಕ್ಕೋಸ್ಕರ ಪರಿತಪಿಸುತ್ತಿದ್ದ ಪರಾಗ್ ಇಂದು ಧೋನಿ ಇರುವ ತಂಡವನ್ನೇ ಸೋಲಿಸುವ ಮಟ್ಟಕ್ಕೆ ಬೆಳೆದು ನಿಂತಿದ್ದಾರೆ. ಇದೀಗ ಪರಾಗ್ ಚಿಕ್ಕವರಿದ್ದಾಗ ಧೋನಿ ಜೊತೆ ತೆಗೆಸಿಕೊಂಡ ಫೋಟೋ ವೈರಲ್ ಆಗುತ್ತಿದೆ.