ಇಂದು ಪ್ರಪಂಚದಾದ್ಯಂತ, ಟೈಪ್ 2 ಮಧುಮೇಹ ಮತ್ತು ನೆನಪಿನ ಶಕ್ತಿ ಕಡಿಮೆಯಾಗುವಂಥ ಕಾಯಿಲೆಗಳು ಸಾಮಾನ್ಯವಾಗಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ, ಮಧುಮೇಹವು ಬುದ್ಧಿಮಾಂದ್ಯತೆಯನ್ನು ಉಂಟುಮಾಡಬಹುದು ಎಂದು ಅಧ್ಯಯನಗಳು ಹೇಳುತ್ತವೆ. ಆದ್ದರಿಂದ ಮಧುಮೇಹ (Diabetes) ಹಾಗೂ ನೆನಪಿನ ಶಕ್ತಿ ನಷ್ಟದ ಬಗ್ಗೆ ಇರುವ ಸಂಬಂಧವನ್ನು ಅರ್ಥ ಮಾಡಿಕೊಳ್ಳುವುದು ಬಹಳ ಮುಖ್ಯ. ಈ ಕುರಿತು ಏಷ್ಯನ್ ಆಸ್ಪತ್ರೆಯ (Asian Hospital) ಹಿರಿಯ ಸಲಹೆಗಾರ ಮಧುಮೇಹ ತಜ್ಞ ಡಾ. ಸಂದೀಪ್ ಖರಾಬ್ ಹೇಳುವಂತೆ, “ಮೆದುಳು ಅತ್ಯಂತ ಶಕ್ತಿ-ಬೇಡಿಕೆಯ ಅಂಗವಾಗಿರುವುದರಿಂದ, ಸರಿಯಾಗಿ ಕಾರ್ಯನಿರ್ವಹಿಸಲು ದೇಹದಲ್ಲಿನ ಎಲ್ಲಾ ಸಕ್ಕರೆ ಶಕ್ತಿಯ ಅರ್ಧದಷ್ಟು ಇದು ತೆಗೆದುಕೊಳ್ಳುತ್ತದೆ. ನಿಮ್ಮ ರಕ್ತದಲ್ಲಿನ ಸಕ್ಕರೆ (Blood Sugar) ಮಟ್ಟವು ಹೆಚ್ಚಾದರೆ ಮೆದುಳಿನ ಮೇಲೂ ಪರಿಣಾಮ ಬೀರಬಹುದು. ಇದು ಜ್ಞಾಪಕಶಕ್ತಿ, ಕಲಿಕೆ, ಹಾರ್ಮೋನುಗಳ ಬದಲಾವಣೆಗಳು, ತೂಕ ಹೆಚ್ಚಾಗುವುದು, ಆಲ್ಝೈಮರ್ ಕಾಯಿಲೆಯಂತಹ ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು”
ಅಧಿಕ ರಕ್ತದ ಸಕ್ಕರೆಯಿಂದ ಮೆದುಳಿನ ಮೇಲಾಗುವ ಪರಿಣಾಮ
ಡಾ. ಸಂದೀಪ್ ಖರಾಬ್ ಅವರು, “ರಕ್ತದಲ್ಲಿನ ಅಧಿಕ ಸಕ್ಕರೆಯಿಂದ ಮೆದುಳಿಗೆ ಆಮ್ಲಜನಕ-ಸಮೃದ್ಧ ರಕ್ತವನ್ನು ಸಾಗಿಸುವ ರಕ್ತನಾಳಗಳು ಹಾನಿಗೊಳಗಾಗುತ್ತವೆ. ಮೆದುಳಿನ ಜೀವಕೋಶಗಳು ಸಾಯುವಂತೆ ಮಾಡುತ್ತದೆ. ಈ ಸ್ಥಿತಿಯನ್ನು ಮೆದುಳಿನ ಕ್ಷೀಣತೆ ಎಂದು ಕರೆಯಲಾಗುತ್ತದೆ. ಇದರಿಂದ ನೆನಪಿನ ಶಕ್ತಿಯ ಸಮಸ್ಯೆಯನ್ನು ಉಂಟುಮಾಡಬಹುದು” ಎಂದು ಹೇಳುತ್ತಾರೆ.
ನಿಮ್ಮ ಮೆದುಳನ್ನು ಮೆಮೊರಿ ನಷ್ಟದಿಂದ ರಕ್ಷಿಸಲು ಏಷ್ಯನ್ ಆಸ್ಪತ್ರೆಯ ಹಿರಿಯ ಸಲಹೆಗಾರ ನರವಿಜ್ಞಾನಿ ಡಾ. ನೇಹಾ ಕಪೂರ್ ಸಲಹೆ ನೀಡಿದ್ದಾರೆ.
1. ನಿಯಮಿತ ಆರೋಗ್ಯ ತಪಾಸಣೆ
ಹಲವರಿಗೆ ಮಧುಮೇಹ ಇದೆಯೋ ಇಲ್ಲವೋ ಗೊತ್ತಿಲ್ಲರುವುದಿಲ್ಲ. ಮಧುಮೇಹ ಹೊಂದಿರುವ ಅನೇಕ ಜನರು ತಮ್ಮ ಹೆಚ್ಚಿದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸಹ ತಿಳಿದಿರುವುದಿಲ್ಲ. ಇದು ಜನರು ತಿಳಿದಿರುವುದಕ್ಕಿಂತ ಹೆಚ್ಚಾಗಿ ಕಂಡುಬರುತ್ತದೆ. ಆದ್ದರಿಂದ ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
2. ಪ್ರೋಟೀನ್ ಮತ್ತು ಫೈಬರ್ ಒಳಗೊಂಡ ಡಯೆಟ್
ಪ್ರೋಟೀನ್ ಮತ್ತು ಫೈಬರ್ ಅಧಿಕವಾಗಿರುವ ಆಹಾರಗಳೊಂದಿಗೆ ಕಾರ್ಬೋಹೈಡ್ರೇಟ್‌ಗಳನ್ನು ಸಂಯೋಜಿಸುವ ಮೂಲಕ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸುಧಾರಿಸಬಹುದು. ಆದ್ದರಿಂದ ಫೈಬರ್ ಒಳಗೊಂಡಂಥ ಪೌಷ್ಠಿಕ ಆಹಾರ ಸೇವಿಸುವುದನ್ನು ರೂಢಿಸಿಕೊಳ್ಳಿ.
ಇದನ್ನೂ ಓದಿ:
ರಾತ್ರಿ ಉಳಿದಿರೋ ಅನ್ನದಿಂದ ಮಾಡಿ ಕ್ರಿಸ್ಪಿಯಾದ ಟೇಸ್ಟಿ ಮಟನ್ ಕಟ್ಲೇಟ್
3. ಮಧುಮೇಹದ ಮೇಲ್ವಿಚಾರಣೆ
ನಿಮ್ಮ ರಕ್ತದ ಸಕ್ಕರೆಯ ಮಟ್ಟವನ್ನು ಮೇಲ್ವಿಚಾರಣೆ ಮಾಡಿ. ರಕ್ತದಲ್ಲಿನ ಸಕ್ಕರೆ ನಿಯಂತ್ರಣ ಮಾಡದೇ ಹೋದರೆ ಅದು ನೆನಪಿನ ಶಕ್ತಿಯನ್ನು ಕುಗ್ಗಿಸಬಹುದು. ಆದ್ದರಿಂದ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿರ್ವಹಿಸುವುದು ಪ್ರಮುಖವಾಗಿದೆ.
4. ಒಮೆಗಾ-3 ಮತ್ತು ಆಂಟಿಆಕ್ಸಿಡೆಂಟ್ ಹೊಂದಿರುವ ಆಹಾರ
ಮಿದುಳಿನ ಆರೋಗ್ಯವನ್ನು ಕಾಪಾಡುವ ಆರೋಗ್ಯಕರ ಆಹಾರಗಳು ಒಮೆಗಾ -3 ಕೊಬ್ಬಿನಾಮ್ಲಗಳಲ್ಲಿ ಹೆಚ್ಚಿನವುಗಳಾಗಿವೆ. ಅವು ಆಲ್ಝೈಮರ್ ಕಾಯಿಲೆಯನ್ನು ತಡೆಗಟ್ಟಲು ಸಹಾಯ ಮಾಡುತ್ತವೆ. ಹಣ್ಣು – ತರಕಾರಿಗಳ ಜೊತೆಗೆ ಸಾಲ್ಮನ್, ಟ್ಯೂನ,ಮ್ಯಾಕೆರೆಲ್‌ನಂತಹ ಕೊಬ್ಬಿನ ಮೀನುಗಳು, ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳನ್ನು ಹೊಂದಿರುತ್ತವೆ.
5. ನಿಯಮಿತ ವ್ಯಾಯಾಮ
ನಿಯಮಿತ ದೈಹಿಕ ಚಟುವಟಿಕೆಯು ಟೈಪ್ 2 ಮಧುಮೇಹ ತಡೆಯಲು ಅಥವಾ ವಿಳಂಬಗೊಳಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಇನ್ಸುಲಿನ್ ಸಂವೇದನೆ, ರಕ್ತದೊತ್ತಡ ಮತ್ತು A1C ಮಟ್ಟದ ಮೇಲೆ ಧನಾತ್ಮಕವಾಗಿ ಪರಿಣಾಮ ಬೀರುತ್ತದೆ.
ಗಂಡನ ಜೊತೆ ಸೇರಬಾರದು ಅಂತ ಪತ್ನಿ ನಿರ್ಧರಿಸೋದು ಯಾವಾಗ ಗೊತ್ತಾ?
ಆರೋಗ್ಯಕರ ಜೀವನಕ್ಕೆ ಈ ಸಲಹೆಗಳನ್ನೂ ನೆನಪಿಟ್ಟುಕೊಳ್ಳಿ
ಟೈಪ್ 2 ಡಯಾಬಿಟಿಸ್ ಅಥವಾ ಪ್ರಿ-ಡಯಾಬಿಟಿಸ್ ಹೊಂದಿರುವುದರಿಂದ ಸಮಯ ಕಳೆದಂತೆ ಅರಿವಿನ ದುರ್ಬಲತೆಯ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಸಾಬೀತಾಗಿದೆಯಾದರೂ, ಕೆಲವು ಆರೋಗ್ಯಕರ ಅಭ್ಯಾಸಗಳು ನಿಮ್ಮ ಮನಸ್ಸು ಮತ್ತು ಸಾಮರ್ಥ್ಯಗಳನ್ನು ರಕ್ಷಿಸಲು ಸಹಕಾರಿ. ಅದಕ್ಕಾಗಿ ಆರೋಗ್ಯಕರ ಜೀವನಶೈಲಿ, ಒತ್ತಡ ನಿರ್ವಹಣೆ, ಧೂಮಪಾನ, ಮದ್ಯಪಾನ ತೊರೆಯುವುದು ಮಧುಮೇಹದ ಋಣಾತ್ಮಕ ಪರಿಣಾಮಗಳನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ

