ಕೊಪ್ಪಳ : ನಾಯಿ ಒಂದು ಇನ್ನೊಂದು ನಾಯಿಗೆ ಪ್ರಾಣವನ್ನು ಉಳಿಸುವುದಕ್ಕಾಗಿ ರಕ್ತದಾನ ಮಾಡಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ.
ಅನಾರೋಗ್ಯದಿಂದ ಹಿಮೋಗ್ಲೋಬಿನ್ ಶಕ್ತಿ ಕಡಿಮೆಯಾದರಿಂದ ಲ್ಯಾಬರ್ ಡಾಗ್ ನಾಯಿಗೆ ರಕ್ತದ ಅವಶ್ಯಕತೆ ಇತ್ತು. ವೈದ್ಯರು 3 ನಾಯಿಗಳ ವಿಳಾಸವನ್ನು ಸಂಪರ್ಕಿಸಿ ರಕ್ತದ ಸಾಂಪಲ್ ಪರೀಕ್ಷೆಗೆ ಒಳಪಡಿಸಿದ್ರು.
ಬಸವರಾಜ ಪೂಜಾರ್ 3 ವರ್ಷದ ನಾಯಿ ಬೈರವ ರಕ್ತ ಲ್ಯಾಬರ್ ಗೆ ಮ್ಯಾಚ್ ಆಗಿತ್ತು. ಬಳಿಕ 300 ml ರಕ್ತವನ್ನು ಪಡೆದು ಲ್ಯಾಬರ್ ಡಾಗ್ ಗೆ ನೀಡಲಾಗಿದೆ.
ಪ್ರಾಣಿಯೊಂದು ಇನ್ನೊಂದು ಪ್ರಾಣಿಗೆ ರಕ್ತದಾನ ಮಾಡಿರುವ ಅಮೋಘವಾದ ಕಾಯ೯ ಪಶು ಚಿಕಿತ್ಸಾಲಯದಿಂದ ನಡೆದಿದೆ. ಕಾಳಜಿಯಲ್ಲಿ ತನ್ನ ಅಮೋಘವಾದ ಕತ೯ವ್ಯವನ್ನು ಮೆರೆದಿದ್ದು ಜನಮೆಚ್ಚುಗೆ ಪಡೆದಿದೆ. ಜೊತೆಗೆ ರಕ್ತದಾನ ಮಾಡಿ ಲ್ಯಾಬರ್ ಡಾಗ್ ಸಾರ್ಥಕತೆ ಮೆರೆದಿದೆ.

