ಭ್ರಷ್ಟರ ಹೆಡೆಮುರಿ ಕಟ್ಟೊದು ಅಂದ್ರೆ ಇದೇನೇ ನೋಡಿ .. ಯಾವುದೇ ಒಬ್ಬ ಅಧಿಕಾರಿ ಇರ್ಲಿ ದಾಳಿ ಮಾಡಿದ್ರೆ ಮಾತ್ರ ಮನೆಯಿಂದ ಕಂತೆ ಕಂತೆ ನೋಟುಗಳು ಮತ್ತು ರಾಶಿ-ರಾಶಿ ಚಿನ್ನಾಭರಣಗಳು ಹೊರಗೆ ಬರತ್ತೆ .. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತಾರಲ್ಲ ಇದೆ ನೋಡಿ.
ಇಂದು ಬೆಂಗಳೂರು, ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಆನೇಕಲ್, ಗದಗ, ಧಾರವಾಡ, ಕಲಬುರಗಿ ಜಿಲ್ಲೆಯ ಎಂಟು ಮಂದಿ ಸರ್ಕಾರಿ ಅಧಿಕಾರಿಗಳ ನಿವಾಸ ಕಚೇರಿಗಳ ಮೇಲೆ ಲೋಕಾಯುಕ್ತ ದಾಳಿ ನಡೆಸಿದೆ.
ಬಿಬಿಎಂಪಿ ಎಕ್ಸಿಕ್ಯೂಟಿವ್ ಎಂಜಿನಿಯರ್ ಪ್ರಕಾಶ್ ಅವರ ಕಚೇರಿ, ಮನೆ ಸೇರಿದಂತೆ ನಗರದ ಒಟ್ಟು ಐದು ಕಡೆಗಳಲ್ಲಿ ದಾಳಿ ನಡೆಸಿದ್ದಾರೆ. ಕಲಬುರಗಿಯಲ್ಲೂ ಲೋಕಾಯುಕ್ತ ಅಧಿಕಾರಿಗಳು RDPR ಇಲಾಖೆಯ EE ಮನೆ ಮೇಲೆ ರೇಡ್ ಮಾಡಿದ್ದಾರೆ. ಇನ್ನೂ ನಾಲ್ಕು ದಿನಗಳಲ್ಲಿ PRE ವಿಭಾಗದ ಇಇ ಮಲ್ಲಿಕಾರ್ಜುನ ಅಲಿಪುರ ನಿವೃತಿಯಾಗಲಿದ್ದಾರೆ.
ಅವರ ಬೆಂಗಳೂರಿನ ಮನೆ ಹಾಗು ಕಲಬುರಗಿ ನಗರದ ಜೇವರ್ಗಿ ರಸ್ತೆಯಲ್ಲಿರುವ ನಿವಾಸ, ಕಚೇರಿ ಮೇಲೆ ಲೋಕಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.ಗದಗ ಟೌನ್ ಸಿಪಿಐ ಡಿ.ಬಿ ಪಾಟೀಲ್ ಅವರ ಗದಗ ನಗರದ ಶಿವಾನಂದ ನಗರದಲ್ಲಿರುವ, ಡಿ.ಬಿ ಪಾಟೀಲ್ ಮನೆ ಮೇಲೆ ದಾಳಿ ನಡೆಸಿದ್ದಾರೆ.
ಅಕ್ರಮ ಆಸ್ತಿಗಳಿಕೆ ಆರೋಪದ ಹಿನ್ನಲೆ, ಲೋಕಾಯುಕ್ತ ಡಿಎಸ್ಪಿ ಪುಷ್ಪಲತಾ ಪಿಎಸ್ ಪಾಟೀಲ್ ನೇತೃತ್ವದಲ್ಲಿ ಡಿ.ಬಿ ಪಾಟೀಲ್ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಲಾಗಿದ್ದು ಸುಮಾರು 3 ಲಕ್ಷ ರೂಪಾಯಿಗೂ ಹೆಚ್ಚು ಹಣ ಪತ್ತೆಯಾಗಿವೆ. ಐದು ನೂರು, ಎರಡು ನೂರು ಮುಖ ಬೆಲೆಯ ನೋಟುಗಳು ಪತ್ತೆಯಾಗಿವೆ. ಒಂದು ಬೆಳ್ಳಿ ಕಾಯಿನ್ ಸೇರಿದಂತೆ ಚಿಲ್ಲರೆ ಹಣವನ್ನು ಲೋಕಾಯುಕ್ತ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಬೆಳಗಾವಿಯ ರಾಮತೀರ್ಥ ನಗರದಲ್ಲಿರುವ KNNL ಧಾರವಾಡ ಮುಖ್ಯ ಇಂಜಿನಿಯರ್ ಆಗಿರುವ ಅಶೋಕ ವಸಂದ್ ಮನೆ ಮೇಲು ಲೋಕಾಯುಕ್ತ ಅಧಿಕಾರಿಗಳು ದಾಳಿ ಮಾಡಿದ ಸಮಯದಲ್ಲಿ ನೆಕ್ಲೆಸ್, ಪಾಟ್ಲಿ, ಬಿಲ್ವರ್ ಸೇರಿ ಅರ್ಧ ಕೆಜಿಗೂ ಅಧಿಕ ವಿವಿಧ ಚಿನ್ನಭಾರಣ ಪತ್ತೆಯಾಗಿವೆ. ಬೆಳ್ಳಿ ಪಾತ್ರೆ, ಬೆಳ್ಳಿ ಕೊಡ, ಬೆಳ್ಳಿಯ ದೀಪಸ್ತಂಭ, ಆರತಿ ತಟ್ಟೆ ಸೇರಿ ಎರಡು ಕೆಜಿ ಬೆಳ್ಳಿ ಆಭರಣ ಪತ್ತೆಯಾಗಿವೆ.

