ಬೆಂಗಳೂರು : ಮುಡಾ ಕಚೇರಿ ಮೇಲೆ ಇಡಿ ಅಧಿಕಾರಿಗಳ ದಾಳಿ ರಾಜಕೀಯ ಪ್ರೇರಿತ, ಈಗಾಗಲೇ ಲೋಕಾಯುಕ್ತರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಜಾರಿ ನಿರ್ದೇಶನಾಲಯದ ದಾಳಿ ನಡೆದಿದೆ ಎಂದು ಕಾಂಗ್ರೆಸ್ ಮಾಜಿ ಸಂಸದ ಡಿಕೆ ಸುರೇಶ್ ಪ್ರತಿಕ್ರಿಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 10-15 ದಿನದ ಹಿಂದೆ ಇಡಿ ಅಧಿಕಾರಿಗಳು ಕೇಸ್ ದಾಖಲಿಸಿದ್ದರು. ಕೇಸ್ ದಾಖಲಾದ ಹಿನ್ನೆಲೆಯಲ್ಲಿ ದಾಳಿ ಸಾಮಾನ್ಯ. ಮುಡಾ ಕೇಸ್ನಲ್ಲಿ ಯಾವುದೇ ಹಣಕಾಸು ವಹಿವಾಟು ನಡೆದಿಲ್ಲ. ಈ ಪ್ರಕರಣದಲ್ಲಿ ಏನೂ ಇಲ್ಲ ಎಂಬುದು ಅವರಿಗೆ ಗೊತ್ತಾಗಲಿದೆ.
ಲೋಕಾಯುಕ್ತ ಪ್ರವೇಶಕ್ಕೆ ಅವಕಾಶವಿದೆ, ಸತ್ಯಾಂಶ ಹೊರ ಬರಬೇಕು. ಇದೊಂದು ರಾಜಕೀಯ ಪ್ರೇರಿತ ಪ್ರಕರಣ ಎಂದರು.ಮುಡಾ ಕುರಿತ ಆರೋಪಗಳಲ್ಲಿ ಯಾವುದೇ ಸತ್ಯಾಂಶ ಇಲ್ಲ. ಕೊನೆಗೆ ಅವರಿಗೂ (ಇಡಿ) ಅರಿವಾಗುತ್ತದೆ ಎಂದು ಡಿಕೆ ಸುರೇಶ್ ಹೇಳಿದರು.
ಕೇಂದ್ರ ಸರ್ಕಾರ ಸಿಬಿಐ, ಜಾರಿ ನಿರ್ದೇಶನಾಲಯಗಳನ್ನು ವಿರೋಧ ಪಕ್ಷಗಳ ವಿರುದ್ಧ ಅಸ್ತ್ರವಾಗಿ ಬಳಕೆ ಮಾಡುತ್ತಿದೆ. ಕಳೆದ 10 ವರ್ಷಗಳಿಂದಲೂ ಹಲವಾರು ದಾಳಿ ಹಾಗೂ ಪ್ರಕರಣಗಳು ಸಾಮಾನ್ಯವಾಗಿದೆ. ಇತ್ತೀಚೆಗೆ ನಾಗೇಂದ್ರರನ್ನು ಇಡಿಯವರು ಬಂಧಿಸಿದ್ದರು. ಕೊನೆಗೆ ಒಂದಲ್ಲ ಒಂದು ದಿನ ಅವರಿಗೆ ಸತ್ಯ ಅರಿವಾಗುತ್ತದೆ ಎಂದು ಹೇಳಿದರು.