ಬೆಂಗಳೂರು : ಕುಡಿದ ನಶೆಯಲ್ಲಿ ಚರಂಡಿಗೆ ಬಿದ್ದು ವ್ಯಕ್ತಿ ಸಾವನ್ನಪ್ಪಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ನಶೆಯಲ್ಲಿ ತೇಲಾಡುತ್ತಾ ಚರಂಡಿಗೆ ಬೀಳುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕುಡಿದು ತೇಲಾಡುತ್ತಾ ಬರುತ್ತಿರೊ ವ್ಯಕ್ತಿ.. ನಿಂತಿರೊ ವಾಹನದ ಪಕ್ಕ ಮೂರ್ತ ವಿಸರ್ಜನೆಗೆ ಹೋದ ಅಷ್ಟೆ.. ಮುಂದೆ ಸಿಕ್ಕಿದ್ದು ಹೆಣವಾಗಿ.. ಹೌದು, ಬೆಂಗಳೂರಿನ ನೆಲಮಂಗಲದ ಲಕ್ಷ್ಮಿಪುರದ ನಿವಾಸಿ ಹರೀಶ್ ನಿನ್ನೆ ರಾತ್ರಿ ತನ್ನ ಚಿಕ್ಕಮ್ಮನ ಮನೆಗೆ ತೆರಳಬೇಕಿತ್ತು.
ಗಾರೆ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಹರೀಶ್, ರಾತ್ರಿ ಊಟ ತೆಗೆದುಕೊಂಡು ತನ್ನ ಮನೆಗೆ ಹೊರಟಿದ್ದ.. ಈ ವೇಳೆ ರಸ್ತೆಯ ಪಕ್ಕದಲ್ಲಿನ ಚರಂಡಿ ಕಾಮಗಾರಿಗಾಗಿ ತಾತ್ಕಾಲಿಕ ತಡೆಗೊಡೆ ಹಾಕಲಾಗುತ್ತಿತ್ತು.. ಆದ್ರೆ ಕೆಲಸ ಪೂರ್ತಿ ಆಗದ ಜಾಗದ ಬಳಿ ಮೂರ್ತ ವಿಸರ್ಜನೆಗೆ ಹೋಗಿದ್ದಾನೆ. ಆಯತಪ್ಪಿ ಚರಂಡಿಯಲ್ಲಿ ಬಿದ್ದು ಹೋಗಿದ್ದಾನೆ.. ಬೆಳಗ್ಗೆ ಜನ ನೋಡಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ..

ಕಳೆದ ಆರು ತಿಂಗಳ ಹಿಂದೆ ಹರೀಶ್ ಮನೆ ಬಿಟ್ಟು ಗಾರೆ ಕೆಲಸ ಮಾಡ್ತಿದ್ದ.. ಕುಡಿತದ ಚಟ ಬಿಡಿಸಲು ರಿಅಬಿಲಿಟಿ ಸೆಂಟರ್ ಗೆ ಸೇರಿಸಲಾಗಿತ್ತು, ಅಲ್ಲಿಂದ ಬಂದು ಸ್ವಲ್ಪ ದಿನ ಮನೆಯಲ್ಲಿದ್ದ.. ಬಳಿಕ ವಾರದ ಹಿಂದೆ ಕೆಲಸಕ್ಕೆ ಸೇರಿದ್ದ, ಮೊನ್ನೆ ದಾರಿಯಲ್ಲಿ ಕಾಣಿಸಿಕೊಂಡಿದ್ದ ಮನೆಗೆ ಬರುವಂತೆ ಹೇಳಿದ್ದಾಗೆ ಮೃತ ಹರೀಶ್ ಚಿಕ್ಕಮ್ಮ ಆದಿಲಕ್ಷ್ಮೀ ತಿಳಿಸಿದ್ದಾರೆ..
ಹರೀಶ್ ಮೃತಪಡುವುದಕ್ಕೂ ಮೊದಲು ತೇಲಾಡಿಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.. ಸದ್ಯಕ್ಕೆ ವಿದ್ಯಾರಣ್ಯಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ..