ಡಾ.ರಾಜ್‌ಕುಮಾರ್ ( Dr. Rajkumar) ಅವರ 95 ನೇ ಹುಟ್ಟುಹಬ್ಬ (Birthday) ಇಂದು. ಅವರ ಅಭಿಮಾನಿಗಳು ಡಾ.ರಾಜ್ ಅವರ 95 ನೇ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿಸಲು ಹಲವಾರು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ.
ಎಂದಿನತೆ ಈ ಬಾರಿಯೂ ಕರ್ನಾಟಕ ಸರ್ಕಾರ ಮತ್ತು ಡಾ.ರಾಜ್‌ಕುಮಾರ್ ಸ್ಮಾರಕ ಟ್ರಸ್ಟ್ ಪ್ರತಿ ವರ್ಷದಂತೆ ಈ ವರ್ಷವೂ ನಾನಾ ರೀತಿಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕಂಠೀರವ ಸ್ಟುಡಿಯೋಗೆ ಇಂದು ಬೆಳಿಗ್ಗೆ 10 ಗಂಟೆಗೆ ಕುಟುಂಬಸ್ಥರು ಆಗಮಿಸಲಿದ್ದಾರೆ. ಸಾಕಷ್ಟು ಅಭೀಮಾನಿಗಳು ಸೇರುವ ನಿರೀಕ್ಷೆಯಿದೆ.

ಬೆಳಗ್ಗೆ ಡಾ.ರಾಜ್ ಕುಟುಂಬಸ್ಥರು ಸ್ನಾರಕಕ್ಕೆ ಆಗಮಿಸಿ ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಲಿದ್ದಾರೆ. ರಾಘವೇಂದ್ರ ರಾಜ್ ಕುಮಾರ್, ಮಕ್ಕಳು ಮತ್ತು ಮೊಮ್ಮಕ್ಕಳು ಸೇರಿದಂತೆ ಕುಟುಂಬಸ್ಥರು ಪೂಜೆಯಲ್ಲಿ ಭಾಗಿಯಾಗಲಿದ್ದಾರೆ.
ಇಂದು ರಾಜ್ಯದ್ಯಂತ ಅಭಿಮಾನಿಗಳು ಅನಾಥಾಶ್ರಮ ವೃದ್ದಾಶ್ರಮಗಳಿಗೆ ಅನ್ನ ಸಂತರ್ಪನೆ, ರಕ್ತದಾನ ಶಿಬಿರಗಲನ್ನು ಏರ್ಪಡಿಸಿದ್ದಾರೆ. ಡಾ.ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಹೆಸರಿನಲ್ಲಿ ಇಂದು ಸಂಜೆ ಸಂಗೀತ ಕಾರ್ಯಕ್ರಮಗಳು ಅಲ್ಲಲ್ಲಿ ನಡೆಯಲಿವೆ.

ಪ್ರತಿ ವರ್ಷದಂತೆ ಈ ಸಲವೂ ಡಾ.ರಾಜ್ ಪೂಣ್ಯಭೂಮಿ ಸ್ಥಳದಲ್ಲಿ ಅಭಿಮಾನಿಗಳು ರಕ್ತದಾನ ಶಿಬಿರ, ಕಣ್ಣುದಾನ ಶಿಬಿರ, ಅನ್ನ ಸಂತರ್ಪಣೆ ಸೇರಿದಂತೆ ಹಲವು ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಳ್ಳುತ್ತಿದಾರೆ. ಬೆಳಗ್ಗೆಯಿಂದಲೇ ಈ ಎಲ್ಲ ಕೆಲಸಗಳು ಕಂಠೀರವ ಸ್ಟುಡಿಯೋದ ಆವರಣದಲ್ಲೇ ಶುರುವಾಗಲಿದೆ.