ತುರುವೇಕೆರೆ : ಜಾತಿ ವಿಷ ಬೀಜ ಬಿತ್ತಬೇಡಿ ನಾವೆಲ್ಲ ಕಾವೇರಿ ತಾಯಿಯ ಮಕ್ಕಳು, ನಾವೆಲ್ಲ ಒಂದೇ, ನಿಮ್ಮ ಕುರ್ಚಿ ಉಳಿಸಿಕೊಳ್ಳುವುದಕ್ಕೆ ಜಾತಿ ರಾಜಕೀಯ ಮಾಡಬೇಡಿ, ಎಂದು” ನಿಖಿಲ್ ಕುಮಾರಸ್ವಾಮಿ” ಅವರು ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು,,
ರಾಜ್ಯ ಕಾಂಗ್ರೆಸ್ ಸರ್ಕಾರದ ಬೆಲೆ ಏರಿಕೆ ಭ್ರಷ್ಟಾಚಾರ ಮತ್ತು ದುರಾಡಳಿತದ ವಿರುದ್ಧ ತುರುವೇಕೆರೆ ಬೃಹತ್ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು,ಜಾತಿಗಣತಿ ಮಾಡುವ ಅಧಿಕಾರ ಸಂವಿದಾನದಡಿ ಕೇಂದ್ರ ಸರ್ಕಾರಕ್ಕೆ ಮಾತ್ರ ಇದೆ, ಆರ್ಥಿಕ ಮತ್ತು ಸಾಮಾಜಿಕ ಶೈಕ್ಷಣಿಕವಾಗಿ ಸಮೀಕ್ಷೆ ಮಾಡಲು ರಾಜ್ಯ ಸರ್ಕಾರಕ್ಕೆ ಅವಕಾಶ ಇರುವುದು, ಆದರೆ ಜಾತಿಯೆಂಬ ವಿಷ ಬೀಜವನ್ನು ಬಿತ್ತಬಿಡಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕಿಡಿ ಕಾರಿದರು,,
ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಬಂದು ಎರಡು ವರ್ಷ ಪಾದಾರ್ಪಣೆ ಮಾಡ್ತಿದ್ದಾರೆ, ಕೇವಲ ಎರಡು ವರ್ಷದಲ್ಲಿ ಭ್ರಷ್ಟಾಚಾರ ದುರಾಡಳಿತ ವೈಫಲ್ಯಗಳೇ ಹೆಚ್ಚಾಗಿ ಕಾಣುತ್ತಿದೆ, ಈ ಭೂಮಿಯ ಮೇಲೆ ಗಾಳಿ ಒಂದನ್ನು ಬಿಟ್ಟು ಎಲ್ಲದರ ಮೇಲೆಯೂ ಬೆಲೆ ಏರಿಕೆ ಮಾಡಿದ್ದಾರೆ, ಎಂದು ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು,
ರೈತರಿಗೆ ಸಿಗಬೇಕಾದ ಹಾಲಿನ ಪ್ರೋತ್ಸಾಹ ಧನವನ್ನು 600 ಕೋಟಿಗೂ ಹೆಚ್ಚು ಹಣವನ್ನು ಇನ್ನೂ ಬಿಡುಗಡೆ ಮಾಡಿಲ್ಲ, ಒಬ್ಬರಿಗೆ ಕ್ವಿಂಟಲ್ ಗೆ 18000 ಹಣ ನಿಗದಿಯಾಗಲು ಕುಮಾರಣ್ಣನವರು, ಪ್ರಧಾನಿ ಮೋದಿಜಿ ಅವರು,ಅಮಿತ್ ಶಾ ಅವರು,ಕೇಂದ್ರ ಕೃಷಿ ಸಚಿವರನ್ನು ಭೇಟಿ ಮಾಡಿ ಕೊಬ್ಬರಿಗೆ ನಿಗದಿತ ದರ ಹೆಚ್ಚಳ ಮಾಡಿಸಿದ್ದಾರೆ ಎಂದು ತಿಳಿಸಿದರು,,
ಸಾಕಪ್ಪ ಸಾಕು ಕಾಂಗ್ರೆಸ್ ಸರ್ಕಾರ ಅಂತ ಇವತ್ತು ರಾಜ್ಯದ ಜನ ಹೇಳ್ತಿದ್ದಾರೆ, ಐದು ಗ್ಯಾರಂಟಿಗಳನ್ನು ಸಮರ್ಪಕವಾಗಿ ಕೊಡುವುದಕ್ಕೆ ಆಗ್ತಿಲ್ಲ, ಸಿಎಂ ಸಿದ್ದರಾಮಯ್ಯ ಅವರು ವೇದಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು 25,000 ವೋಟ್ನಲ್ಲಿ ಸೋತಿದ್ದಾರೆ ಅಂತ ಹೇಳಿದ್ರು, ಚುನಾವಣೆ ವೇಳೆ,ಏನು ಮಾಡಿದ್ರು ಎಷ್ಟು ಹುನ್ನಾರ ಮಾಡಿದರು ಅಂತ ನಾಡಿನ ಜನಕ್ಕೆ ಗೊತ್ತಿದೆ ಎಂದರು.
ಚುನಾವಣಾ ಗೆಲುವಿಗಾಗಿ ಜನರನ್ನ ಯಾಮರಿಸಿಕೊಂಡು ಹೋಗ್ತಿದ್ದೀರಾ, ಇದು ಎಷ್ಟು ದಿನ ನಡೆಯುತ್ತೆ ಜಿಲ್ಲಾ ಪಂಚಾಯತ್,ತಾಲೂಕು ಪಂಚಾಯತ್, ಚುನಾವಣೆಯನ್ನು ಇನ್ನು ಯಾಕೆ ಘೋಷಣೆ ಮಾಡಿಲ್ಲ, ನೀವು ಕೊಟ್ಟಿರುವ ಯೋಜನೆಗೆ ವಿಶ್ವಾಸವಿಲ್ಲ ಅದಕ್ಕೆ ಇಲ್ಲಿಯವರೆಗೂ ಯಾಕೆ ಘೋಷಣೆ ಮಾಡಿಲ್ಲ,ನಿಮಗೆ ಧೈರ್ಯವಿದ್ದರೆ ಜಿಲ್ಲಾ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಇಡೀ ರಾಜ್ಯದ ಜನ ಕಾಯ್ತಿದ್ದಾರೆ ಚುನಾವಣೆ ನಡೆಸಿ ಎಂದು ಒತ್ತಾಯಿಸಿದರು,,
ಗಾಂಧಿ ಕುಟುಂಬದ ಕುಡಿ ಭಾರತ್ ಜೋಡೋ ಯಾತ್ರೆ ಮಾಡಿದ್ರು, ತುರುವೇಕೆರಿಗೂ ಬಂದಿದ್ದರು,ಎಲ್ಲಾ ಸಮುದಾಯವನ್ನ ಒಗ್ಗೂಡಿಸಲು ಭಾರತ್ ಜೋಡೋ ಯಾತ್ರೆ ಮಾಡಿದ್ದು ಆದರೆ ರಾಜ್ಯ ಸರ್ಕಾರ ಜಾತಿಗಣತೆ ಮಾಡಿ ಜಾತಿ ವಿಷ ಬೀಜ ಬಿತ್ತುತ್ತಿದೆ ಎಂದು ಆರೋಪಿಸಿದರು,,
ಇದೇ ಸಂದರ್ಭದಲ್ಲಿ ತುರುವೇಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಎಂ ಟಿ ಕೃಷ್ಣಪ್ಪ, ಮಾಜಿ ಶಾಸಕರಾದ ಮಸಾಲೆ ಜಯರಾಮ್, ಜೆಡಿಎಸ್ ತಾಲೂಕು ಅಧ್ಯಕ್ಷರಾದ ದೊಡ್ಡೇಗೌಡರು, ಬಿಜೆಪಿ ಮುಖಂಡರ ಶ್ರೀ ಲಕ್ಷ್ಮಿ ನಾರಾಯಣ್, ಚಂದ್ರೇಶ್ ನರಸಿಂಹಮೂರ್ತಿ,ವಿಜಯ್ ಕುಮಾರ್, ಕೊಂಡಜ್ಜಿ ವಿಶ್ವಣ್ಣ ಸೇರಿದಂತೆ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಕೂಟದ ಪ್ರಮುಖ ಮುಖಂಡರು ಸೇರಿದಂತೆ ಸಹಸ್ರಾರು ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗಿಯಾಗಿದ್ದರು,,
ವರದಿ : ನರಸಿಂಹರಾಜು