ಬೆಂಗಳೂರು : ಸ್ಯಾಂಡಲ್ವುಡ್ನಲ್ಲಿ ರೈಟರ್ ಆಗಿದ್ದ ಎಸ್.ಎಸ್ ಡೇವಿಡ್ ಅವರು ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಬೆಂಗಳೂರು: ಪೊಲೀಸ್ ಸ್ಟೋರಿ, ಅಗ್ನಿ ಐಪಿಎಸ್, ಜೈಹಿಂದ್ ಸೇರಿದಂತೆ ಸ್ಯಾಂಡಲ್ವುಡ್ನ ಹಲವು ಸಿನಿಮಾಗಳ ಬರಹಗಾರ ಎಸ್.ಎಸ್ ಡೇವಿಡ್ ಅವರು ನಿಧನರಾಗಿದ್ದಾರೆ. ಸ್ಯಾಂಡಲ್ವುಡ್ನಲ್ಲಿ ರೈಟರ್ ಆಗಿದ್ದ ಎಸ್.ಎಸ್ ಡೇವಿಡ್ ಅವರು ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಡೇವಿಡ್ ಅವರು ಹೃದಯಘಾತದಿಂದ ಕೊನೆಯುಸಿರೆಳೆದಿದ್ದಾರೆ. ಸಿನಿಮಾಗಳಿಗೆ ಕಥೆ ಬರೆಯುವುದು ಅಲ್ಲದೇ ಹಾಯ್ ಬೆಂಗಳೂರು ಹಾಗೂ ಧೈರ್ಯ ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
ಎಸ್.ಎಸ್ ಡೇವಿಡ್ ಅವರು ಮೆಡಿಕಲ್ ಶಾಪ್ಗೆ ಹೋಗಿದ್ದಾಗ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಈ ವೇಳೆ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲು ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಆಸ್ಪತ್ರೆಗೆ ತಲುಪುವ ಮೊದಲೇ ಮಾರ್ಗ ಮಧ್ಯೆಯೇ ಪಲ್ಸ್ ರೇಟ್ ಕಡಿಮೆ ಆಗಿದ್ದರಿಂದ ಎಸ್.ಎಸ್ ಡೇವಿಡ್ ಅವರು ಉಸಿರು ಚೆಲ್ಲಿದರು.
ಮೃತದೇಹ ಪಡೆಯಲು ಬಾರದ ಕುಟುಂಬ :
ಎಸ್ಎಸ್ ಡೇವಿಡ್ ಅವರು ಚಿತ್ರಕಥೆ ಬರಹಗಾರನಾಗಿ ಮಾತ್ರವಲ್ಲದೆ ನಿರ್ದೇಶನದಲ್ಲೂ ಛಾಪು ಮೂಡಿಸಿದ್ದರು. ‘ಹಾಯ್ ಬೆಂಗಳೂರು’ ಹಾಗೂ ‘ಧೈರ್ಯ’ ಚಿತ್ರವನ್ನ ನಿರ್ದೇಶನ ಮಾಡಿ ಡೇವಿಡ್ ಗಮನ ಸೆಳೆದಿದ್ದರು. ಅವರ ನಿಧನಕ್ಕೆ ಚಿತ್ರರಂಗದ ಅನೇಕರು ಸಂತಾಪ ಸೂಚಿಸಿದ್ದಾರೆ. ಆದರೆ, ಕುಟುಂಬದವರು ಅವರ ಮೃತದೇಹ ಪಡೆಯಲು ಸಿದ್ಧರಿಲ್ಲ.
ಡೇವಿಡ್ ಅವರು ಆಗಸ್ಟ್ 31ರಂದು ಔಷಧ ಅಂಗಡಿಗೆ ತೆರಳಿದ್ದರು. ಈ ವೇಳೆ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದಾರೆ. ಅವರನ್ನು ಬೆಂಗಳೂರಿನ ಆರ್ಆರ್ ನಗರದ ಎಸ್ಎಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವಿಕ್ಟೋರಿಯಾ ಆಸ್ಪತ್ರೆಗೆ ಡೇವಿಡ್ ಪಾರ್ಥಿವ ಶರೀರ ರವಾನೆ ಆಗಿದೆ. ಸದ್ಯ ಕುಟುಂಬದವರು ಬಾರದೆ ಮೃತದೇಹ ಕೊಡುವುದಿಲ್ಲ ಎಂದು ಆರ್ ಆರ್ ನಗರ ಪೊಲೀಸರು ಹೇಳಿದ್ದಾರೆ. ಡೇವಿಡ್ ಅವರ ಅಕ್ಕ ಉಡುಪಿಯ ಕಾಪುವಿನಲ್ಲಿದ್ದಾರೆ. ಅವರು ತಮಗೆ ಬರುವುದಕ್ಕೆ ಸಾಧ್ಯವಿಲ್ಲ ಎಂದು ಹೇಳಿದ್ದು, ಇಲ್ಲಿಯೇ ಅಂತಿಮ ಸಂಸ್ಕಾರ ನಡೆಸುವಂತೆ ತಿಳಿಸಿದ್ದಾರೆ ಎನ್ನಲಾಗಿದೆ.

