ಸ್ಯಾಂಡಲ್ವುಡ್ನಲ್ಲಿ ವಿಚ್ಛೇದನಗಳ ಪ್ರಕರಣಗಳು ಹೆಚ್ಚಾಗುತಿವೆ. ಇತ್ತಿಚಿನ ದಿನಗಳಲ್ಲಿ ಮೊದಲು ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ವಿಚ್ಛೇದನೆ ಪಡೆದುಕೊಂಡಿದ್ದಾರೆ. ಬಳಿಕ ದೊಡ್ಮನೆ ಕುಡಿ ಯುವ ಮತ್ತು ಶ್ರೀದೇವಿ ವಿಚ್ಛೇದನ ವಿಚಾರ ಚರ್ಚೆ ಆಯಿತು. ಇದೀಗ ಸ್ಯಾಂಡಲ್‌ವುಡ್‌ನ ಮತ್ತೊಂದು ಜೋಡಿ ಮಧ್ಯೆಯು ವಿಚ್ಛೇದನ ವಿಚಾರ ಚರ್ಚೆಗೆ ಬಂದಿದೆ.
ಹೌದು, ಈಗ ದುನಿಯಾ ವಿಜಯ್ (Duniya Vijay) ಹಾಗೂ ನಾಗರತ್ನ (Nagaratna) ವಿಚ್ಛೇದನ ವಿಚಾರ ಚರ್ಚೆಗೆ ಬಂದಿದೆ. ಇಂದು ಈ ಪ್ರಕರಣದಲ್ಲಿ ತೀರ್ಪು ಹೊರಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ದುನಿಯಾ ವಿಜಯ್ ಹಾಗೂ ನಾಗರತ್ನ ಅವರ ಮಧ್ಯೆ ವೈಮನಸ್ಸು ಮೂಡಿತ್ತು. ಹೀಗಾಗಿ 2018ರಲ್ಲಿ ವಿಜಯ್ ಅವರು ವಿಚ್ಛೇದನ ಕೋರಿ ಅರ್ಜಿ ಸಲ್ಲಿಕೆ ಮಾಡಿದ್ದರು. ಮಕ್ಕಳ ಜವಾಬ್ದಾರಿಯನ್ನು ತೆಗೆದುಕೊಳ್ಳಲು ವಿಜಯ್ ರೆಡಿ ಇದ್ದಾರೆ. ಇಷ್ಟೇ ಅಲ್ಲ ಪತ್ನಿಗೆ ಜೀವನಾಂಶ ಕೂಡ ಕೊಡಲು ರೆಡಿ ಇದ್ದಾರೆ. ಆದರೆ, ಕೋರ್ಟ್ಗೆ ಹೋದಾಗಲೆಲ್ಲ ನಾಗರತ್ನ ಅವರು ಪತಿಯನ್ನು ಬಿಡಲು ಒಪ್ಪಿಲ್ಲ. ಹೀಗಾಗಿ ಪ್ರಕರಣ ಮುಂದೂಡುತ್ತಲೇ ಬರುತ್ತೊದೆ. ಇಂದು ಪ್ರಕರಣದ ತೀರ್ಪು ಹೊರ ಬರಲಿದೆ.


