‘ಮಾರ್ಟಿನ್’ ಮತ್ತು ‘ಕೆಡಿ’ ಸಿನಿಮಾದಲ್ಲಿ ಸದ್ಯ ಆ್ಯಕ್ಷನ್ ಪ್ರಿನ್ಸ್ ಧ್ರುವ ಸರ್ಜಾ (Dhruva Sarja) ನಟಿಸಿದ್ದು, ರಿಲೀಸ್ ಬಗ್ಗೆ ಸಿಹಿಸುದ್ದಿ ಕೊಟ್ಟ ಬೆನ್ನಲ್ಲೇ ಇದೀಗ ಮತ್ತೊಂದು ಕ್ರೇಜಿ ಅಪ್‌ಡೇಟ್ ಸಿಕ್ಕಿದೆ. ತವರಿನಿಂದ ಧ್ರುವ ಸರ್ಜಾ ಬಾಲಿವುಡ್‌ಗೆ (Bollywood) ಹಾರಲಿದ್ದಾರೆ ಎಂಬ ಮಾಹಿತಿ ಇದೆ.
‘ಪೊಗರು’ ಸಿನಿಮಾ ರಿಲೀಸ್ ಆಗಿ 3 ವರ್ಷ ಕಳೆದರೂ ಫ್ಯಾನ್ಸ್‌ಗೆ ಅವರ ಚಿತ್ರಗಳ ಬಗ್ಗೆ ಏನು ಅಪ್‌ಡೇಟ್ ಸಿಗದೇ ನಿರಾಶರಾಗಿದ್ದರು. ಅವರು ಯಾವಾಗ ಸಿನಿಮಾದ ಬಗ್ಗೆ ಅಪ್‌ಡೇಟ್ ನೀಡುತ್ತರಾ ಎಂದು ಕಾದು ಕುಳಿತ್ತಿದ್ದಾಗ ತಮ್ಮ ಮುಂಬರುವ ಸಿನಿಮಾಗಳ ಬಿಡುಗಡೆ ದಿನಾಂಕ ಘೋಷಣೆ ಮಾಡಿ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದರು. ಇದನ್ನೂ ಓದಿ: ಭಾರತಕ್ಕೆ ಜಿಮ್ನಾಸ್ಟಿಕ್‍ನಲ್ಲಿ ಮೊದಲ ಚಿನ್ನ – ದೀಪಾ ಕರ್ಮಾಕರ್ ಏಷ್ಯನ್ ಚಾಂಪಿಯನ್

ಈಗ ಮಾರ್ಟಿನ್, ಕೆಡಿ ಚಿತ್ರಗಳ ಟ್ರೇಲರ್, ಟೀಸರ್ ರಿಲೀಸ್‌ಗಾಗಿ ಫ್ಯಾನ್ಸ್ ಕಾಯುತ್ತಿರುವಾಗಲೇ ಹೃತಿಕ್ ರೋಷನ್ ಜೊತೆ ಧ್ರುವ ಸರ್ಜಾ ನಟಿಸುವ ಸಿಹಿ ಸುದ್ದಿಯನ್ನ ಧ್ರುವ ಅಭಿಮಾನಿಗಳಿಗೆ ನೀಡಿದ್ದಾರೆ. ಇದನ್ನೂ ಓದಿ: ಮುಂದುವರಿದ ರೇವಣ್ಣರ ಟೇಂಪಲ್ ರನ್; ಧರ್ಮಸ್ಥಳದ ಮಂಜುನಾಥನಿಗೆ ವಿಶೇಷ ಪೂಜೆ

ಹೃತಿಕ್ ರೋಷನ್ ನಟಿಸುತ್ತಿರುವ ‘ವಾರ್ 2’ (War 2) ಸಿನಿಮಾದಲ್ಲಿ ಅವರ ಸಹೋದರನಾಗಿ ಪವರ್‌ಫುಲ್ ಪಾತ್ರದಲ್ಲಿ ನಟಿಸೋಕೆ ಧ್ರುವಗೆ ಕರೆ ಬಂದಿದೆ ಎಂದು ಸುದ್ದಿ ಹಬ್ಬಿದೆ. ಹೃತಿಕ್, ಜ್ಯೂ.ಎನ್‌ಟಿಆರ್ ಜೊತೆ ಧ್ರುವ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ತಾರೆ ಎಂದು ಹೇಳಲಾಗ್ತಿದೆ. ಈಗ ವೈರಲ್ ಆಗಿರುವ ಈ ಸುದ್ದಿ ನಿಜನಾ? ಎಂಬುದನ್ನು ಧ್ರುವ ಅಥವಾ ಚಿತ್ರತಂಡ ಅಧಿಕೃತ ಘೋಷಣೆ ಮಾಡುವವರೆಗೂ ಕಾದುನೋಡಬೇಕಿದೆ. ಇದನ್ನೂ ಓದಿ: ಪೋರ್ಶೆ ಕಾರು ಅಪಘಾತ ಪ್ರಕರಣದಲ್ಲಿ ಇಬ್ಬರು ವೈದ್ಯರ ಬಂಧನ