ಚಿಕ್ಕಮಗಳೂರು: ಕಳೆದ 15 ದಿನಗಳಿಂದ ಚಾರ್ಮಾಡಿ ಘಾಟಿಯಲ್ಲಿ (Charmadi Ghat) ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಚಾರ್ಮಾಡಿ ಘಾಟಿಯಲ್ಲಿ ಐದಾರು ಕಡೆ ಭೂಮಿ ಬಿರುಕು ಬಿಟ್ಟಿದ್ದು ರಸ್ತೆಯ ತಡೆಗೋಡೆಗಳು ಕೂಡ ಸಹ ಬಿರುಕು ಬಿಟ್ಟಿವೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಗೆ (Charmadi Ghat) ಆಯಸ್ಸು ಇದೆಯೋ ಅಥವಾ ಇಲ್ಲವೋ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಯಾಕೆಂದರೆ ಮುಂಗಾರು ಮಳೆ ಇಡೀ ಮಲೆನಾಡಿಗೆ ಕೈಕೊಟ್ಟಿದ್ದರು ಕೂಡ ಚಾರ್ಮಾಡಿ ಘಾಟಿಯಲ್ಲಿ ಮಳೆಗೆ ಕೊರತೆ ಉಂಟಾಗಿರಲಿಲ್ಲ.
ಚಾರ್ಮಾಡಿ ಘಾಟಿ ಬದುಕಿನ ದಾರಿಯಾಗಿದೆ. ಈ ಮಾರ್ಗದಲ್ಲಿ ನಿತ್ಯ ಹತ್ತಾರು ಅಂಬುಲೆನ್ಸ್ ಗಳು ರೋಗಿಗಳನ್ನ ಹೊತ್ತು ಉಡುಪಿ ಹಾಗೂ ಮಂಗಳೂರಿಗೆ ಹೋಗುತ್ತವೆ. ಇದನ್ನೂ ಓದಿ: ಬೇಬಿಬೆಟ್ಟದಲ್ಲಿ ಟ್ರಯಲ್ ಬ್ಲಾಸ್ಟ್- ಜೆಡಿಎಸ್ಗೆ ಸಿಕ್ತು ಸರ್ಕಾರ ವಿರುದ್ಧ ಹೊಸ ಅಸ್ತ್ರ

ಹಣ್ಣು-ತರಕಾರಿಗಳು ಗಾಡಿಗಳು, ಓದಲು ಸಲುವಾಗಿ ಮಕ್ಕಳು ಕೂಡ ಈ ಮಾರ್ಗವನ್ನೇ ಆಶ್ರಯಿಸಿದ್ದಾರೆ. ಆದರೆ ವರ್ಷದಿಂದ ವರ್ಷಕ್ಕೆ ಚಾರ್ಮಾಡಿ ತನ್ನ ಸಾಮಥ್ರ್ಯವನ್ನು ಕಳೆದುಕೊಳ್ಳುತ್ತಿದೆಯಾ ಎಂಬ ಅನುಮಾನ ದಟ್ಟವಾಗಿ ಕಾಡುತ್ತಿದೆ. ಇದನ್ನೂ ಓದಿ: ರಾಜ್ಯದಲ್ಲಿ ಡೆಂಘೀ ರಣಕೇಕೆ: ಸಿಲಿಕಾನ್ ಸಿಟಿಯಲ್ಲಿ ಡೆಂಘೀಗೆ ಬಾಲಕ ಬಲಿ
15 ದಿನಗಳ ನಿರಂತರ ಮಳೆಗೆ ಚಾರ್ಮಾಡಿ ಘಾಟಿಯಲ್ಲಿ ಭೂಮಿ ಬಾಯ್ಬಿಟ್ಟಿದ್ದು ತಡೆಗೋಡೆಗಳು ಕೂಡ ಬಿರುಕು ಬಿಟ್ಟಿವೆ. ಇದರಿಂದ ಈ ಮಾರ್ಗದಲ್ಲಿ ಸಂಚಾರ ಮಾಡುವ ಪ್ರಯಾಣಿಕರು ಆತಂಕದಲ್ಲಿ ಪ್ರಯಾಣ ಮಾಡುವಂತಾಗಿದೆ. ಇದನ್ನೂ ಓದಿ: ಝಿಕಾ ವೈರಸ್ಗೆ ಮೊದಲ ಬಲಿ